VIDEO: ಡೆಲ್ಲಿ ಬಾಯ್ಸ್ ಫೈಟ್: ನೋಟ್ಬುಕ್ ಸೆಲೆಬ್ರೇಷನ್ ಮಾಡಿದ ದಿಗ್ವೇಶ್ಗೆ ದಂಡ
IPL 2025 LSG vs PBKS: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕ ದಾಂಡಿಗ ಪ್ರಭ್ಸಿಮ್ರಾನ್ ಸಿಂಗ್ ಕೇವಲ 34 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 69 ರನ್ ಬಾರಿಸಿದರು.

IPL 2025: ಐಪಿಎಲ್ ಅಂಗಳದಲ್ಲಿ ಡೆಲ್ಲಿ ಬಾಯ್ಸ್ ಫೈಟ್ ಮುಂದುವರೆದಿದೆ. ಈ ಹಿಂದೆ ದೆಹಲಿ ಮೂಲದ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಕಿತ್ತಾಟಕ್ಕೆ ಐಪಿಎಲ್ ಸಾಕ್ಷಿಯಾಗಿತ್ತು. ಇದಾದ ಬಳಿಕ ದೆಹಲಿಯವರಾದ ನಿತೀಶ್ ರಾಣಾ ಹಾಗೂ ಹೃತಿಕ್ ಶೊಕೀನ್ ಮೈದಾನದಲ್ಲೇ ಜಗಳವಾಡಿಕೊಂಡಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ದಿಗ್ವೇಶ್ ರಾಠಿ ಹಾಗೂ ಪ್ರಿಯಾಂಶ್ ಆರ್ಯ.
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 13ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ರಾಠಿ ನೋಟ್ಬುಕ್ ಸೆಲೆಬ್ರೇಷನ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ನ ಕೆಸ್ರಿಕ್ ವಿಲಿಯಮ್ಸ್ ಶುರು ಮಾಡಿದ್ದ ಈ ಸೆಲೆಬ್ರೇಷನ್ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದೆ. ದೆಹಲಿ ರಾಜ್ಯದ ತಂಡದ ತನ್ನ ಸಹ ಆಟಗಾರನನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ಮಾಡಿದ ಈ ಸಂಭ್ರಮಾಚರಣೆಗೆ ಇದೀಗ ದಂಡದ ಬರೆ ಬಿದ್ದಿದೆ.
ನೋಟ್ಬುಕ್ ಸೆಲೆಬ್ರೇಷನ್ನೊಂದಿಗೆ ಐಪಿಎಲ್ನ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಕ್ಕಾಗಿ ದಿಗ್ವೇಶ್ ರಾಠಿಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ಸಹ ನೀಡಲಾಗಿದೆ.
ಸದ್ಯ ಒಂದು ಡಿಮೆರಿಟ್ ಪಾಯಿಂಟ್ ಪಡೆದಿರುವ ದಿದಿಗ್ವೇಶ್ ರಾಠಿಗೆ ಮೂರು ವರ್ಷದೊಳಗೆ 4 ಡಿಮೆರಿಟ್ ಪಾಯಿಂಟ್ ಪಡೆದರೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.
ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತಿದ್ದು, ಈ ಪಾಯಿಂಟ್ಸ್ ಮುಂದಿನ ಮೂರು ವರ್ಷಗಳವರೆಗೆ ಚಾಲ್ತಿಯಲ್ಲಿರಲಿದೆ. ಇಂತಹದೊಂದು ನಿಯಮವನ್ನು ಪರಿಚಯಿಸುವ ಮೂಲಕ ಐಪಿಎಲ್ ಗರ್ವನರ್ ಕಮಿಟಿ ಆಟಗಾರರಲ್ಲಿ ಶಿಸ್ತು ಮೂಡಿಸಲು ಮುಂದಾಗಿದೆ.
ದಿಗ್ವೇಶ್ ರಾಠಿ ನೋಟ್ಬುಕ್ ಸೆಲೆಬ್ರೇಷನ್ ವಿಡಿಯೋ:
#DigveshRathi provides the breakthrough as #PriyanshArya heads back!
P.S: Don’t miss the celebration at the end! 👀✍🏻
Watch LIVE action of #LSGvPBKS ➡ https://t.co/GLxHRDQajv#IPLOnJiostar | LIVE NOW on Star Sports 1, Star Sports 1 Hindi & JioHotstar! | #IndianPossibleLeague pic.twitter.com/TAhHDtXX8n
— Star Sports (@StarSportsIndia) April 1, 2025
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕ ದಾಂಡಿಗ ಪ್ರಭ್ಸಿಮ್ರಾನ್ ಸಿಂಗ್ ಕೇವಲ 34 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 69 ರನ್ ಬಾರಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಶ್ರೇಯಸ್ ಅಯ್ಯರ್ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 52 ರನ್ ಚಚ್ಚಿದರು. ಈ ಮೂಲಕ 16.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ ಪಂಜಾಬ್ ಕಿಂಗ್ಸ್ ಭರ್ಜರಿ ಜಯ ಸಾಧಿಸಿತು.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಮಿಚೆಲ್ ಮಾರ್ಷ್ , ಐಡೆನ್ ಮಾರ್ಕ್ರಾಮ್ , ನಿಕೋಲಸ್ ಪೂರನ್ , ರಿಷಭ್ ಪಂತ್ (ನಾಯಕ) , ಆಯುಷ್ ಬದೋನಿ , ಡೇವಿಡ್ ಮಿಲ್ಲರ್ , ಅಬ್ದುಲ್ ಸಮದ್ , ದಿಗ್ವೇಶ್ ಸಿಂಗ್ ರಾಠಿ , ಶಾರ್ದೂಲ್ ಠಾಕೂರ್ , ಅವೇಶ್ ಖಾನ್ , ರವಿ ಬಿಷ್ಣೋಯ್.
ಇದನ್ನೂ ಓದಿ: IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ , ಪ್ರಭಾಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ) , ಶಶಾಂಕ್ ಸಿಂಗ್ , ಮಾರ್ಕಸ್ ಸ್ಟೋನಿಸ್ , ಗ್ಲೆನ್ ಮ್ಯಾಕ್ಸ್ ವೆಲ್ , ಸೂರ್ಯಾಂಶ್ ಶೆಡ್ಜ್ , ಮಾರ್ಕೊ ಯಾನ್ಸೆನ್ , ಲಾಕಿ ಫರ್ಗುಸನ್ , ಯುಜ್ವೇಂದ್ರ ಚಹಲ್ , ಅರ್ಷದೀಪ್ ಸಿಂಗ್.
Published On - 7:40 am, Wed, 2 April 25