AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಇಂಗ್ಲೆಂಡ್ 50/1: ಕೇವಲ 8 ವಿಕೆಟ್ ಕಬಳಿಸಿದರೆ ಭಾರತಕ್ಕೆ ಜಯ

India vs England Test: ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ 336 ರನ್​ಗಳಿಂದ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು. ಮೂರನೇ ಮ್ಯಾಚ್​ನಲ್ಲಿ 22 ರನ್​ಗಳ ಜಯ ಸಾಧಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು. ಹಾಗೆಯೇ ನಾಲ್ಕನೇ ಪಂದ್ಯವನ್ನು ಟೀಮ್ ಇಂಡಿಯಾ ಡ್ರಾನಲ್ಲಿ ಕೊನೆಗೊಳಿಸಿದೆ. ಇದೀಗ ಐದನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡವು ಸರಣಿಯನ್ನು 2-2 ಅಂತರದಿಂದ ಡ್ರಾನಲ್ಲಿ ಕೊನೆಗೊಳಿಸಬಹುದು.

IND vs ENG: ಇಂಗ್ಲೆಂಡ್ 50/1: ಕೇವಲ 8 ವಿಕೆಟ್ ಕಬಳಿಸಿದರೆ ಭಾರತಕ್ಕೆ ಜಯ
Team India
ಝಾಹಿರ್ ಯೂಸುಫ್
|

Updated on: Aug 03, 2025 | 2:04 PM

Share

ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 224 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ 247 ರನ್​ಗಳಿಸಿ ಆಲೌಟ್ ಆಗಿತ್ತು.

23 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (118) ಭರ್ಜರಿ ಶತಕ ಸಿಡಿಸಿದರು. ಆ ಬಳಿಕ ರವೀಂದ್ರ ಜಡೇಜಾ (53) ಹಾಗೂ ವಾಷಿಂಗ್ಟನ್ ಸುಂದರ್ (53) ಹಾಫ್ ಸೆಂಚುರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಭಾರತ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಬರೋಬ್ಬರಿ 396 ರನ್​ ಕಲೆಹಾಕಿದೆ.

ಅತ್ತ ಮೊದಲ ಇನಿಂಗ್ಸ್​ನಲ್ಲಿ 23 ರನ್​ಗಳ ಮುನ್ನಡೆ ಹೊಂದಿದ್ದ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 374 ರನ್​ಗಳ ಗುರಿ ಪಡೆದುಕೊಂಡಿದೆ. ಈ ಗುರಿಯನ್ನು ಬೆನ್ನತ್ತಲು ಆರಂಭಿಸಿರುವ ಇಂಗ್ಲೆಂಡ್ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದೆ.

ಇನ್ನು ಎರಡು ದಿನದಾಟಗಳು ಬಾಕಿಯಿದ್ದು, ಇದರ ನಡುವೆ ಇಂಗ್ಲೆಂಡ್ 324 ರನ್​ಗಳಿಸಿದರೆ ಪಂದ್ಯವನ್ನು ಗೆಲ್ಲಬಹುದು. ಅದರೊಳಗೆ ಟೀಮ್ ಇಂಡಿಯಾ ಕೇವಲ 8 ವಿಕೆಟ್ ಕಬಳಿಸಿದರೆ ಸಾಕು ಜಯಭೇರಿ ಬಾರಿಸಬಹುದು.

ಏಕೆಂದರೆ ಈ ಪಂದ್ಯದಿಂದ ಇಂಗ್ಲೆಂಡ್ ಆಲ್​ರೌಂಡರ್ ಕ್ರಿಸ್ ವೋಕ್ಸ್ ಹೊರಗುಳಿದಿದ್ದಾರೆ. ದ್ವಿತೀಯ ದಿನದಾಟದಲ್ಲಿ ಫೀಲ್ಡಿಂಗ್ ವೇಳೆ ವೋಕ್ಸ್ ಅವರ ಭುಜಕ್ಕೆ ಗಂಭೀರವಾದ ಗಾಯವಾಗಿದ್ದು, ಹೀಗಾಗಿ ಅವರು ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದೇ ಕಾರಣದಿಂದಾಗಿ ಅವರು ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿರಲಿಲ್ಲ.

ಅಲ್ಲದೆ ಗಂಭೀರ ಗಾಯವಾಗಿರುವ ಕಾರಣ ಅವರು ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಂಗ್​ ಸಹ ಮಾಡಿರಲಿಲ್ಲ. ಅತ್ತ ಐಸಿಸಿ ನಿಯಮದ ಪ್ರಕಾರ, ಕನ್ಕ್ಯುಶನ್ ಸಬ್ಸ್​ಟಿಟ್ಯೂಟ್ ಆಯ್ಕೆ ಕೂಡ ಇಂಗ್ಲೆಂಡ್ ತಂಡದ ಮುಂದಿಲ್ಲ.

