AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ.23 ರಿಂದ ದುಲೀಪ್ ಟ್ರೋಫಿ ಆರಂಭ; ದೇಶೀ ಟೂರ್ನಿಯ ಪೂರ್ಣ ವಿವರ ಇಲ್ಲಿದೆ

Duleep Trophy 2026: ದುಲೀಪ್ ಟ್ರೋಫಿ 2026 ಆಗಸ್ಟ್ 23 ರಿಂದ ಆರಂಭವಾಗಲಿದೆ, ಇದು ಭಾರತೀಯ ದೇಶೀಯ ಕ್ರಿಕೆಟ್‌ನ ಹೊಸ ಸೀಸನ್‌ಗೆ ನಾಂದಿ ಹಾಡಲಿದೆ. ಬೆಂಗಳೂರಿನಲ್ಲಿ ಕ್ವಾರ್ಟರ್-ಫೈನಲ್ ಪಂದ್ಯಗಳು ನಡೆಯಲಿದ್ದು, ಚೆನ್ನೈನಲ್ಲಿ ಫೈನಲ್ ನಡೆಯಲಿದೆ. ರಜತ್ ಪಾಟಿದಾರ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಸೇರಿದಂತೆ ಆರು ವಲಯಗಳ ನಾಯಕರು ತಂಡಗಳನ್ನು ಮುನ್ನಡೆಸಲಿದ್ದಾರೆ. ಈ ಪ್ರಮುಖ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ಮಾಹಿತಿ ಇಲ್ಲಿದೆ.

ಆ.23 ರಿಂದ ದುಲೀಪ್ ಟ್ರೋಫಿ ಆರಂಭ; ದೇಶೀ ಟೂರ್ನಿಯ ಪೂರ್ಣ ವಿವರ ಇಲ್ಲಿದೆ
Duleep Trophy 2026
ಪೃಥ್ವಿಶಂಕರ
|

Updated on: Aug 22, 2026 | 8:08 PM

Share

ದುಲೀಪ್ ಟ್ರೋಫಿಯೊಂದಿಗೆ (Duleep Trophy 2026) ಭಾರತೀಯ ದೇಶೀಯ ಕ್ರಿಕೆಟ್‌ನ ಹೊಸ ಸೀಸನ್ ಪ್ರಾರಂಭವಾಗಲಿದೆ. ಆಗಸ್ಟ್ 23 ರಿಂದ ಆರಂಭವಾಗಲಿರುವ ಈ ಟೂರ್ನಿಯ ಮೊದಲ ದಿನದಂದು ಎರಡು ಕ್ವಾರ್ಟರ್-ಫೈನಲ್ ಪಂದ್ಯಗಳು ನಡೆಯಲಿವೆ. ಇದರಲ್ಲಿ ಪೂರ್ವ ವಲಯ ತಂಡವು ಈಶಾನ್ಯ ವಲಯ ತಂಡವನ್ನು ಎದುರಿಸಿದರೆ, ಇತ್ತ ಉತ್ತರ ವಲಯವು ಪಶ್ಚಿಮ ವಲಯವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆಯಲಿವೆ.

ಯಾರ್ಯಾರ ನಡುವೆ ಕ್ವಾರ್ಟರ್ ಫೈನಲ್ ಪಂದ್ಯ?

ಕಳೆದ ಆವೃತ್ತಿಯ ಚಾಂಪಿಯನ್‌ಗಳಾದ ಕೇಂದ್ರ ವಲಯ ಮತ್ತು ರನ್ನರ್-ಅಪ್ ದಕ್ಷಿಣ ವಲಯವು ಸೆಮಿಫೈನಲ್‌ಗೆ ನೇರ ಪ್ರವೇಶವನ್ನು ಪಡೆದುಕೊಂಡಿವೆ. ಹೀಗಾಗಿ ಈ ಕ್ವಾರ್ಟರ್-ಫೈನಲ್‌ ಪಂದ್ಯದಲ್ಲಿ ಗೆದ್ದ ತಂಡಗಳು ಸೆಮಿಫೈನಲ್‌ನಲ್ಲಿ ಈ ಎರಡೂ ತಂಡಗಳನ್ನು ಎದುರಿಸಲಿವೆ. ಫೈನಲ್ ಪಂದ್ಯವು ಸೆಪ್ಟೆಂಬರ್ 6 ರಿಂದ 10 ರವರೆಗೆ ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರು ತಂಡಗಳ ನಾಯಕರು

