IPL 2024: ಅತ್ಯದ್ಭುತ ಕ್ಯಾಚ್ ಹಿಡಿದ ರವಿ ಬಿಷ್ಣೋಯ್: ವಿಡಿಯೋ ಇಲ್ಲಿದೆ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್-17 ರಲ್ಲಿ ಅತ್ಯುತ್ತಮ ಫೀಲ್ಡಿಂಗ್ ಕಂಡು ಬರುತ್ತಿದೆ. ಅದರಲ್ಲೂ ಇದೀಗ ರವಿ ಬಿಷ್ಣೋಯ್ ಹಿಡಿದಿರುವ ಕ್ಯಾಚ್ವೊಂದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಇದೀಗ ಬಿಷ್ಣೋಯ್ ಅವರ ಈ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 21ನೇ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದು ರವಿ ಬಿಷ್ಣೋಯ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಲ್ಎಸ್ಜಿ ತಂಡದ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾರ್ಕಸ್ ಸ್ಟೋಯಿನಿಸ್ (53) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಪೇರಿಸಿತು.
164 ರನ್ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶುಭ್ಮನ್ ಗಿಲ್ (19) ಬೇಗನೆ ವಿಕೆಟ್ ಒಪ್ಪಿಸಿದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ (1) ಅವರನ್ನು ಅದ್ಭುತ ಕ್ಯಾಚ್ನೊಂದಿಗೆ ಪೆವಿಲಿಯನ್ಗೆ ಕಳುಹಿಸುವಲ್ಲಿ ರವಿ ಬಿಷ್ಣೋಯ್ ಯಶಸ್ವಿಯಾದರು.
ರವಿ ಬಿಷ್ಣೋಯ್ ಎಸೆದ 8ನೇ ಓವರ್ನ 2ನೇ ಎಸೆತದಲ್ಲಿ ಕೇನ್ ವಿಲಿಯಮ್ಸನ್ ನೇರವಾಗಿ ಹೊಡೆಯಲು ಯತ್ನಿಸಿದ್ದರು. ಆದರೆ ಬಿಷ್ಣೋಯ್ ಗೂಗ್ಲಿಯಿಂದ ಚೆಂಡು ನೇರವಾಗಿ ಗಾಳಿಯಲ್ಲಿ ಚಿಮ್ಮಿತ್ತು. ಕ್ಷಣಾರ್ಧದಲ್ಲಿ ಜಿಗಿದ ರವಿ ಬಿಷ್ಣೋಯ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದರು. ಇದೀಗ ಬಿಷ್ಣೋಯ್ ಅವರ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ರವಿ ಬಿಷ್ಣೋಯ್ ಹಿಡಿದಿರುವ ಕ್ಯಾಚ್ ವಿಡಿಯೋ:
Is this the Catch of the Tournament? 👀#RaviBishnoi Airlines takes flight to grab a GAZAB Caught & Bowled! 💪
Is this the turning point of the match for #Lucknow?
Tune in to #LSGvGT in #IPLOnStar | LIVE NOW only on Star Sportspic.twitter.com/9SJMrhbkXn
— Star Sports (@StarSportsIndia) April 7, 2024
ಸೋತ ಗುಜರಾತ್ ಟೈಟಾನ್ಸ್:
164 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಬೆನ್ನಲುಬು ಮುರಿಯುವಲ್ಲಿ ಯುವ ವೇಗಿ ಯಶ್ ಠಾಕೂರ್ ಯಶಸ್ವಿಯಾದರು. 3.5 ಓವರ್ಗಳಲ್ಲಿ 30 ರನ್ ನೀಡಿದ ಠಾಕೂರ್ 5 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಗುಜರಾತ್ ಟೈಟಾನ್ಸ್ ತಂಡವು 18.5 ಓವರ್ಗಳಲ್ಲಿ 130 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 33 ರನ್ಗಳ ಜಯ ಸಾಧಿಸಿತು.
ಇದನ್ನೂ ಓದಿ: Dinesh Karthik: RCB ಅಭಿಮಾನಿಗಳು ನಿಷ್ಠಾವಂತರೇ… ಆದರೆ,
ಈ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮೊದಲೆರಡು ಸ್ಥಾನಗಳಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿವೆ.