ಏಕೆಂದರೆ ಪಂದ್ಯದ ನಡುವೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಕನ್ಕ್ಯುಶನ್ ಸಬ್ಸ್​ಟಿಟ್ಯೂಟ್ ಆಯ್ಕೆ ಮೂಲಕ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಇದರ ಹೊರತಾಗಿ ಯಾವುದೇ ಗಾಯವಾದರೂ ಬದಲಿ ಆಟಗಾರನನ್ನು ಬೌಲಿಂಗ್​ಗೆ ಅಥವಾ ಬ್ಯಾಟಿಂಗ್​ಗೆ ಬಳಸಿಕೊಳ್ಳಲು ಐಸಿಸಿ ಅವಕಾಶ ನೀಡಿಲ್ಲ.

ಹೀಗಾಗಿ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಬದಲಿಯಾಗಿ 11ನೇ ಬ್ಯಾಟರ್​ನನ್ನು ಬಳಸಿಕೊಳ್ಳಲು ಅವಕಾಶವಿಲ್ಲ. ಅದರಂತೆ ಇಂಗ್ಲೆಂಡ್ ತಂಡವು ಇನಿಂಗ್ಸ್​ನಲ್ಲಿ 10 ಬ್ಯಾಟರ್​ಗಳೊಂದಿಗೆ ಗುರಿ ಬೆನ್ನತ್ತಬೇಕಿದೆ.

ಇದನ್ನೂ ಓದಿ: 46 ವರ್ಷಗಳ ಬಳಿಕ ಟೀಮ್ ಇಂಡಿಯಾದ ಶತಕಗಳ ದಾಖಲೆ ಮುರಿದ ಯಂಗ್ ಇಂಡಿಯಾ

ಇತ್ತ ಮೊದಲ ವಿಕೆಟ್ ಪಡೆದಿರುವ ಟೀಮ್ ಇಂಡಿಯಾ ಇನ್ನು 8 ವಿಕೆಟ್ ಉರುಳಿಸಿದರೆ, ಒಟ್ಟು 9 ವಿಕೆಟ್​ನೊಂದಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಬಹುದು. ಅದರಂತೆ ಇಂದಿನ ದಿನದಾಟದಲ್ಲಿ ಭಾರತೀಯ ಬೌಲರ್​ಗಳು ಕೇವಲ 8 ವಿಕೆಟ್ ಕಬಳಿಸಿದರೆ ಸಾಕು ಪಂದ್ಯವನ್ನು ಗೆಲ್ಲಬಹುದು.

Follow Us
ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ
ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ
ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ
ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ
ಮದುವೆ ಮಾಡಿಕೊಂಡು ನೇರವಾಗಿ ದರ್ಶನ್ ಮನೆ ಮುಂದೆ ಬಂದ ನವ ಜೋಡಿ
ಮದುವೆ ಮಾಡಿಕೊಂಡು ನೇರವಾಗಿ ದರ್ಶನ್ ಮನೆ ಮುಂದೆ ಬಂದ ನವ ಜೋಡಿ
ಡಿಕೆ ಶಿವಕುಮಾರ್ ಶಾಕಿಂಗ್ ಮಾತು: ಮತ್ತೆ ಜೋರಾದ ಅಧಿಕಾರ ಹಂಚಿಕೆ ಬಿಕ್ಕಟ್ಟು
ಡಿಕೆ ಶಿವಕುಮಾರ್ ಶಾಕಿಂಗ್ ಮಾತು: ಮತ್ತೆ ಜೋರಾದ ಅಧಿಕಾರ ಹಂಚಿಕೆ ಬಿಕ್ಕಟ್ಟು
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
ಮೈದಾನದಲ್ಲಿ ಪತ್ನಿಗೆ ಲಿಪ್‌ಲಾಕ್ ಮಾಡಿದ ಕ್ರಿಕೆಟಿಗ
ಮೈದಾನದಲ್ಲಿ ಪತ್ನಿಗೆ ಲಿಪ್‌ಲಾಕ್ ಮಾಡಿದ ಕ್ರಿಕೆಟಿಗ
ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ
ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ
ಬೆಂಗಳೂರಿನ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ
ಬೆಂಗಳೂರಿನ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ
ಸಿಗರೇಟ್‌ಗೆ ಗಾಂಜಾ ತುಂಬಿಸಿ ನಶೆ ಏರಿಸುತ್ತಿದ್ದ ಇಬ್ಬರು ಖಾಕಿ ಬಲೆಗೆ
ಸಿಗರೇಟ್‌ಗೆ ಗಾಂಜಾ ತುಂಬಿಸಿ ನಶೆ ಏರಿಸುತ್ತಿದ್ದ ಇಬ್ಬರು ಖಾಕಿ ಬಲೆಗೆ
ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್: ದರೋಡೆ ನಡೆಸಿದ ರೀತಿಯೇ ಇಂಟರೆಸ್ಟಿಂಗ್​!
ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್: ದರೋಡೆ ನಡೆಸಿದ ರೀತಿಯೇ ಇಂಟರೆಸ್ಟಿಂಗ್​!