ಈ ವರ್ಷ, ದುಲೀಪ್ ಟ್ರೋಫಿಯಲ್ಲಿ ಆರು ವಲಯಗಳನ್ನು ವಿಭಿನ್ನ ಆಟಗಾರರು ಮುನ್ನಡೆಸಲಿದ್ದಾರೆ. ಉತ್ತರ ವಲಯವನ್ನು ಕನ್ಹಯ್ಯಾ ವಾಧವನ್, ಪೂರ್ವ ವಲಯವನ್ನು ಇಶಾನ್ ಕಿಶನ್, ಪಶ್ಚಿಮ ವಲಯವನ್ನು ರುತುರಾಜ್ ಗಾಯಕ್ವಾಡ್, ದಕ್ಷಿಣ ವಲಯವನ್ನು ತಿಲಕ್ ವರ್ಮಾ, ಮಧ್ಯ ವಲಯವನ್ನು ರಜತ್ ಪಾಟಿದಾರ್ ಮತ್ತು ಈಶಾನ್ಯ ವಲಯವನ್ನು ರೋಂಗ್ಸೆನ್ ಜೊನಾಥನ್ ಮುನ್ನಡೆಸಲಿದ್ದಾರೆ.

ಪಂದ್ಯಗಳು ಯಾವಾಗ ಮತ್ತು ಎಲ್ಲಿ ನಡೆಯಲಿವೆ?

ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ಎರಡು ಮೈದಾನಗಳಲ್ಲಿ ನಡೆಯಲಿವೆ. ಕ್ವಾರ್ಟರ್ ಫೈನಲ್‌ ಪಂದ್ಯಗಳು ಆಗಸ್ಟ್ 23 ರಿಂದ 26 ರವರೆಗೆ ನಡೆದರೆ, ಸೆಮಿಫೈನಲ್‌ ಪಂದ್ಯಗಳು ಆಗಸ್ಟ್ 30 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿವೆ. ಫೈನಲ್ ಪಂದ್ಯವು ಸೆಪ್ಟೆಂಬರ್ 6 ರಿಂದ 10 ರವರೆಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ಗಳು ನಾಲ್ಕು ದಿನಗಳ ಪಂದ್ಯಗಳಾಗಿದ್ದರೆ, ಫೈನಲ್ ಐದು ದಿನಗಳ ಪಂದ್ಯವಾಗಿರುತ್ತದೆ. ಎಲ್ಲಾ ಪಂದ್ಯಗಳು ಸ್ಥಳೀಯ ಸಮಯ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗುತ್ತವೆ.

Duleep Trophy 2026: ದುಲೀಪ್ ಟ್ರೋಫಿ ಫೈನಲ್ ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರ

6 ತಂಡಗಳು ಇಂತಿವೆ

ಕೇಂದ್ರ ವಲಯ ತಂಡ: ರಜತ್ ಪಾಟಿದಾರ್ (ನಾಯಕ), ರಿಂಕು ಸಿಂಗ್ (ಉಪನಾಯಕ), ಆರ್ಯನ್ ಜುಯಲ್ (ವಿಕೆಟ್ ಕೀಪರ್), ಸರನ್ಶಾ ಜೈನ್, ಅಮನ್ ಮೊಖಾಡೆ, ಕುನಾಲ್ ಚಾಂಡೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ಸಿಂಗ್ ರಾಥೋಡ್, ಯಶ್ ರಾಥೋಡ್, ಪರ್ವ್ ರಾಥೋಡ್, ಯಶ್ ಠಾಕೂರ್, ನಚಿಕೇತ್ ಭೂತೆ,

ಸ್ಟ್ಯಾಂಡ್‌ಬೈ ಆಟಗಾರರು: ಅಮನದೀಪ್ ಖರೆ, ಮಯಾಂಕ್ ಮಿಶ್ರಾ, ಸೌರಭ್ ರಾವತ್, ಭಾರ್ಗವ್ ಮೆರಾಯ್, ಕುನಾಲ್ ಯಾದವ್, ಕುಮಾರ್ ಕಾರ್ತಿಕೇಯ.

