IPL 2023 Points Table: ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

IPL 2023 Orange-Purple Cap: ಕೆಕೆಆರ್ ಮತ್ತು ಹೈದರಾಬಾದ್ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ಸ್ ಟೇಬಲ್​ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

IPL 2023 Points Table: ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
IPL 2023 Points Table
Follow us
|

Updated on:May 05, 2023 | 8:42 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ (IPL 2023) ಟೂರ್ನಿಯಲ್ಲಿ 47 ಪಂದ್ಯಗಳು ಮುಕ್ತಾಯಗೊಂಡಿದೆ. ಕೆಲ ತಂಡಗಳಿಂದ ಊಹಿಸಲಾಗದ ಪ್ರದರ್ಶನ ಬರುತ್ತಿದೆ. ಎದುರಾಳಿಗೆ 200+ ಟಾರ್ಗೆಟ್ ನೀಡಿದರೂ ಸುಲಭವಾಗಿ ಚೇಸ್ ಮಾಡಿ ಗೆಲುವು ಸಾಧಿಸುವುದು ಈ ಬಾರಿಯ ಟೂರ್ನಿಯಲ್ಲಿ ಸಾಮಾನ್ಯವಾಗುತ್ತಿದೆ. ಇಂದು ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗಲಿದೆ. ಗುರುವಾರ ಕೆಕೆಆರ್ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆಯಿತು. ಇದರಲ್ಲಿ ಕೋಲ್ಕತ್ತಾ 5 ರನ್​ಗಳ ರೋಚಕಯ ಜಯ ಸಾಧಿಸಿತು. ಇದೀಗ ಈ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ಸ್ ಟೇಬಲ್​ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

  • ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಆರು ಗೆಲುವು, ಮೂರು ಸೋಲುಂಡು +0.532 ರನ್​ರೇಟ್​ನೊಂದಿಗೆ 12 ಅಂಕ ಸಂಪಾದಿಸಿದೆ.
  • ಲಖನೌ ಸೂಪರ್ ಜೇಂಟ್ಸ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಆಡಿದ ಹತ್ತು ಪಂದ್ಯಗಳಲ್ಲಿ ಐದು ಗೆಲುವು, ನಾಲ್ಕು ಸೋಲು ಕಂಡು 11 ಅಂಕ ಸಂಪಾದಿಸಿ +0.639 ರನ್​ರೇಟ್​ ಹೊಂದಿದೆ.
  • ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು ಒಟ್ಟು 11 ಅಂಕ ಸಂಪಾದಿಸಿದೆ. +0.329 ರನ್​ರೇಟ್ ಹೊಂದಿದೆ.
  • ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ ಐದು ಗೆಲುವು, ನಾಲ್ಕರಲ್ಲಿ ಸೋಲುಂಡು +0.800 ರನ್​ರೇಟ್​ನೊಂದಿಗೆ 10 ಅಂಕ ಸಂಪಾದಿಸಿದೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಆಡಿದ ಒಂಬತ್ತು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.030 ರನ್​ರೇಟ್ ಹೊಂದಿದೆ.
  • ಮುಂಬೈ ಇಂಡಿಯನ್ಸ್ ಮೇಲಕ್ಕೆರಿ ಆರನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯದಲ್ಲಿ 4 ಸೋಲು, ಐದು ಗೆಲುವು ಕಂಡು 10 ಅಂಕ ಸಂಪಾದಿಸಿ -0.373 ರನ್​ರೇಟ್ ಹೊಂದಿದೆ.
  • ಪಂಜಾಬ್ ಕಿಂಗ್ಸ್ ಆಡಿದ ಹತ್ತು ಪಂದ್ಯಗಳಲ್ಲಿ ಐದು ಸೋಲು- ಐದು ಜಯ ಕಂಡು 10 ಅಂಕ ಹೊಂದಿ -0.472ರನ್​ರೇಟ್​ನೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ.
  • ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಪ್ಲೇಸ್​ನಲ್ಲಿದೆ. ಆಡಿದ 10 ಪಂದ್ಯಗಳಲ್ಲಿ ನಾಲ್ಕು ಗೆಲುವು, ಆರರಲ್ಲಿ ಸೋಲುಂಡು -0.103 ರನ್​ರೇಟ್​ನೊಂದಿಗೆ 8 ಅಂಕ ಸಂಪಾದಿಸಿದೆ.
  • ಸನ್​ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯದಲ್ಲಿ ಆರರಲ್ಲಿ ಸೋಲು ಮೂರರಲ್ಲಿ ಜಯ ಕಂಡು 6 ಅಂಕ ಸಂಪಾದಿಸಿ -0.540 ರನ್​ರೇಟ್ ಹೊಂದಿದೆ.
  • ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳ ಪೈಕಿ ಕೇವಲ ಮೂರರಲ್ಲಷ್ಟೆ ಜಯ ಸಾಧಿಸಿ 6 ಅಂಕ ಸಂಪಾದಿಸಿ -0.768 ರನ್​ರೇಟ್ ಹೊಂದಿದೆ.

