AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಕ್ರಿಕೆಟಿಗನ ರೆಕಾರ್ಡ್​ ಉಡೀಸ್: ರೂಟ್ ಹೊಸ ವಿಶ್ವ ದಾಖಲೆ

India vs England: ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್​​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 387 ರನ್​​​ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 360 ರನ್​​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡ 27 ರನ್​ಗಳ ಜಯ ಸಾಧಿಸಿದೆ.

ಪಾಕ್ ಕ್ರಿಕೆಟಿಗನ ರೆಕಾರ್ಡ್​ ಉಡೀಸ್: ರೂಟ್ ಹೊಸ ವಿಶ್ವ ದಾಖಲೆ
Joe RootImage Credit source: Getty Images
ಝಾಹಿರ್ ಯೂಸುಫ್
|

Updated on:Jul 20, 2026 | 1:29 PM

Share

ಏಕದಿನ ಕ್ರಿಕೆಟ್​ನಲ್ಲಿ ಜೋ ರೂಟ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಪಾಕಿಸ್ತಾನದ ಮಾಜಿ ಆಟಗಾರ ಜಾವೆದ್ ಮಿಯಾಂದಾದ್ ಹೆಸರಿನಲ್ಲಿದ್ದ ವರ್ಲ್ಡ್​ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೂಟ್ ಒಮ್ಮೆಯೂ ಔಟ್ ಆಗಿರಲಿಲ್ಲ. ಆಡಿದ ಮೂರು ಇನಿಂಗ್ಸ್​ಗಳ ಮೂಲಕ ಕಲೆಹಾಕಿದ್ದು ಬರೋಬ್ಬರಿ 249 ರನ್​​ಗಳು.

ಈ 249 ರನ್​​ಗಳೊಂದಿಗೆ ದ್ವಿಪಕ್ಷೀಯ ಏಕದಿನ ಸರಣಿಯೊಂದರಲ್ಲಿ ಒಮ್ಮೆಯೂ ಔಟಾಗದೆ ಅತಿ ಹೆಚ್ಚು ರನ್ ಕಲೆಹಾಕಿದ ಜಗತ್ತಿನ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಹೆಸರಿನಲ್ಲಿತ್ತು.

  • 1982 ರಲ್ಲಿ ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಾವೆದ್ ಮಿಯಾಂದಾದ್ ಕ್ರಮವಾಗಿ 45*, 119*, 70* ರನ್ ಬಾರಿಸುವ ಮೂಲಕ ಒಟ್ಟು 234 ರನ್ ಕಲೆಹಾಕಿದ್ದರು.

ಈ ಮೂಲಕ ಮೂರು ಮ್ಯಾಚ್​​ಗಳ ಸರಣಿಯ ಮೂರು ಇನಿಂಗ್ಸ್​​ಗಳಲ್ಲೂ ಅಜೇಯರಾಗಿ ಉಳಿದು ಗರಿಷ್ಠ ಸ್ಕೋರ್​ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಜೋ ರೂಟ್ ಅಳಿಸಿ ಹಾಕಿದ್ದಾರೆ.

  • ಭಾರತದ ವಿರುದ್ಧದ ಪಂದ್ಯದ ಮೂರು ಮ್ಯಾಚ್​​​ಗಳ ಸರಣಿಯಲ್ಲಿ ರೂಟ್ ಕ್ರಮವಾಗಿ 76*, 99*, 74* ರನ್​​ಗಳ ಅಜೇಯ ಇನಿಂಗ್ಸ್ ಆಡಿದ್ದಾರೆ. ಈ ಮೂಲಕ ಕಲೆಹಾಕಿದ್ದು ಬರೋಬ್ಬರಿ 249 ರನ್​ಗಳು.

ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಜೇಯರಾಗಿ ಉಳಿದು ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಜೋ ರೂಟ್ ಪಾಲಾಯಿತು.