ಪೂರ್ವ ವಲಯ ತಂಡ: ಅಭಿಮನ್ಯು ಈಶ್ವರನ್, ಸುದೀಪ್ ಘರಾಮಿ, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್, ಸೂರಜ್ ಜೈಸ್ವಾಲ್, ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ವಿರಾಟ್ ಸಿಂಗ್, ಕುಮಾರ್ ಕುಶಾಗ್ರ, ಶಿಖರ್ ಮೋಹನ್, ಸುಬ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಅನುಕೂಲ್ ರಾಯ್ ಮತ್ತು ಡೆನಿಶ್ ದಾಸ್.

ಸ್ಟ್ಯಾಂಡ್‌ಬೈ ಆಟಗಾರರು: ಆಯುಷ್ ಲೋಹರುಕ, ಶ್ರೀದಂ ಪಾಲ್, ಸಂಬಿತ್ ಎಸ್ ಬರಾಲ್, ಶರಣದೀಪ್ ಸಿಂಗ್ ಮತ್ತು ಸ್ವಸ್ತಿಕ್ ಸಮಲ್.

ಪಶ್ಚಿಮ ವಲಯ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಶಮ್ಸ್ ಮುಲಾನಿ, ಪೃಥ್ವಿ ಶಾ, ಸರ್ಫರಾಝ್ ಖಾನ್, ಮುಶೀರ್ ಖಾನ್, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಹರ್ವಿಕ್ ದೇಸಾಯಿ, ಉರ್ವಿಲ್ ಪಟೇಲ್, ಶಿವಾಲಿಕ್ ಶರ್ಮಾ, ಸಿದ್ಧಾರ್ಥ್ ದೇಸಾಯಿ, ಅತಿತ್ ಶೇಠ್, ಮುಕೇಶ್ ಚೌಧರಿ, ಜೇಮೀತ್ ಪಟೇಲ್.

ದಕ್ಷಿಣ ವಲಯ ತಂಡ: ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ, ಅಭಿನವ್ ತೇಜ್ರಾನಾ, ಶೇಖ್ ರಶೀದ್, ಕೆ. ಹಿಮತೇಜ, ಸ್ಮರಣ್ ರವಿಚಂದ್ರನ್, ಎನ್. ಜಗದೀಶನ್, ಕರುಣ್ ನಾಯರ್, ಟಿ. ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಸಾಯಿ ತೇಜ, ಟಿ. ವಿಜಯ್, ವಿದ್ವತ್ ಕಾವೇರಪ್ಪ, ಅಮನ್ ಖಾನ್.

ಉತ್ತರ ವಲಯ ತಂಡ: ಕನ್ಹಯ್ಯಾ ವಾಧವನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಂಬೋಜ್, ಯುಧ್ವೀರ್ ಸಿಂಗ್, ನಿಖಿಲ್ ಕಶ್ಯಪ್.

ಈಶಾನ್ಯ ವಲಯ ತಂಡ: ಜೊನಾಥನ್ ರೊಂಗ್‌ಸೆನ್ (ನಾಯಕ), ಬಿಶ್ವರ್ಜಿತ್ ಸಿಂಗ್ ಕೊಂಥೌಜಮ್ (ಉಪನಾಯಕ), ಟೆಚಿ ನೇರಿ, ಪ್ರಿಯೋಜಿತ್, ರೊನಾಲ್ಡ್ ಮೈಟೆಯಿ, ಜೋತಿನ್ ಸಿಂಗ್ ಫೀರೋಯಿಜಮ್, ಸುಭಾಯಂಗ್‌ಡೊ ಕಿಶನ್, ಆಕಾಶ್ ಕುಮಾರ್ ಚೌಧರಿ, ಜೋಸೆಫ್ ಲಾಲ್‌ಥಾನ್‌ಖುಮಾ, ಲಾಲ್ರೆಂಪೌಯಾ, ಇಮ್ಲಿವಾಟಿ ಲೆಮ್ಟೂರ್, ವಿನೋ ಜಿ ಝಿಮೋಮಿ, ರಾಬಿನ್ ಲಿಂಬೂ, ಆಶಿಶ್ ಥಾಪಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್