IPL 2026: CSK ಗೆದ್ದರೆ RCB ಗೆ ಪ್ಲಸ್ ಪಾಯಿಂಟ್..!
IPL 2026 CSK vs SHR: ಇಂಡಿಯನ್ ಪ್ರೀಮಿಯರ್ ಲೀಗ್ನ 63ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸಿಎಸ್‌ಕೆ ತಂಡ ಗೆದ್ದರೆ ಅದು ಆರ್‌ಸಿಬಿ ತಂಡದ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಲೀಗ್ ಹಂತವು ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ 62 ಪಂದ್ಯಗಳು ಮುಗಿದಿದ್ದು, ಇದಾಗ್ಯೂ ಪ್ಲೇಆಫ್ಗೇರಿರುವುದು ಏಕೈಕ ತಂಡ. ಅದು ಸಹ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇನ್ನುಳಿದ 7 ತಂಡಗಳ ನಡುವೆ ಪ್ಲೇಆಫ್ ಪೈಪೋಟಿ ಮುಂದುವರೆದಿದೆ. ಈ ಪೈಪೋಟಿ ನಡುವೆ ಆರ್‌ಸಿಬಿ ತಂಡ ಟಾಪ್-2 ಮೇಲೆ ಕಣ್ಣಿಟ್ಟಿದೆ.
ಅಂದರೆ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಅಂಕಗಳನ್ನು ಪಡೆದರೆ ಮೊದಲ ಕ್ವಾಲಿಫೈಯರ್ ಆಡುವುದು ಖಚಿತ.
- ಪ್ಲೇಆಫ್ ಹಂತದಲ್ಲಿ ಮೊದಲ ಕ್ವಾಲಿಫೈಯರ್ ಆಡುವುದರಿಂದ ನೇರವಾಗಿ ಫೈನಲ್ಗೇರಲು ಅವಕಾಶ ದೊರೆಯಲಿದೆ. ಅಂದರೆ ಫಸ್ಟ್ ಕ್ವಾಲಿಫೈಯರ್ನಲ್ಲಿ ಅಂಕ ಪಟ್ಟಿಯಲ್ಲಿನ ಟಾಪ್-2 ತಂಡಗಳು ಮುಖಾಮುಖಿಯಾಗಲಿದ್ದು, ಈ ಮ್ಯಾಚ್ನಲ್ಲಿ ಗೆದ್ದ ತಂಡ ಫೈನಲ್ಗೆ ಪ್ರವೇಶಿಸುತ್ತದೆ.
- ಒಂದು ವೇಳೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಆಡಲು ಅವಕಾಶ ದೊರೆಯಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ ಹಾಗೂ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡಗಳು ಎರಡನೇ ಕ್ವಾಲಿಫೈಯರ್ ಆಡಲಿದೆ.
- ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡ ದ್ವಿತೀಯ ಕ್ವಾಲಿಫೈಯರ್ನಲ್ಲಿ ಗೆಲ್ಲುವ ಮೂಲಕ ಫೈನಲ್ಗೇರಬಹುದು. ಹೀಗಾಗಿಯೇ ಲೀಗ್ ಹಂತದ ಮುಕ್ತಾಯದ ವೇಳೆಗೆ ಆರ್‌ಸಿಬಿ ಟಾಪ್-2 ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ಲ್ಯಾನ್ ರೂಪಿಸುತ್ತಿದೆ.
ಆದರೆ ಆರ್‌ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನವೇ ಮೊದಲ ಕ್ವಾಲಿಫೈಯರ್ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು. ಅದು ಕೂಡ ಇಂದು ಇಂದು (ಮೇ 18) ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯದ ಮೂಲಕ ಎಂಬುದು ವಿಶೇಷ.
ಅಂದರೆ ಇಂದಿನ ಪಂದ್ಯದಲ್ಲಿ ಸಿಎಸ್‌ಕೆ ಜಯಗಳಿಸಿದರೆ, ಆರ್‌ಸಿಬಿ ತಂಡವು ಅಧಿಕೃತವಾಗಿ ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಏಕೆಂದರೆ ಇಂದಿನ ಮ್ಯಾಚ್ನಲ್ಲಿ ಎಸ್ಆರ್ಹೆಚ್ ತಂಡ ಸೋತರೆ ಮುಂದಿನ ಪಂದ್ಯವನ್ನು ಗೆದ್ದರೂ ಕೇವಲ 16 ಅಂಕಗಳನ್ನು ಮಾತ್ರ ಪಡೆಯಲಿದೆ.
ಅತ್ತ ಗುಜರಾತ್ ಟೈಟಾನ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ 18 ಅಂಕಗಳನ್ನು ಪಡೆಯಲಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಅಂಕ ಪಟ್ಟಿಯಲ್ಲಿ ಟಾಪ್-2 ಸ್ಥಾನಗಳಲ್ಲಿ ಕಾಣಿಸಿಕೊಳ್ಳಲಿದೆ.
ಅಂದರೆ ಇಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳಿಗೆ ಮಾತ್ರ ಇನ್ನುಳಿದಿರುವ ಪಂದ್ಯಗಳ ಮೂಲಕ 18 ಅಂಕಗಳನ್ನು ಗಳಿಸಲು ಅವಕಾಶವಿದೆ.
ಒಂದು ವೇಳೆ ಎಸ್ಆರ್ಹೆಚ್ ವಿರುದ್ಧ ಸಿಎಸ್‌ಕೆ ತಂಡ ಜಯ ಸಾಧಿಸಿದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಂಕ 14 ರಲ್ಲೇ ಉಳಿಯಲಿದೆ. ಇನ್ನು ಕೊನೆಯ ಮ್ಯಾಚ್ನಲ್ಲಿ ಎಸ್ಆರ್ಹೆಚ್ ಗೆದ್ದರೂ 16 ಅಂಕಗಳನ್ನು ಮಾತ್ರ ಹೊಂದಲಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಪ್ಲಸ್ ಪಾಯಿಂಟ್. ಏಕೆಂದರೆ ಸಿಎಸ್‌ಕೆ ಗೆದ್ದರೆ, 18 ಅಂಕಗಳನ್ನು ಹೊಂದಿರುವ ಆರ್‌ಸಿಬಿ ಮೊದಲ ಕ್ವಾಲಿಫೈಯರ್ ಆಡುವುದು ಖಚಿತವಾಗಲಿದೆ.
ಇದನ್ನೂ ಓದಿ: ಹಳೆಯ ದಾಖಲೆ ಧೂಳೀಪಟ… ವೈಭವ್ ಈಗ ‘ಸಿಕ್ಸರ್ ಸುಲ್ತಾನ್’
ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಇಂದಿನ ಮ್ಯಾಚ್ನಲ್ಲಿ ಸೋತರೆ, ಎಸ್ಆರ್ಹೆಚ್ ತಂಡದ ಅಂಕ 16 ಕ್ಕೇರಲಿದೆ. ಇದರಿಂದ ಆರ್‌ಸಿಬಿ ತಂಡವು ಟಾಪ್-2 ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ, ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಪ್ಲಸ್ ಪಾಯಿಂಟ್ ಆಗುವುದು ಖಚಿತ.

