ಕೇವಲ 32 ರನ್​ಗಳಿಸಿ ಪಂದ್ಯ ಗೆದ್ದ ಟೀಮ್ ಇಂಡಿಯಾ

ಜಪಾನ್​ನ ಸನೋ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಜಪಾನ್ ನಡುವಣ ಟಿ20 ಪಂದ್ಯವು ಮಳೆಯ ಕಾರಣ 5 ಓವರ್​ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಲೆಹಾಕಿದ್ದು ಕೇವಲ 32 ರನ್​ಗಳು ಮಾತ್ರ. ಈ ಅಲ್ಪ ಮೊತ್ತದೊಂದಿಗೆ ಟೀಮ್ ಇಂಡಿಯಾ ಜಯ ಸಾಧಿಸಿರುವುದು ವಿಶೇಷ.

ಕೇವಲ 32 ರನ್​ಗಳಿಸಿ ಪಂದ್ಯ ಗೆದ್ದ ಟೀಮ್ ಇಂಡಿಯಾ
Team India 2026 09 22t132916.558

Updated on: Sep 22, 2026 | 1:40 PM

ಜಪಾನ್​ ವಿರುದ್ಧದ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಜಪಾನ್​ನ ಸನೋ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಳೆ ಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

5 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ (0) ಶೂನ್ಯಕ್ಕೆ ಔಟಾದರೆ, ದ್ವಿತೀಯ ಓವರ್​ನಲ್ಲಿ ಸಂಜು ಸ್ಯಾಮ್ಸನ್ (9) ವಿಕೆಟ್ ಒಪ್ಪಿಸಿದರು. ಇನ್ನು ಇಶಾನ್ ಕಿಶನ್ (3) ಮೂರನೇ ಓವರ್​ನಲ್ಲಿ ಔಟಾದರು.

ಆ ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ 12 ಎಸೆತಗಳಲ್ಲಿ ಬಾರಿಸಿದ್ದು ಕೇವಲ 16 ರನ್​ಗಳು ಮಾತ್ರ. ತಿಲಕ್ ವರ್ಮಾ 1 ರನ್​ಗಳಿಸಿದರೆ, ಶಿವಂ ದುಬೆ ಒಂದು ಎಸೆತವನ್ನು ಎದುರಿಸಿದರೂ ಯಾವುದೇ ರನ್​ ಗಳಿಸಿರಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 5 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 32 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು.

33 ರನ್​ಗಳ ಗುರಿ:

30 ಎಸೆತಗಳಲ್ಲಿ 33 ರನ್​ಗಳ ಗುರಿ ಪಡೆದ ಜಪಾನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಲಾಚ್ಲಾನ್ ಯಮಾಮೊಟೊ-ಲೇಕ್ 1 ರನ್​ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಬ್ರಾಹಿಂ ಟಕಾಝುಕಿಯಾ 3 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ನಾಯಕ ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ (12) ಏಕಾಂಗಿ ಹೋರಾಟ ಮುಂದುವರೆಸಿದರು. ಪರಿಣಾಮ ಜಪಾನ್ ತಂಡಕ್ಕೆ ಕೊನೆಯ ಓವರ್​ನಲ್ಲಿ 8 ರನ್​ಗಳ ಅವಶ್ಯಕತೆಯಿತ್ತು.

ಈ ವೇಳೆ ದಾಳಿಗಿಳಿದ ಅಕ್ಷರ್ ಪಟೇಲ್ 6 ಎಸೆತಗಳಲ್ಲಿ ನೀಡಿದ್ದು ಕೇವಲ 5 ರನ್​ಗಳು ಮಾತ್ರ. ಈ ಮೂಲಕ ಟೀಮ್ ಇಂಡಿಯಾ 2 ರನ್​ಗಳ ರೋಚಕ ಜಯ ಸಾಧಿಸಿದೆ.

  • ಭಾರತ- 32/4 (5 ಓವರ್)

  • ಜಪಾನ್- 30/3 (5 ಓವರ್)

ಭಾರತ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಯಶ್ ಠಾಕೂರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ ಫೈನಲ್​ನಲ್ಲಿ ದಾಖಲೆಯ ಮೊತ್ತ ಪೇರಿಸಿದ ಟೀಮ್ ಇಂಡಿಯಾ

ಜಪಾನ್ (ಪ್ಲೇಯಿಂಗ್ XI): ಲಾಚ್ಲಾನ್ ಯಮಾಮೊಟೊ-ಲೇಕ್, ರಿಯೊ ಸಕುರಾನೊ-ಥಾಮಸ್, ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ (ನಾಯಕ), ಬೆಂಜಮಿನ್ ಇಟೊ-ಡೇವಿಸ್, ವಟಾರು ಮಿಯೌಚಿ, ಅಲೆಕ್ಸಾಂಡರ್ ಶಿರೈ-ಪ್ಯಾಟ್ಮೋರ್ (ವಿಕೆಟ್ ಕೀಪರ್), ಚಾರ್ಲಿ ಹರಾ-ಹಿಂಝೆ, ಇಬ್ರಾಹಿಂ ಟಕಾಝುಕಿಯಾ, ಡೆಕ್ಕೊಮಾಕ್ ಶೋಮಾ ಸುಗಯಾ-ಸ್ಲೇಟರ್.

 

Published On - 1:39 pm, Tue, 22 September 26

Loading...
Unable to load recommendations.
Follow Us