IND vs AFG: 25 ಓವರ್‌ಗಳ ಪಂದ್ಯ; ಟಾಸ್ ಗೆದ್ದ ಗಿಲ್, ಟೀಂ ಇಂಡಿಯಾ ಪರ ಇಬ್ಬರ ಪಾದಾರ್ಪಣೆ
India vs Afghanistan ODI: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮಳೆಯಿಂದ ವಿಳಂಬಗೊಂಡು 25 ಓವರ್‌ಗಳಿಗೆ ಸೀಮಿತವಾಯಿತು. ಧರ್ಮಶಾಲಾದಲ್ಲಿ ಟಾಸ್ ಗೆದ್ದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿದರು. ಹರ್ಷ್ ದುಬೆ ಹಾಗೂ ಗುರ್ನೂರ್ ಬ್ರಾರ್ ಅಂತರರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದರು. ಇದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿ ಜೂನ್ 13 ರಿಂದ ಆರಂಭವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಈ ಪಂದ್ಯದ ಟಾಸ್ ವಿಳಂಬವಾಯಿತು. ಅದೃಷ್ಟವಶಾತ್ ಮಳೆ ನಿಂತಿದ್ದು, ಪಂದ್ಯ ಆರಂಭವಾಗಿದೆ. ತಲಾ 25 ಓವರ್‌ಗಳ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಂದರೆ ಉಭಯ ತಂಡಗಳು ತಲಾ 25 ಓವರ್‌ಗಳ ಇನ್ನಿಂಗ್ಸ್ ಆಡಲಿವೆ. ಇನ್ನು ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ (Shubman Gill) ಬೌಲಿಂಗ್ ಆಯ್ದುಕೊಂಡಿದ್ದಾರೆ.
ಟಾಸ್ ಗೆದ್ದ ಟೀಂ ಇಂಡಿಯಾ
ವಾಸ್ತವವಾಗಿ ಈ ಮೊದಲೇ ನಿಗದಿಪಡಿಸಿದಂತೆ ಪಂದ್ಯದ ಟಾಸ್ ಮಧ್ಯಾಹ್ನ 1ಗಂಟೆಗೆ ನಡೆಯಬೇಕಿತ್ತು. ನಂತರ ಪಂದ್ಯ 1:30ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯದ ಟಾಸ್ ಸರಿಯಾದ ಸಮಯಕ್ಕೆ ನಡೆಯಲಿಲ್ಲ. ಅಂತಿಮವಾಗಿ ನಿಂತ ಕಾರಣ ಸಂಜೆ 5:15 ಕ್ಕೆ ಪಂದ್ಯದ ಟಾಸ್ ನಡೆಸಲಾಯಿತು. ಟಾಸ್ ಗೆದ್ದ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡರು. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಟೀಂ ಇಂಡಿಯಾ ಪರ ಇಬ್ಬರು ಆಟಗಾರರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅದರಂತೆ ಹರ್ಷ್ ದುಬೆ ಹಾಗೂ ಗುರ್ನೂರ್ ಬ್ರಾರ್ಗೆ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ.
🚨 Toss Update from Dharamshala 🚨#TeamIndia have won the toss and elected to bowl in the 1️⃣st ODI.
Updates ▶️ https://t.co/lCuohEZYAl #INDvAFG | @IDFCFIRSTBank pic.twitter.com/dFxWa3GRob
— BCCI (@BCCI) June 13, 2026
ಉಭಯ ತಂಡಗಳ ಪ್ಲೇಯಿಂಗ್ 11
ಟೀಂ ಇಂಡಿಯಾ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
Presenting #TeamIndia‘s XI for the 1️⃣st #INDvAFG ODI 📝
Updates ▶️ https://t.co/lCuohEZYAl @IDFCFIRSTBank pic.twitter.com/1tV4kwGpkK
— BCCI (@BCCI) June 13, 2026
ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಜ್, ಸೇದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ರಶೀದ್ ಖಾನ್, ಮೊಹಮ್ಮದ್ ಸಲೀಮ್, ಎಎಮ್ ಗಜನ್ಫರ್ ಮತ್ತು ಜಿಯಾವುರ್ ರೆಹಮಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Sat, 13 June 26




