AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡಿಯಲ್ಲಿ ನನ್ನನ್ನೇ ನೋಡಿದಂತಾಯಿತು’; ಕೊಹ್ಲಿ ಜೊತೆಗಿನ ಮಾತುಕತೆ ಬಗ್ಗೆ ವಿಲಿಯಮ್ಸನ್ ಮಾತು!

ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನ ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದನ್ನು ಬಹಿರಂಗಪಡಿಸಿದ್ದಾರೆ. ಕೊಹ್ಲಿಯೊಂದಿಗಿನ ಮಾತುಕತೆ ತಮ್ಮ ನಿವೃತ್ತಿ ನಿರ್ಧಾರಕ್ಕೆ ಸ್ಪಷ್ಟತೆ ನೀಡಿತು ಎಂದಿದ್ದಾರೆ. ಇಬ್ಬರ ಕ್ರಿಕೆಟ್ ಮತ್ತು ವೈಯಕ್ತಿಕ ಜೀವನದ ಹೋಲಿಕೆಗಳು, ಸವಾಲುಗಳು ಮತ್ತು ಅನುಭವಗಳನ್ನು ಹಂಚಿಕೊಂಡಾಗ, ಅದು ಕನ್ನಡಿಯ ಮುಂದೆ ನಿಂತಂತೆ ಅನಿಸಿತು ಎಂದು ವಿಲಿಯಮ್ಸನ್ ಹೇಳಿದ್ದಾರೆ.

'ಕನ್ನಡಿಯಲ್ಲಿ ನನ್ನನ್ನೇ ನೋಡಿದಂತಾಯಿತು'; ಕೊಹ್ಲಿ ಜೊತೆಗಿನ ಮಾತುಕತೆ ಬಗ್ಗೆ ವಿಲಿಯಮ್ಸನ್ ಮಾತು!
ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on: Nov 09, 2026 | 8:12 PM

Share

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ನಿರ್ಧಾರ ಕೈಗೊಳ್ಳುವ ಒಂದು ದಿನದ ಮೊದಲು ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೆ ಎಂದು ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಜೊತೆಗಿನ ಆ ಮಾತುಕತೆ ತಮ್ಮ ಜೀವನದ ನಿರ್ಧಾರಕ್ಕೆ ಸ್ಪಷ್ಟತೆ ನೀಡಿತ್ತು. ಅಷ್ಟೇ ಅಲ್ಲ, ಅವರೊಂದಿಗೆ ಮಾತನಾಡಿದಾಗ ಕನ್ನಡಿಯ ಮುಂದೆ ನಿಂತು ತಮ್ಮನ್ನೇ ನೋಡಿಕೊಂಡ ಅನುಭವವಾಯಿತು ಎಂದು ವಿಲಿಯಮ್ಸನ್ ಹೇಳಿದ್ದಾರೆ.

ಅನುಭವಗಳು ಬಹುತೇಕ ಒಂದೇ ರೀತಿಯಲ್ಲಿದ್ದವು

ಬಿಟ್ವೀನ್ ಟು ಬಿಯರ್ಸ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿಲಿಯಮ್ಸನ್, ‘ನಾನು ನಂಬುವ ಮತ್ತು ನನ್ನ ಜೀವನಕ್ಕೆ ತುಂಬಾ ಹತ್ತಿರವಾಗಿರುವ ಹಲವು ಜನರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೆ. ನಿವೃತ್ತಿ ಘೋಷಿಸುವ ಹಿಂದಿನ ದಿನ ವಿರಾಟ್ ಜೊತೆ ಬಹಳ ಒಳ್ಳೆಯ ಮಾತುಕತೆ ನಡೆಸಿದೆ. ನಮ್ಮಿಬ್ಬರ ಕ್ರಿಕೆಟ್ ಜೀವನದ ಅನುಭವಗಳನ್ನು ಹಂಚಿಕೊಂಡಾಗ ಕನ್ನಡಿಯ ಮುಂದೆ ನಿಂತು ನಮ್ಮನ್ನೇ ನೋಡಿಕೊಂಡಂತೆ ಅನಿಸಿತು. ಇಷ್ಟು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ನಾವು ಎದುರಿಸಿದ ಸವಾಲುಗಳು, ಅನುಭವಗಳು ಬಹುತೇಕ ಒಂದೇ ರೀತಿಯಲ್ಲಿದ್ದವು.