ಅಷ್ಟೇ ಅಲ್ಲದೆ ದ್ವಿಪಕ್ಷೀಯ ಸರಣಿಯೊಂದರಲ್ಲಿ ಅಜೇಯರಾಗಿ ಉಳಿದು ಗರಿಷ್ಠ ಸ್ಕೋರ್ ಗಳಿಸಿದ ವಿಶ್ವ ದಾಖಲೆಯನ್ನು ಕೂಡ ರೂಟ್ ತಮ್ಮದಾಗಿಸಿಕೊಂಡಿದ್ದಾರೆ.ಈ ಹಿಂದೆ ಈ ದಾಖಲೆ ಇಂಗ್ಲೆಂಡ್ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಹೆಸರಿನಲ್ಲಿತ್ತು.

  • ಜೋಸ್ ಬಟ್ಲರ್ 2022ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಸರಣಿಯಲ್ಲಿ 2 ಇನಿಂಗ್ಸ್​​ಗಳ (162*, 86*) ಮೂಲಕ ಔಟಾಗದೆ 248 ರನ್ ಗಳಿಸಿದ್ದರು. ಇದೀಗ ಜೋ ರೂಟ್ ಈ ದಾಖಲೆಯನ್ನು ಕೇವಲ 1 ರನ್‌ನಿಂದ ಮೀರಿ ನಿಂತಿದ್ದಾರೆ.
  • ಭಾರತದ ವಿರುದ್ಧದ ಸರಣಿಯ ಮೂರು ಇನಿಂಗ್ಸ್​​ಗಳಲ್ಲೂ ಅರ್ಧಶತಕ ಸಿಡಿಸಿರುವ ಜೋ ರೂಟ್ ಒಟ್ಟು 249 ರನ್​​ ಗಳಿಸಿದ್ದಾರೆ. ಈ ಮೂಲಕ ಒಡಿಐ ಸಿರೀಸ್​​ನಲ್ಲಿ ನಾಟೌಟ್ ಆಗಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸತತ 6 ಫಿಫ್ಟಿ ದಾಖಲೆ:

ಈ ಅದ್ಭುತ ಸರಣಿಯ ಮೂಲಕ ಜೋ ರೂಟ್ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸತತ 6 ಅರ್ಧಶತಕಗಳನ್ನು (61, 75, 111*, 76*, 99*, 74*) ಬಾರಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ರೂಟ್ ಭಾಜನರಾಗಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಸೆಂಚುರಿಗೆ ಸಚಿನ್ ಸಾರ್ವಕಾಲಿಕ ದಾಖಲೆ ಉಡೀಸ್

ಜೋ ರೂಟ್ ಅವರ ಈ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನವು ಕೇವಲ ಅವರ ರನ್ ಗಳಿಸುವ ಸಾಮರ್ಥ್ಯವನ್ನು ಮಾತ್ರವಲ್ಲ, ಅವರ ಅದ್ಭುತ ಸ್ಥಿರತೆ ಮತ್ತು ಸುದೀರ್ಘ ಕಾಲ ಕ್ರೀಸ್‌ನಲ್ಲಿ ನಿಲ್ಲುವ ದಕ್ಷತೆಯನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಿರುವುದು ಸುಳ್ಳಲ್ಲ.

Published On - 1:28 pm, Mon, 20 July 26

Follow Us
ಯಲಬುರ್ಗಾ: ರೈತರ ಮೇಲೆ ಪಿಎಸ್​ಐ ಗುರುರಾಜ್​ ದೌರ್ಜನ್ಯ ಆರೋಪ, ವಿಡಿಯೋ ವೈರಲ್
ಯಲಬುರ್ಗಾ: ರೈತರ ಮೇಲೆ ಪಿಎಸ್​ಐ ಗುರುರಾಜ್​ ದೌರ್ಜನ್ಯ ಆರೋಪ, ವಿಡಿಯೋ ವೈರಲ್
ತಾಯಿ ಪಾರ್ಥಿವ ಶರೀರದ ಎದುರು ಶ್ಲೋಕ ಪಠಿಸುತ್ತಲೇ ಪುತ್ರಿ ಅನಸೂಯಾ ಭಾವುಕ
ತಾಯಿ ಪಾರ್ಥಿವ ಶರೀರದ ಎದುರು ಶ್ಲೋಕ ಪಠಿಸುತ್ತಲೇ ಪುತ್ರಿ ಅನಸೂಯಾ ಭಾವುಕ
ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ
ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!