IPL 2023: RCB ತಂಡಕ್ಕೆ ಆಯ್ಕೆಯಾದ ಪ್ರಸಂಗ ವಿವರಿಸಿದ ಕೇದಾರ್ ಜಾಧವ್

ಆರೆಂಜ್ ಕ್ಯಾಪ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪುನಃ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ ಒಂಬತ್ತು ಪಂದ್ಯಗಳಲ್ಲಿ ಐದು ಅರ್ಧಶತಕ ಸಿಡಿಸಿ ಒಟ್ಟು 466 ರನ್ ಗಳಿಸಿದ್ದಾರೆ. ರಾಜಸ್ಥಾನ್ ತಂಡದ ಯಶಸ್ವಿ ಜೈಸ್ವಾಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರು ಆಡಿದ ಒಂಬತ್ತು ಪಂದ್ಯಗಳಲ್ಲಿ ಮೂರು ಅರ್ಧಶತಕ, 1 ಶತಕ ಸಿಡಿಸಿ ಒಟ್ಟು 428 ರನ್ ಕಲೆಹಾಕಿದ್ದಾರೆ. ಸಿಎಸ್​ಕೆ ತಂಡದ ಡೆವೊನ್ ಕಾನ್ವೇ ಮೂರನೇ ಸ್ಥಾನದಲ್ಲಿದ್ದು 10 ಪಂದ್ಯಗಳಿಂದ 414 ರನ್ ಗಳಿಸಿದ್ದಾರೆ.

ಇದನ್ನೂ ಓದಿ
Image
RR vs GT, IPL 2023: ಸ್ಯಾಮ್ಸನ್ vs ಹಾರ್ದಿಕ್: ಐಪಿಎಲ್​ನಲ್ಲಿಂದು ರಾಜಸ್ಥಾನ್- ಗುಜರಾತ್ ನಡುವೆ ಹೈವೋಲ್ಟೇಜ್ ಪಂದ್ಯ
Image
KL Rahul Injury: ಐಪಿಎಲ್ 2023 ರಿಂದ ಕೆಎಲ್ ರಾಹುಲ್ ಹೊರಕ್ಕೆ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಿಂದಲೂ ಔಟ್?
Image
IPL 2023: ಐಪಿಎಲ್ 50 ಫೈಟ್: RCB ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ
Image
IPL 2023: 9 ಪಂದ್ಯ 6 ಬ್ಯಾಟರ್ಸ್​: ಇದುವೇ RCB ತಂಡದ ಅತೀ ದೊಡ್ಡ ಸಮಸ್ಯೆ..!

ಪರ್ಪಲ್ ಕ್ಯಾಪ್:

ಗುಜರಾತ್ ಟೈಟಾನ್ಸ್ ತಂಡದ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿರುವ ಒಂಬತ್ತು ಪಂದ್ಯಗಳಿಂದ 17 ವಿಕೆಟ್ ಪಡೆದುಕೊಂಡಿದ್ದಾರೆ. ಸಿಕೆಸ್​ಕೆ ತಂಡದ ತುಷಾರ್ ದೇಶಪಾಂಡೆ 10 ಪಂದ್ಯಗಳಿಂದ 17 ವಿಕೆಟ್ ಗಳಿಸಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಅರ್ಶ್​ದೀಪ್ ಸಿಂಗ್ 10 ಪಂದ್ಯಗಳಿಂದ ಒಟ್ಟು 16 ವಿಕೆಟ್ ಕಿತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:41 am, Fri, 5 May 23