AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್

Kane Williamson Retires from International Cricket: ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35ನೇ ವಯಸ್ಸಿನಲ್ಲಿ, 16 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಕಿವೀಸ್ ಪರ ಅತಿ ಹೆಚ್ಚು ರನ್ ಗಳಿಸಿ, 378 ಪಂದ್ಯಗಳಲ್ಲಿ 19,346 ರನ್ ಹಾಗೂ 48 ಶತಕಗಳನ್ನು ಸಿಡಿಸಿದ್ದಾರೆ. ನಾಯಕನಾಗಿ ಎರಡು ಐಸಿಸಿ ಫೈನಲ್‌ಗಳಿಗೆ ತಂಡವನ್ನು ಮುನ್ನಡೆಸಿ, ಒಂದು ಪ್ರಶಸ್ತಿಯನ್ನೂ ಗೆದ್ದಿದ್ದರು. ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ವಿಲಿಯಮ್ಸನ್ ಯುಗ ಈಗ ಮುಕ್ತಾಯಗೊಂಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್
Kane WilliamsonImage Credit source: PTI
ಪೃಥ್ವಿಶಂಕರ
|

Updated on:Jun 12, 2026 | 4:52 PM

Share

ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಳೆಪ ಫಾರ್ಮ್​ನಿಂದ ಬಳಲುತ್ತಿದ್ದ ವಿಲಿಯಮ್ಸನ್ ತಮ್ಮ 35 ನೇ ವಯಸ್ಸಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆಟದ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಅಂದರೆ 2025 ರಲ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಕೇನ್, ಬಹಳ ಸಮಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ತಮ್ಮ 16 ವರ್ಷಗಳ ವೃತ್ತಿಜೀವನಕ್ಕೆ ಪೂರ್ಣವಿರಾಮವನ್ನಿಟ್ಟಿರುವ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಪರ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಿವೀಸ್ ಪರ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರನೆನಿಸಿಕೊಂಡಿರುವ ಕೇನ್, ಇದುವರೆಗೆ ಆಡಿರುವ 378 ಪಂದ್ಯಗಳಲ್ಲಿ 19,346 ರನ್ ಗಳಿಸಿದ್ದಾರೆ. ಇದರಲ್ಲಿ 48 ಶತಕಗಳು ಸೇರಿವೆ. ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ತಂಡವನ್ನು ಮುನ್ನಡೆಸಿರುವ ವಿಲಿಯಮ್ಸನ್, ತಮ್ಮ ನಾಯಕತ್ವದಲ್ಲಿ ತಂಡವನ್ನು ಎರಡು ಐಸಿಸಿ ಪಂದ್ಯಾವಳಿಗಳ ಫೈನಲ್‌ಗೆ ಕೊಂಡೊಯ್ದಿದ್ದರು. ಅದರಲ್ಲಿ ಒಮ್ಮೆ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

ಟೆಸ್ಟ್ ಸರಣಿ ನಡುವೆ ನಿವೃತ್ತಿ ಘೋಷಣೆ

ವಾಸ್ತವವಾಗಿ ಕೇನ್ ವಿಲಿಯಮ್ಸನ್ ತಂಡದೊಂದಿಗೆ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಉಭಯ ತಂಡಗಳು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಸರಣಿಯ ಮೊದಲನೇ ಪಂದ್ಯ ಈಗಾಗಲೇ ಮುಗಿದಿದ್ದು, ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಹೀನಾಯ ಸೋಲು ಕಂಡಿತ್ತು. ಅನುಭವಿ ವಿಲಿಯಮ್ಸನ್ ಎರಡೂ ಇನ್ನಿಂಗ್ಸ್​ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆ ಸುತ್ತಿದ್ದ ಕೇನ್, ಎರಡನೇ ಇನ್ನಿಂಗ್ಸ್​ನಲ್ಲಿ 18 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ನಿವೃತ್ತಿ ಘೋಷಿಸಿರುವ ವಿಲಿಯಮ್ಸನ್ ಇನ್ನು ಮುಂದೆ ತಂಡದ ಭಾಗವಾಗಿರುವುದಿಲ್ಲ. ಹೀಗಾಗಿ ಅವರ ಬದಲಿಯಾಗಿ ತಂಡಕ್ಕೆ ಬದಲಿ ಆಟಗಾರನ ಆಯ್ಕೆಯಾಗಬೇಕಿದೆ.

ವಿಲಿಯಮ್ಸನ್ ವೃತ್ತಿಜೀವನ

2010 ರ ನವೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕೇನ್, ಮೂರು ತಿಂಗಳ ನಂತರ ಇದೇ ಟೀಂ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ತಂಡದ ಪರ 110 ಟೆಸ್ಟ್ ಪಂದ್ಯಗಳನ್ನಾಡಿರುವ ವಿಲಿಯಮ್ಸನ್, 9515 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧಶತಕಗಳು ಮತ್ತು 33 ಶತಕಗಳು ಸೇರಿವೆ. ಹಾಗೆಯೇ 175 ಏಕದಿನ ಪಂದ್ಯಗಳಲ್ಲಿ 48.69 ಸರಾಸರಿಯಲ್ಲಿ 7256 ರನ್ ಬಾರಿಸಿರುವ ಕೇನ್, ಇದರಲ್ಲಿ 47 ಅರ್ಧಶತಕಗಳು ಮತ್ತು 15 ಶತಕಗಳನ್ನು ಬಾರಿಸಿದ್ದರು.

AUS vs NZ: 12 ವರ್ಷಗಳ ನಂತರ ಹೀಗೊಂದು ಬೇಡದ ದಾಖಲೆ ಬರೆದ ಕೇನ್ ವಿಲಿಯಮ್ಸನ್

ತಂಡವನ್ನು ಚಾಂಪಿಯನ್ ಮಾಡಿದ್ದ ಕೇನ್

ಆಟಗಾರನಾಗಿ ಮಾತ್ರವಲ್ಲದೆ ವಿಲಿಯಮ್ಸನ್, 2016 ರಿಂದ 2024 ರವರೆಗೆ ಕಿವೀಸ್ ತಂಡದ ನಾಯಕತ್ವ ವಹಿಸಿದ್ದರು. ಅವರ ನಾಯಕತ್ವದಲ್ಲಿ ನ್ಯೂಜಿಲೆಂಡ್, ಭಾರತವನ್ನು ಸೋಲಿಸಿ 2021 ರಲ್ಲಿ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿತು. ಇದರ ಜೊತೆಗೆ ಕೇನ್, ತಂಡವನ್ನು 2019 ರ ಏಕದಿನ ವಿಶ್ವಕಪ್ ಮತ್ತು 2021 ರ ಟಿ20 ವಿಶ್ವಕಪ್‌ನ ಫೈನಲ್‌ಗೂ ಮುನ್ನಡೆಸಿದ್ದರು. ಹಾಗೆಯೇ 2019 ರ ಏಕದಿನ ವಿಶ್ವಕಪ್‌ನಲ್ಲಿ ಟೂರ್ನಮೆಂಟ್‌ ಆಟಗಾರ ಪ್ರಶಸ್ತಿ ಗೆದ್ದಿದ್ದ ಕೇನ್, 2019 ರಲ್ಲಿ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Fri, 12 June 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?