AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Josh Hazlewood: ಫೈನಲ್​ನಲ್ಲಿ ಆರ್‌ಸಿಬಿ ಗೆಲುವು ಖಚಿತ: ತಂಡದಲ್ಲಿದ್ದಾನೆ ಅತ್ಯಂತ ಅದೃಷ್ಟಶಾಲಿ ಆಟಗಾರ

RCB IPL 2025 Final: ಆರ್‌ಸಿಬಿ ತಂಡದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ಹ್ಯಾಜಲ್‌ವುಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಯಾವುದೇ ಫೈನಲ್ ಪಂದ್ಯವನ್ನು ಸೋತಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ 6 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇದ್ದ ತಂಡ ಇವೆಲ್ಲವುಗಳಲ್ಲಿ ಗೆದ್ದಿದೆ.

Josh Hazlewood: ಫೈನಲ್​ನಲ್ಲಿ ಆರ್‌ಸಿಬಿ ಗೆಲುವು ಖಚಿತ: ತಂಡದಲ್ಲಿದ್ದಾನೆ ಅತ್ಯಂತ ಅದೃಷ್ಟಶಾಲಿ ಆಟಗಾರ
Rcb (31)
Vinay Bhat
|

Updated on: May 31, 2025 | 9:35 AM

Share

ಬೆಂಗಳೂರು (ಮೇ. 31): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ 9 ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಆರ್‌ಸಿಬಿ, ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಪಂಜಾಬ್ ತಂಡವು ತನ್ನ ತವರು ನೆಲದಲ್ಲಿ ಆರ್‌ಸಿಬಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಸದ್ಯ ಬೆಂಗಳೂರು ಫಿನಾಲೆಗೆ ತಲುಪಿದ್ದರೂ ಈವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. 2016 ರಕ್ಕೂ ಮೊದಲು, ತಂಡವು 2011 ಮತ್ತು 2009 ರಲ್ಲಿ ಫೈನಲ್ ತಲುಪಿತ್ತು ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ವಿಶೇಷ ಎಂದರೆ ತಂಡವು ಫೈನಲ್‌ನಲ್ಲಿ ಎಂದಿಗೂ ಸೋತಿಲ್ಲದ ಆಟಗಾರನನ್ನು ಹೊಂದಿದೆ.

ಫೈನಲ್‌ನಲ್ಲಿ ಜೋಶ್ ಹ್ಯಾಜಲ್‌ವುಡ್‌ಗೆ ಅಜೇಯ ಗೆಲುವು:

ಆರ್‌ಸಿಬಿ ತಂಡದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ಹ್ಯಾಜಲ್‌ವುಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಯಾವುದೇ ಫೈನಲ್ ಪಂದ್ಯವನ್ನು ಸೋತಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ 6 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇದ್ದ ತಂಡ ಇವೆಲ್ಲವುಗಳಲ್ಲಿ ಗೆದ್ದಿದೆ. 2021 ರಲ್ಲಿ, ಹ್ಯಾಜಲ್‌ವುಡ್ ಸಿಡ್ನಿ ಸಿಕ್ಸರ್ಸ್‌ ಪರ ಚಾಂಪಿಯನ್ಸ್ ಲೀಗ್ ಟಿ20೦ ಫೈನಲ್‌ನಲ್ಲಿ ಆಡಿದ್ದರು. ಅವರ ತಂಡ ಗೆದ್ದಿತ್ತು. 2015 ರ ವಿಶ್ವಕಪ್ ಫೈನಲ್‌ನಲ್ಲಿ ಅವರು ತಂಡದ ಭಾಗವಾಗಿದ್ದರು. 2020 ರ ಬಿಗ್ ಬ್ಯಾಷ್ ಲೀಗ್, 2021 ರ ಐಪಿಎಲ್ ಮತ್ತು 2021 ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಕೂಡ ಇದ್ದರು. ಇದಲ್ಲದೆ, ಆಸ್ಟ್ರೇಲಿಯಾ 2023 ರ ವಿಶ್ವಕಪ್ ಗೆದ್ದಿತು. ಆ ಪಂದ್ಯದಲ್ಲಿ ಕೂಡ ಹ್ಯಾಜಲ್‌ವುಡ್ ಆಡಿದ್ದರು.

