AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs RCB: ಅಂಪೈರ್​ಯಿಂದ ಆರ್​​ಸಿಬಿಗೆ ಮಹಾಮೋಸ; ಸಿಡಿದೆದ್ದ ಕೊಹ್ಲಿ

Rajat Patidar's Controversial Out: ಐಪಿಎಲ್ 2026 ರಲ್ಲಿ ಆರ್‌ಸಿಬಿ-ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ರಜತ್ ಪಾಟಿದಾರ್‌ರ ವಿಕೆಟ್ ವಿವಾದಕ್ಕೆ ಕಾರಣವಾಗಿದೆ. ಜೇಸನ್ ಹೋಲ್ಡರ್ ಕ್ಯಾಚ್ ಹಿಡಿಯುವಾಗ ಚೆಂಡು ನೆಲಕ್ಕೆ ತಾಗಿದಂತೆ ಕಂಡರೂ, ಮೂರನೇ ಅಂಪೈರ್ ಪಾಟಿದಾರ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ವಿರಾಟ್ ಕೊಹ್ಲಿ ಮತ್ತು ಆಂಡಿ ಫ್ಲವರ್ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಆರ್‌ಸಿಬಿ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಈ ನಿರ್ಧಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

GT vs RCB: ಅಂಪೈರ್​ಯಿಂದ ಆರ್​​ಸಿಬಿಗೆ ಮಹಾಮೋಸ; ಸಿಡಿದೆದ್ದ ಕೊಹ್ಲಿ
Rajat Patidar
ಪೃಥ್ವಿಶಂಕರ
|

Updated on:Apr 30, 2026 | 9:26 PM

Share

ಪ್ರತಿ ಐಪಿಎಲ್​ನಂತೆ 2026 ರ ಐಪಿಎಲ್ (IPL 2026) ಕೂಡ ವಿವಾದಗಳಿಂದ ಹೊರತಾಗಿಲ್ಲ. ಆದರೆ ಈ ಆವೃತ್ತಿಯಲ್ಲಿ ಅಂಪೈರ್​ಗಳು ನೀಡಿರುವ ತೀರ್ಪುಗಳೇ ಸಾಕಷ್ಟು ವಿವಾದ ಹುಟ್ಟಿಸಿವೆ. ಇದೀಗ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 42ನೇ ಪಂದ್ಯದಲ್ಲೂ ಕೂಡ ಮತ್ತೊಂದು ವಿವಾದ ಭುಗಿಲೆದ್ದಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಅವರ ವಿಕೆಟ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ವಿವಾದ ಎಷ್ಟು ತೀವ್ರವಾಗಿತ್ತು ಎಂದರೆ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್ ಅಂಪೈರ್ ಜೊತೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆರ್​​ಸಿಬಿ ಅಭಿಮಾನಿಗಳು ಅಂಪೈರ್​​ಗೆ ಹಿಡಿಶಾಪ ಹಾಕುತ್ತಿದ್ದಾರೆ.

ವಿವಾದ ಹುಟ್ಟಿಸಿದ ಹೋಲ್ಡರ್ ಹಿಡಿದ ಕ್ಯಾಚ್

ನಾಯಕ ರಜತ್ ಪಾಟಿದಾರ್, ಎಂಟನೇ ಓವರ್‌ನಲ್ಲಿ ಅರ್ಷದ್ ಖಾನ್ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಅದೇ ಓವರ್​ನ ನಾಲ್ಕನೇ ಎಸೆತದಲ್ಲಿ ರಜತ್ ಮತ್ತೊಂದು ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಚೆಂಡು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ ಕಡೆ ಮೇಲಕ್ಕೆ ಹೋಯಿತು. ಬೌಂಡರಿ ಲೈನ್ ಬಳಿ ಫಿಲ್ಡಿಂಗ್ ಮಾಡುತ್ತಿದ್ದ ಜೇಸನ್ ಹೋಲ್ಡರ್ ಓಡಿಬಂದು ಅದ್ಭುತ ಕ್ಯಾಚ್ ಪಡೆದರು. ಆದಾಗ್ಯೂ, ಕ್ಯಾಚ್ ತೆಗೆದುಕೊಂಡ ನಂತರ ಅವರು ಚೆಂಡನ್ನು ಹಿಡಿದಿದ್ದ ಎಡಗೈ ನೆಲಕ್ಕೆ ತಾಗಿತು. ವಿಡಿಯೋದಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಪಾಟಿದಾರ್ ಔಟಾಗಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದಾಗ್ಯೂ, ಮೂರನೇ ಅಂಪೈರ್ ರಜತ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ನಂತರ ವಿರಾಟ್ ಕೊಹ್ಲಿ ಮತ್ತು ಆಂಡಿ ಫ್ಲವರ್ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ಆರಂಭಿಸಿದರು. ಇದರಿಂದ ಆಟವನ್ನು 2-3 ನಿಮಿಷಗಳ ಕಾಲ ನಿಲ್ಲಿಸಲಾಯಿತು.

ಪಾಟೀದಾರ್ ಅವರನ್ನು ಔಟ್ ನೀಡಿದ್ದು ಏಕೆ?

ರಜತ್ ಪಾಟಿದಾರ್ ಅವರನ್ನು ಔಟ್ ನೀಡಲು ನೀಡಲಾದ ಕಾರಣವೆಂದರೆ, ಹೋಲ್ಡರ್ ಕ್ಯಾಚ್ ಹಿಡಿಯುವಾಗ ಸಂಪೂರ್ಣ ನಿಯಂತ್ರಣದಲ್ಲಿದ್ದರು. ಅವರ ಕೈ ನೆಲಕ್ಕೆ ತಾಗಿತ್ತಾದರೂ ಅವರು ಕೈಬೆರಳುಗಳು ಚೆಂಡಿನ ಅಡಿಯಲಿದ್ದವು ಎಂಬುದು ಅಂಪೈರ್ ಅವರ ವಾದವಾಗಿದೆ. ಆದಾಗ್ಯೂ, ಅಂಪೈರ್ ಅವರ ಈ ನಿರ್ಧಾರವು ವಿವಾದಕ್ಕೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Thu, 30 April 26

Follow Us