AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬರೋಬ್ಬರಿ 32 ರನ್​ ಔಟ್; ಆರ್​ಸಿಬಿಗೆ ಕೊಹ್ಲಿಯ ಅನಗತ್ಯ ಆತುರವೇ ಅಪಾಯಕಾರಿ

Virat Kohli's Blunder: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾರೀ ಸೋಲನು ಅನುಭವಿಸಿತು. ಉತ್ತಮ ಆರಂಭದ ನಂತರವೂ, ವಿರಾಟ್ ಕೊಹ್ಲಿಯ ತಪ್ಪು ನಿರ್ಧಾರದಿಂದಾಗಿ ಫಿಲ್ ಸಾಲ್ಟ್ ರನ್ ಔಟ್ ಆದರು. ಇದು ಆರ್‌ಸಿಬಿಯ ರನ್ ದರವನ್ನು ಕುಸಿಯುವಂತೆ ಮಾಡಿದಲ್ಲದೆ ತಂಡದ ಸೋಲಿಗೆ ಕಾರಣವಾಯಿತು.

IPL 2025: ಬರೋಬ್ಬರಿ 32 ರನ್​ ಔಟ್; ಆರ್​ಸಿಬಿಗೆ ಕೊಹ್ಲಿಯ ಅನಗತ್ಯ ಆತುರವೇ ಅಪಾಯಕಾರಿ
Virat Kohli
ಪೃಥ್ವಿಶಂಕರ
|

Updated on:Apr 11, 2025 | 4:32 PM

Share

ಐಪಿಎಲ್ 2025 ರ (IPL 2025) 24ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಆರ್​ಸಿಬಿಗೆ ಇದು ತವರು ಮೈದಾನವಾಗಿದ್ದ ಕಾರಣ ಈ ಪಂದ್ಯದ ಗೆಲುವಿನ ಫೇವರೇಟ್ ಆರ್​ಸಿಬಿ ತಂಡವೇ ಆಗಿತ್ತು. ಆದರೆ ಕೊನೆಯಲ್ಲಿ ಪಂದ್ಯದ ಫಲಿತಾಂಶ ಹೊರಬಿದ್ದಾಗ ರಜತ್ ಪಡೆಗೆ ಹೀನಾಯ ಸೋಲು ಎದುರಾಯಿತು. ಈ ಸೋಲಿಗೆ ಆರ್​ಸಿಬಿಯ ಬ್ಯಾಟಿಂಗ್‌ ವೈಫಲ್ಯವೇ ಪ್ರಮುಖ ಕಾರಣವಾದರೂ, ಉತ್ತಮ ಆರಂಭದ ಹೊರತಾಗಿಯೂ ಕೊಹ್ಲಿ (Virat Kohli) ಮಾಡಿದ ಅದೊಂದು ತಪ್ಪು ತಂಡದ ಸೋಲಿಗೆ ಇನ್ನೊಂದು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.

ತವರಿನಲ್ಲಿ ಮತ್ತೆ ಎಡವಿದ ಆರ್​ಸಿಬಿ

ಈ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ಈ ಹಿಂದೆ ಗುಜರಾತ್ ವಿರುದ್ಧವೂ ತವರಿನಲ್ಲಿ ಮೊದಲ ಪಂದ್ಯವನ್ನಾಡಿದ್ದ ಆರ್​ಸಿಬಿ ಆ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಪಂದ್ಯವನ್ನು ಸೋತಿತ್ತು. ವಾಸ್ತವವಾಗಿ ಬೆಂಗಳೂರಿನಲ್ಲಿ ಟಾಸ್ ಗೆದ್ದ ತಂಡಕ್ಕೆ ಉಪಯೋಗ ಹೆಚ್ಚು. ಏಕೆಂದರೆ ಈ ಪಿಚ್​ನಲ್ಲಿ ಗುರಿ ಬೆನ್ನಟ್ಟುವ ತಂಡಕ್ಕೆ ಹೆಚ್ಚು ನೆರವಾಗಲಿದೆ. ಹಾಗಾಗಿ ಟಾಸ್ ಗೆದ್ದ ಪ್ರತಿಯೊಬ್ಬ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸುತ್ತಾನೆ. ಹೀಗಾಗಿ ಟಾಸ್ ಸೋತ ತಂಡ ಈ ಪಂದ್ಯವನ್ನು ಗೆಲ್ಲಬೇಕೆಂದರೆ ಬೃಹತ್ ಮೊತ್ತವನ್ನು ಎದುರಾಳಿ ತಂಡಕ್ಕೆ ಟಾರ್ಗೆಟ್ ಆಗಿ ನೀಡಬೇಕು.