ನಿವೃತ್ತಿಯಾಗುವ ಸಮಯ ಬಂದಿದೆ

ವಿರಾಟ್ ಇನ್ನೂ ಸ್ವಲ್ಪ ಮಟ್ಟಿಗೆ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ, ಅವರು ಕೂಡ ತಮ್ಮ ಜೀವನದಲ್ಲಿ ಇಂತಹ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನಮ್ಮಿಬ್ಬರಿಗೂ ನಾಯಕತ್ವದ ಜವಾಬ್ದಾರಿ ಇತ್ತು. ಒಂದೇ ಸಮಯದಲ್ಲಿ ಮಕ್ಕಳಾದರು. ಹೀಗೆ ಹಲವು ವಿಚಾರಗಳಲ್ಲಿ ನಮ್ಮ ಜೀವನ ಒಂದೇ ರೀತಿಯ ಹಾದಿಯಲ್ಲಿ ಸಾಗಿತ್ತು. ಬೇರೆ ಬೇರೆ ದೇಶಗಳ ಆಟಗಾರರಾಗಿದ್ದರೂ ನಮ್ಮ ನಡುವೆ ವಿಶೇಷವಾದ ಬಾಂಧವ್ಯವಿತ್ತು. ನಮ್ಮ ಮನಸ್ಸಿನಲ್ಲಿದ್ದ ಭಾವನೆಗಳು, ಕ್ರಿಕೆಟ್‌ನಿಂದ ದೂರವಾಗುವ ವಿಚಾರ ಹಾಗೂ ವೈಯಕ್ತಿಕ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಯಿತು. ಆ ಮಾತುಕತೆ ಮುಗಿಸಿ ಫೋನ್ ಇಟ್ಟಾಗ ನನ್ನ ಪತ್ನಿ ಹೋಟೆಲ್ ಕೊಠಡಿಗೆ ಬಂದರು. ಆಗ ನಾನು, ಇನ್ನು ನಿವೃತ್ತಿಯಾಗುವ ಸಮಯ ಬಂದಿದೆ ಎಂದು ಹೇಳಿದೆ’ ಎಂದು ಕೇನ್ ವಿವರಿಸಿದ್ದಾರೆ.

ವಿರಾಟ್ ಕೊಹ್ಲಿಗೆ ಯಾವುದೇ ಸಲಹೆ ನೀಡಲ್ಲ: ಗೆಲುವಿನ ಬಳಿಕ ಗಿಲ್ ಮಾತು!

ಕೇನ್ ವಿಲಿಯಮ್ಸನ್ ವೃತ್ತಿಜೀವನ

ಕೇನ್ ವಿಲಿಯಮ್ಸನ್ 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಈ ವರ್ಷದ ಜೂನ್‌ನಲ್ಲಿ ವಿದಾಯ ಘೋಷಿಸಿದ್ದರು. ನ್ಯೂಜಿಲೆಂಡ್ ಪರ ಹಲವು ದಾಖಲೆಗಳನ್ನು ನಿರ್ಮಿಸಿರುವ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೇಶದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಒಟ್ಟು 19,346 ರನ್ ಗಳಿಸಿದ್ದು, ಇದರಲ್ಲಿ 48 ಶತಕ ಹಾಗೂ ಆರು ದ್ವಿಶತಕಗಳು ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲೂ ವಿಲಿಯಮ್ಸನ್ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 33 ಶತಕ ಮತ್ತು ಆರು ದ್ವಿಶತಕಗಳ ನೆರವಿನಿಂದ 9,515 ರನ್ ಗಳಿಸಿ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಇನ್ನು ಭಾರತದ ವಿರಾಟ್ ಕೊಹ್ಲಿ ಕೂಡ 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, 9,230 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