IPL 2021: ‘ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡೇ ಐಪಿಎಲ್ ಲೋಗೋ ಡಿಸೈನ್ ಮಾಡಿದ್ದು’

ಇಂದು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಈ ನಡುವೆ, ನಿನ್ನೆಯ ಪಂದ್ಯಾಟದ ಎಬಿಡಿ ಆಟ ಗಮನಿಸಿ, ವೀರೇಂದ್ರ ಸೆಹವಾಗ್ ವಿಶೇಷ ಟ್ವೀಟ್ ಒಂದನ್ನು ಮಾಡಿದ್ದಾರೆ.

IPL 2021: ‘ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡೇ ಐಪಿಎಲ್ ಲೋಗೋ ಡಿಸೈನ್ ಮಾಡಿದ್ದು’
ಐಪಿಎಲ್ ಲೋಗೋ ಹಾಗೂ ಎಬಿಡಿ
Follow us
TV9 Web
| Updated By: ganapathi bhat

Updated on:Apr 05, 2022 | 12:41 PM

ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದ ದಂತಕಥೆ ಅನ್ನೋದನ್ನು ಎಲ್ಲಾ ಕ್ರಿಕೆಟ್ ಅಭಿಮಾನಿಗಳೂ ಒಪ್ಪಿಕೊಳ್ಳುತ್ತಾರೆ. ದೇಶ, ಭಾಷೆ ಹೊರತುಪಡಿಸಿ ಅವರಿಗೆ ಅತಿ ದೊಡ್ಡ ಅಭಿಮಾನಿ ಸಮೂಹವಿದೆ. ಮಿಸ್ಟರ್ 360 ಎಂದು ಕರೆಸಿಕೊಳ್ಳುವ ಎಬಿಡಿ ಆಟವನ್ನು ಎಂಜಾಯ್ ಮಾಡದವರು ಯಾರೂ ಇರಲಿಕ್ಕಿಲ್ಲ. ಎಂತಹುದೇ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಚಾಕಚಕ್ಯತೆ ಡಿವಿಲಿಯರ್ಸ್​ಗೆ ಇದೆ. ಇದೇ ರೀತಿ ಯಾವುದೇ ಎಸೆತಗಾರರ ಬಾಲ್​ನ್ನು ಅಟ್ಟಾಡಿಸಬಲ್ಲ, ಮೊದಲ ಬಾಲ್​ಗೆ ಫೋರ್-ಸಿಕ್ಸ್ ಬಾರಿಸಬಲ್ಲ ಮತ್ತೊಬ್ಬ ಸೂಪರ್ ದಾಂಡಿಗನಿದ್ದರೆ ಅದು ವೀರೂ.. ವೀರೇಂದ್ರ ಸೆಹವಾಗ್.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ ಕ್ರಿಕೆಟ್ ಜ್ವರ ಶುರುವಾಗಿದೆ. ಇಂದು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಈ ನಡುವೆ, ನಿನ್ನೆಯ ಪಂದ್ಯಾಟದ ಎಬಿಡಿ ಆಟ ಗಮನಿಸಿ, ವೀರೇಂದ್ರ ಸೆಹವಾಗ್ ವಿಶೇಷ ಟ್ವೀಟ್ ಒಂದನ್ನು ಮಾಡಿದ್ದಾರೆ.

ಭಾರತೀಯ ತಂಡ ಕಂಡ ಅಬ್ಬರದ ಬ್ಯಾಟ್ಸ್​ಮನ್ ವೀರೇಂದ್ರ ಸೆಹವಾಗ್, ಡಿವಿಲಿಯರ್ಸ್​ರನ್ನು ಸ್ಪೆಷಲ್ ಆಗಿ ಕೊಂಡಾಡಿದ್ದಾರೆ. ಈ ಐಪಿಎಲ್ ಲೋಗೋವನ್ನು ಡಿವಿಲಿಯರ್ಸ್ ಬ್ಯಾಟಿಂಗ್ ನೋಡಿಯೇ ತಯಾರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, ನಿನ್ನೆಯ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದಕ್ಕಾಗಿ ಹರ್ಷಲ್ ಪಟೇಲ್​ರನ್ನೂ ಅಭಿನಂದಿಸಿದ್ದಾರೆ.

ನಿನ್ನೆ ಮುಂಬೈ ವಿರುದ್ಧ ಸಿಡಿದಿದ್ದ ಡಿವಿಲಿಯರ್ಸ್ ಮುಂಬೈ ನಿಡಿದ 160 ರನ್​ಗಳ ಟಾರ್ಗೆಟನ್ನು ಬೆನ್ನಟ್ಟಿದ್ದ ಆರ್​ಸಿಬಿಯ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಬಂದ ಸುಂದರ್ 10 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ನಂತರ ಬಂದ ರಜತ್​ ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಕೊಹ್ಲಿ ಜೊತೆಗೂಡಿದ ಮ್ಯಾಕ್ಸ್​​ವೆಲ್ ಉತ್ತಮ ಆಟ ಆಡಿದರು. 28 ಎಸೆತ ಎದುರಿಸಿದ ಮ್ಯಾಕ್ಸ್​ವೆಲ್ 39 ರನ್ ಗಳಿಸಿದ್ದರು. ಇದರಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು.

ಉತ್ತಮ ಜೊತೆಯಾಟ ಆಡುತ್ತಿದ್ದ ಕೊಹ್ಲಿ 33 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡಿವಿಲಿಯರ್ಸ್​ ತಮ್ಮ ಎಂದಿನ ಆಟಕ್ಕೆ ಮುಂದಾದರು. ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮ್ಯಾಕ್ಸ್​ವೆಲ್ ಇಲ್ಲದ ಹೊಡೆತ ಆಡಲು ಹೋಗಿ ಔಟಾದರು. ಈ ವಿಕೆಟ್ ಬಳಿಕ ಏಕಾಂಗಿ ಹೋರಾಟ ನಡೆಸಿದ ಡಿವಿಲಿಯರ್ಸ್​ ತಂಡವನ್ನು ಗೆಲುವಿನ ಅಂಚಿಗೆ ತಂದು ರನ್​ ಔಟ್​ ಆದರು. ವಿಕೆಟ್​ಗೂ ಮುನ್ನ ಡಿವಿಲಿಯರ್ಸ್​ ಕೇವಲ 27 ಬಾಲ್​ಗಳಲ್ಲಿ 48 ರನ್​ ಗಳಿಸಿದ್ದರು. ಅಂತಿಮವಾಗಿ ಬೌಲಿಂಗ್​ನಲ್ಲಿ ಮಿಂಚಿದ್ದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಆರ್​ಸಿಬಿಗೆ ಗೆಲುವಿನ ಮಾಲೆ ತೊಡಿಸಿದರು.

ಇದನ್ನೂ ಓದಿ: CSK vs DC, IPL 2021: ಇಂದಿನ ಪಂದ್ಯದ ಬಗ್ಗೆ ಹೆಚ್ಚು ಕುತೂಹಲ ಮೂಡಲು ಕಾರಣ ತಿಳಿಸಿದ ರವಿ ಶಾಸ್ತ್ರಿ

ಇದನ್ನೂ ಓದಿ: Rishabh Pant IPL 2021 DC Team Player: ಡೆಲ್ಲಿ ತಂಡದ ಸಾರಥ್ಯವಹಿಸಿಕೊಂಡಿರುವ ಪಂತ್​ಗೆ ಸವಾಲುಗಳ ಮಹಾಗೋಡೆಯೇ ಮುಂದಿದೆ

Published On - 5:13 pm, Sat, 10 April 21

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