AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕೈಯಲ್ಲಿ ಎರಡು ಮೊಣಕೈಗಳಿವೆ, ಅದಕ್ಕೆ ಹಿಂಗೆ ಬೌಲಿಂಗ್ ಮಾಡ್ತೀನಿ!

India vs Pakistan: ಟಿ20 ವಿಶ್ವಕಪ್​​ನ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 15 ರಂದು ನಡೆಯಲಿದೆ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಸೂಪರ್-8 ಹಂತಕ್ಕೇರಲಿದೆ. ಹೀಗಾಗಿ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು.

ನನ್ನ ಕೈಯಲ್ಲಿ ಎರಡು ಮೊಣಕೈಗಳಿವೆ, ಅದಕ್ಕೆ ಹಿಂಗೆ ಬೌಲಿಂಗ್ ಮಾಡ್ತೀನಿ!
Usman Tariq
ಝಾಹಿರ್ ಯೂಸುಫ್
|

Updated on:Feb 14, 2026 | 12:31 PM

Share

ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಸಖತ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಮೊಣಕೈ ವಿಚಾರದಿಂದ. ಅಂದರೆ ನನ್ನ ಬಲಗೈನಲ್ಲಿ ಎರಡು ಮೊಣಕೈಗಳಿವೆ ಎಂಬ ವಿಚಾರವನ್ನು ಉಸ್ಮಾನ್ ತಾರಿಖ್ ಬಹಿರಂಗಪಡಿಸಿದ್ದಾರೆ. ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ವಿಭಿನ್ನವಾಗಿ ಎಂದಿದ್ದಾರೆ.

“ಡಬಲ್ ಎಲ್ಬೋ” (double elbow) ಅಥವಾ ಎರಡು ಮೊಣಕೈಗಳ ವಿಶಿಷ್ಟ ಜೈವಿಕ ರಚನೆಯಿಂದಾಗಿ ಬೌಲಿಂಗ್ ಮಾಡುವಾಗ ನನ್ನ ಕೈ ಬಗ್ಗಿದಂತೆ ಕಾಣುತ್ತದೆ.  ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ನಿಮಗೆ ವಿಭಿನ್ನವಾಗಿ ಕಾಣಿಸುತ್ತಿದೆ ಎಂದು ಉಸ್ಮಾನ್ ತಾರಿಖ್ ಹೇಳಿದ್ದಾರೆ.

ಒಂದೇ ಕೈನಲ್ಲಿ ಎರಡು ಮೊಣಕೈ ಇರುವುದನ್ನು  ವೈದ್ಯಕೀಯವಾಗಿ ಹೈಪರ್-ಮೊಬಿಲಿಟಿ ಅಥವಾ ಡಬಲ್ ಜಾಯಿಂಟ್ ಎನ್ನಲಾಗುತ್ತದೆ. ಇದರಿಂದಾಗಿ ತಮ್ಮ ಕೈಯನ್ನು ಸಂಪೂರ್ಣವಾಗಿ ನೇರಗೊಳಿಸಲು ಸಾಧ್ಯವಿಲ್ಲ ಎಂದು ಉಸ್ಮಾನ್ ಹೇಳಿದ್ದಾರೆ.

ಇತ್ತ ಈ ವಿಚಿತ್ರ ಆಕ್ಷನ್‌ನಿಂದಾಗಿ ಇವರು ಬಾಲ್ ಎಸೆಯುತ್ತಾರೆ (Chucking) ಎಂಬ ಆರೋಪ ಕೇಳಿಬಂದಿತ್ತು. ಆದರೆ ಲಾಹೋರ್‌ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಸಿದ ಬಯೋಮೆಕಾನಿಕಲ್ ಪರೀಕ್ಷೆಯಲ್ಲಿ ಅವರಿಗೆ ಕ್ಲೀನ್ ಚೀಟ್ ನೀಡಲಾಗಿದೆ. ಹೀಗಾಗಿಯೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮುಂದುವರೆದಿದ್ದಾರೆ.

ಮತ್ತೊಂದೆಡೆ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯನ್ನು ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಹೋಲಿಸಲಾಗುತ್ತದೆ. ಇಲ್ಲಿ ಇಬ್ಬರ ತೋಳು ಹುಟ್ಟಿನಿಂದಲೇ ಸ್ವಲ್ಪ ಬಗ್ಗಿದಂತಿದೆ. ಇದು ಕಾನೂನುಬದ್ಧ 15-ಡಿಗ್ರಿ ಮಿತಿಯೊಳಗಿದೆ ಎಂಬುದು ಕೂಡ ಸಾಬೀತಾಗಿದೆ.

ಇದಾಗ್ಯೂ ಉಸ್ಮಾನ್ ತಾರಿಖ್ ಚೆಂಡೆಸೆಯುವಾಗ ಕ್ರೀಸ್‌ನಲ್ಲಿ ಒಂದು ಕ್ಷಣ ನಿಂತು ಬಾಲ್ ಎಸೆಯುವ ಅವರ ಶೈಲಿ ಬ್ಯಾಟರ್‌ಗಳ ದಿಕ್ಕು ತಪ್ಪಿಸುತ್ತದೆ. ಈ ಶೈಲಿಯೇ ಈಗ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದೆ.

ಇದೀಗ ಇದೇ ತಂತ್ರವನ್ನು ಟೀಮ್ ಇಂಡಿಯಾ ವಿರುದ್ಧ ಕೂಡ ಪ್ರಯೋಗಿಸಲು ಉಸ್ಮಾನ್ ತಾರಿಖ್ ಪ್ಲ್ಯಾನ್ ರೂಪಿಸಿದ್ದಾರೆ. ಈ  ತಂತ್ರಕ್ಕೆ ಟೀಮ್ ಇಂಡಿಯಾ ಬ್ಯಾಟರ್​ಗಳು ಹೇಗೆ ಪ್ರತ್ಯುತ್ತರ ನೀಡಲಿದ್ದಾರೆ ಎಂಬುದೇ ಈಗ ಕುತೂಹಲ.

ಇದನ್ನೂ ಓದಿ: ಹೀಗಾದಲ್ಲಿ ಟಿ20 ವಿಶ್ವಕಪ್​ನಿಂದ ಆಸ್ಟ್ರೇಲಿಯಾ ಔಟ್..!

ಭಾರತ ಮತ್ತು ಪಾಕಿಸ್ತಾನ್ ಪಂದ್ಯ ಯಾವಾಗ?

ಟಿ20 ವಿಶ್ವಕಪ್​​ನ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 15 ರಂದು ನಡೆಯಲಿದೆ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಸೂಪರ್-8 ಹಂತಕ್ಕೇರಲಿದೆ. ಹೀಗಾಗಿ ಬದ್ಧವೈರಿಗಳ ನಡುವಣ ಕದನದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

Published On - 12:30 pm, Sat, 14 February 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!