ಸಾಲ್ಟ್ ರನೌಟ್ ದುಬಾರಿಯಾಯ್ತು

ಆ ಪ್ರಕಾರ ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಉತ್ತಮ ಆರಂಭವನ್ನೇ ಒದಗಿಸಿದರು. ಈ ಇಬ್ಬರು ಮೊದಲು 3 ಓವರ್​ಗಳಲ್ಲಿ ಬರೋಬ್ಬರಿ 53 ರನ್ ಕಲೆಹಾಕಿದರು. ಈ ಇಬ್ಬರ ಆಟ ನೋಡಿದವರು, ಆರ್​ಸಿಬಿ 200 ಕ್ಕಿಂತ ಹೆಚ್ಚು ರನ್ ಕಲೆಹಾಕುವುದು ಖಚಿತ ಎಂತಲೇ ಮಾತನಾಡಿಕೊಳ್ಳುತ್ತಿದ್ದರು. ಆದರೆ 4ನೇ ಓವರ್​ನಲ್ಲಿ ಎದುರಾದ ಗಂಡಾಂತರ ಆರ್​ಸಿಬಿಯನ್ನು ಸೋಲಿನ ದವಡೆಗೆ ಥಳ್ಳಿತು ಎಂದರೇ ತಪ್ಪಾಗಲಾರದು.

ಇದನ್ನೂ ಓದಿ
Image
ಆರ್​ಸಿಬಿಗೆ ಸೋಲಿನ ಶಾಕ್ ನೀಡಿದ ಕನ್ನಡಿಗ ಕೆಎಲ್ ರಾಹುಲ್
Image
1000 ಬೌಂಡರಿಗಳು; ಕೊಹ್ಲಿ ದಾಖಲೆಯ ಸಮೀಪ ಯಾರೂ ಇಲ್ಲ..!
Image
ತವರಿನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಆರ್​ಸಿಬಿ ಬ್ಯಾಟಿಂಗ್‌ ವಿಭಾಗ
Image
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್

ಕೊಹ್ಲಿ ಆತುರಕ್ಕೆ ಇನ್ನೆಷ್ಟು ಬಲಿ

ಆರ್​ಸಿಬಿ ಇನ್ನಿಂಗ್ಸ್​ನ 4ನೇ ಓವರ್ ಅನ್ನು ಅಕ್ಷರ್ ಪಟೇಲ್ ಬೌಲ್ ಮಾಡಿದರು. ಈ ಓವರ್​ನ ಐದನೇ ಎಸೆತವನ್ನು ಸಾಲ್ಟ್ ಎಕ್ಸ್​ಟ್ರಾ ಕವರ್​ನತ್ತ ಆಡಿದರು. ಅಲ್ಲಿ ಫಿಲ್ಡರ್ ಇದ್ದರೂ ಸಹ ನಾನ್ ಸ್ಟ್ರೈಕ್​ನಲ್ಲಿದ್ದ ವಿರಾಟ್ ಕೊಹ್ಲಿ ರನ್​ಗಾಗಿ ಓಡಲು ಆರಂಭಿಸಿದರು. ಹೀಗಾಗಿ ಸಾಲ್ಟ್ ಕೂಡ ನಾನ್ ಸ್ಟ್ರೈಕ್​ ತುದಿಯತ್ತ ಓಡಲಾರಂಭಿಸಿದರು. ಈ ವೇಳೆ ಫಿಲ್ಡರ್ ಅಲ್ಲೇ ಇರುವುದನ್ನು ಗಮನಿಸಿದ ಕೊಹ್ಲಿ ಅರ್ಧಕ್ಕೆ ಓಡಿದ ಬಳಿಕ ರನ್​ಗೆ ನಿರಾಕರಿಸಿದರು. ಹೀಗಾಗಿ ಸಾಲ್ಟ್ ಮತ್ತೆ ಕ್ರೀಸ್​ಗೆ ಓಡಲಾರಂಭಿಸಿದರು. ಆದರೆ ಅಲ್ಲೆ ನಿಂತಿದ್ದ ವಿಪ್ರಾಜ್ ನಿಗಮ್ ಚೆಂಡನ್ನು ಹಿಡಿದು ವಿಕೆಟ್​ ಕೀಪರ್​ನತ್ತ ಎಸೆದರು. ಕೂಡಲೇ ರಾಹುಲ್ ಸ್ಟಂಪ್ ಔಟ್ ಮಾಡಿದರು.

