AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಅಂಪೈರ್​ಗೆ ಬಾಲ್ ನೀಡದೆ ಸತಾಯಿಸಿದ ಟಿಮ್ ಡೇವಿಡ್​ಗೆ ಭಾರಿ ದಂಡ

Tim David IPL penalty: ಐಪಿಎಲ್ 2026ರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ಟಿಮ್ ಡೇವಿಡ್ ಅಂಪೈರ್ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ದಂಡ ವಿಧಿಸಲಾಗಿದೆ. ಚೆಂಡು ಹಿಂದಿರುಗಿಸಲು ಪದೇ ಪದೇ ನಿರಾಕರಿಸಿದ ಅವರ ಈ ಕೃತ್ಯ ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಅನ್ನು ಉಲ್ಲಂಘಿಸಿದೆ. ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡು ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.

IPL 2026: ಅಂಪೈರ್​ಗೆ ಬಾಲ್ ನೀಡದೆ ಸತಾಯಿಸಿದ ಟಿಮ್ ಡೇವಿಡ್​ಗೆ ಭಾರಿ ದಂಡ
Tim David
ಪೃಥ್ವಿಶಂಕರ
|

Updated on: Apr 13, 2026 | 6:42 PM

Share

ಐಪಿಎಲ್ 2026 (IPL 2026) ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ (MI vs RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ಇನ್ನಿಂಗ್ಸ್ ವೇಳೆ ಕ್ರೀಸ್​ನಲ್ಲಿದ್ದ ಟಿಮ್ ಡೇವಿಡ್ (Tim David), ಐಪಿಎಲ್ ನಿಯಮವನ್ನು ಉಲ್ಲಂಘಿಸಿದ ಕೃತ್ಯ ಎಸಗಿದರು. ಇದೀಗ ಅದಕ್ಕೆ ಪ್ರತಿಫಲವಾಗಿ ಟಿಮ್ ಡೇವಿಡ್​ಗೆ ಪಂದ್ಯ ಶುಲ್ಕ ಶೇಕಡಾ 25% ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಅನ್ನು ಉಲ್ಲಂಘಿಸಿದ್ದಾರೆ. ಈ ಸೆಕ್ಷನ್ ಪ್ರಕಾರ, ಪಂದ್ಯದ ಸಮಯದಲ್ಲಿ ಅಂಪೈರ್‌ಗಳ ಸೂಚನೆಗಳನ್ನು ಪಾಲಿಸದ ಆಟಗಾರನಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಹಾಗೆಯೇ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗುತ್ತದೆ. ಆ ಪ್ರಕಾರ ಡೇವಿಡ್​ಗೆ ಈ ಎರಡೂ ಶಿಕ್ಷೆಯನ್ನು ವಿಧಿಸಲಾಗಿದೆ.

ಮೇಲೆ ಹೇಳಿದಂತೆ ಆರ್‌ಸಿಬಿಯ ಇನ್ನಿಂಗ್ಸ್​ನ 18 ನೇ ಓವರ್‌ ಅನ್ನು ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದರು. ಈ ಓವರ್​ನ ಮೊದಲ ಎಸೆತವನ್ನು ಟಿಮ್ ಡೇವಿಡ್ ಬೌಂಡರಿ ಗಟ್ಟಿದರು. ಹಾರ್ದಿಕ್ ಮುಂದಿನ ಎಸೆತವನ್ನು ನೋಬಾಲ್ ಮಾಡಿದರು. ಹೀಗಾಗಿ ಫ್ರಿ ಹಿಟ್ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಟಿಮ್ ಡೇವಿಡ್ ಭರ್ಜರಿ ಸಿಕ್ಸರ್ ಹೊಡೆದರು. ನಂತರದ ಎಸೆತಕ್ಕೂ ಮುನ್ನ ಅಂಪೈರ್​ಗಳು ಚೆಂಡನ್ನು ಪರಿಶೀಲಿಸಿದಾಗ ಚೆಂಡು ಒದ್ದೆಯಾಗಿತ್ತು ಮತ್ತು ಅದರ ಆಕಾರವೂ ಸ್ವಲ್ಪ ಬದಲಾಗಿತ್ತು. ಆದ್ದರಿಂದ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು.

ಚೆಂಡಿನ ಜೊತೆ ಡೇವಿಡ್ ಆಟ

ಹೀಗಾಗಿ ಚೆಂಡುಗಳ ಪೆಟ್ಟಿಗೆ ಮೈದಾನಕ್ಕೆ ಬಂದಾಗ, ಟಿಮ್ ಡೇವಿಡ್ ಅದರಲ್ಲಿ ಒಂದು ಚೆಂಡನ್ನು ಎತ್ತಿಕೊಂಡು ಅದರೊಂದಿಗೆ ಆಟವಾಡಲು ಪ್ರಾರಂಭಿಸಿದರು. ಅಂಪೈರ್ ಪದೇ ಪದೇ ಚೆಂಡನ್ನು ಕೇಳುತ್ತಲೇ ಇದ್ದರೂ ಡೇವಿಡ್ ಮಾತ್ರ ಅದನ್ನು ಹಿಂತಿರುಗಿಸುವ ಬದಲು, ಆಟ ಮುಂದುವರೆಸಿದರು. ಡೇವಿಡ್‌ನ ಈ ಕ್ರಿಯೆಯಿಂದ ಅಂಪೈರ್ ಸ್ವಲ್ಪ ಸಿಟ್ಟಾದಂತೆ ತೋರುತ್ತಿತ್ತು.

ಟಿಮ್ ಡೇವಿಡ್ ಪದೇ ಪದೇ ಚೆಂಡನ್ನು ಪರಿಶೀಲಿಸುತ್ತಿದ್ದರು. ನಂತರ 20 ಓವರ್‌ನಲ್ಲಿ ಜಿತೇಶ್ ಅವರ ವಿಕೆಟ್ ಬಿದ್ದ ನಂತರ ಮತ್ತೆ ಚೆಂಡನ್ನು ತೆಗೆದುಕೊಂಡ ಡೇವಿಡ್, ಅಂಪೈರ್ ಪದೇ ಪದೇ ಚೆಂಡನ್ನು ಹಿಂದಿರುಗಿಸುವಂತೆ ಕೇಳಿದರು ಚೆಂಡನ್ನು ಹಿಂದಿರುಗಿಸಲಿಲ್ಲ. ಅಂಪೈರ್ ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ಅನುಸರಿಸಲು ಡೇವಿಡ್ ನಿರಾಕರಿಸಿದರು. ಇದೀಗ ಅದಕ್ಕೆ ಶಿಕ್ಷೆಯಾಗಿ ಡೇವಿಡ್​ಗೆ ದಂಡ ವಿಧಿಸಲಾಗಿದೆ. ಡೇವಿಡ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಪಂದ್ಯದ ಅಧಿಕಾರಿಗಳು ನೀಡಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