ಜೋಶ್ ಹ್ಯಾಜಲ್‌ವುಡ್ ಭಾಗವಹಿಸಿದ ಫೈನಲ್ಸ್:

  • 2012 CLT20 (ಸಿಡ್ನಿ ಸಿಕ್ಸರ್ಸ್‌ಗಾಗಿ ಗೆಲುವು)
  • 2015 WC (ಆಸ್ಟ್ರೇಲಿಯಾಕ್ಕಾಗಿ ಗೆಲುವು)
  • 2020 BBL (ಸಿಡ್ನಿ ಸಿಕ್ಸರ್ಸ್‌ಗಾಗಿ ಗೆಲುವು)
  • 2021 IPL (CSKಗಾಗಿ ಗೆಲುವು)
  • 2021 T20WC (ಆಸ್ಟ್ರೇಲಿಯಾಕ್ಕಾಗಿ ಗೆಲುವು)
  • 2023 WC (ಆಸ್ಟ್ರೇಲಿಯಾಕ್ಕಾಗಿ ಗೆಲುವು)

IPL 2025: ಆರ್​ಸಿಬಿಯ ಹೊಸ ಆಪತ್ಭಾಂಧವ ಜೋಶ್ ಹೇಜಲ್​ವುಡ್ ಎಷ್ಟು ಕೋಟಿಯ ಒಡೆಯ ಗೊತ್ತಾ?

ಇದನ್ನೂ ಓದಿ
Image
ಜೋಶ್ ಹೇಜಲ್​ವುಡ್ ಎಷ್ಟು ಕೋಟಿಯ ಒಡೆಯ ಗೊತ್ತಾ?
Image
ನನ್ನ ಗಂಡನಿಂದ ವಿಚ್ಛೇದನ ಪಡೆಯುತ್ತೇನೆ ಎಂದ ಆರ್​ಸಿಬಿ ಮಹಿಳಾ ಫ್ಯಾನ್
Image
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
Image
ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಳ್ಳುವ ಈ ಮಹಿಳೆ ಯಾರು ಗೊತ್ತೇ?

ಅತ್ಯುತ್ತಮ ಫಾರ್ಮ್‌ನಲ್ಲ ಹ್ಯಾಜಲ್‌ವುಡ್:

ಐಪಿಎಲ್ 2025 ರಲ್ಲಿ ಜೋಶ್ ಹ್ಯಾಜಲ್‌ವುಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಕ್ವಾಲಿಫೈಯರ್-1 ರಲ್ಲಿಯೂ ಅದ್ಭುತ ಬೌಲಿಂಗ್ ಮಾಡಿದರು. ಪವರ್‌ಪ್ಲೇನಲ್ಲಿಯೇ ಪಂಜಾಬ್‌ನ ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜೋಶ್ ಇಂಗ್ಲಿಸ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಇದಾದ ನಂತರ, ಪಿಬಿಕೆಸ್​ನ ಪ್ರಮುಖ ಆಲ್‌ರೌಂಡರ್ ಅಜ್ಮತುಲ್ಲಾ ಉಮರ್ಜೈ ಅವರ ವಿಕೆಟ್ ಅನ್ನು ಸಹ ಪಡೆದರು. ಒಟ್ಟು 3.1 ಓವರ್‌ಗಳಲ್ಲಿ 21 ರನ್‌ಗಳನ್ನು ನೀಡಿ 3 ವಿಕೆಟ್ ಕಿತ್ತರು.

ಈ ಋತುವಿನಲ್ಲಿ ಹ್ಯಾಜಲ್‌ವುಡ್ 11 ಪಂದ್ಯಗಳಲ್ಲಿ 21 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಅವರು ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 10 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಹ್ಯಾಜಲ್‌ವುಡ್ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಸರಾಸರಿಯಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ ಅವರಿಗಿಂತ ಮುಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