IPL 2025: 1000 ಬೌಂಡರಿಗಳು; ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ..!

34 ರನೌಟ್​ಗಳಲ್ಲಿ ಕೊಹ್ಲಿ ಅಪರಾದಿ

ಸಾಲ್ಟ್ ಕ್ರೀಸ್​ನಲ್ಲಿ ಇರುವವರೆಗೂ ಆರ್​ಸಿಬಿ ಶರವೇಗದಲ್ಲಿ ರನ್ ಕಲೆಹಾಕುತ್ತಿತ್ತು. ಆದರೆ ಸಾಲ್ಟ್ ವಿಕೆಟ್ ಪತನದ ಬಳಿಕ ತಂಡದ ರನ್​ ರೇಟ್ ಕುಸಿತ ಕಂಡಿದಲ್ಲದೆ, ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ಶುರುವಾಯಿತು. ಹೀಗಾಗಿ ತಂಡ ಅಲ್ಪ ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ವಾಸ್ತವವಾಗಿ ಇಲ್ಲದ ರನ್ ಕದಿಯಲು ಹೋಗಿ ಕೊಹ್ಲಿ ತನ್ನ ಸಹ ಆಟಗಾರನನ್ನು ರನೌಟ್ ಮಾಡಿಸಿದ್ದು ಇದೇ ಮೊದಲಲ್ಲ. ಅಥವಾ ಕೊಹ್ಲಿಯೇ ರನೌಟ್ ಆಗಿರುವುದು ಕೂಡ ಇದೇ ಮೊದಲಲ್ಲ. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಬರೋಬ್ಬರಿ 32 ಬಾರಿ ಈ ತಪ್ಪನ್ನು ಪುನರಾವರ್ತಿಸಿದ್ದಾರೆ.

ಐಪಿಎಲ್‌ ಆರಂಭದಿಂದಲೂ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ 32 ರನ್ ಔಟ್‌ಗಳಲ್ಲಿ ಭಾಗಿಯಾಗಿದ್ದರು. ಇದರಲ್ಲಿ, ಅವರು ಸ್ವತಃ 8 ಬಾರಿ ಔಟ್ ಆಗಿದ್ದರೆ, ತಮ್ಮ ಸಹ ಆಟಗಾರನನ್ನು 24 ಬಾರಿ ಔಟ್ ಮಾಡಿಸಿದ್ದಾರೆ. ಈ ಅಂಕಿ ಅಂಶವೇ ಹೇಳುವ ಪ್ರಕಾರ, ರನ್ ಕದಿಯುವ ಬರದಲ್ಲಿ ಕೊಹ್ಲಿ ತಾವು ರನ್ ಔಟ್ ಆಗುವುದರ ಜೊತೆಗೆ ತಮ್ಮ ಸಹ ಆಟಗಾರನನ್ನು ತಮ್ಮ ಆತುರದ ನಿರ್ಧಾರದಿಂದ ಬಲಿಪಶುವನ್ನಾಗಿ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Fri, 11 April 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