Vijay Hazare Trophy 2021-22: ಕರ್ನಾಟಕ vs ತಮಿಳುನಾಡು: ಕ್ವಾರ್ಟರ್ ಫೈನಲ್ ಆರಂಭಕ್ಕೂ ಮುನ್ನ ಮನೀಶ್ ಪಡೆಗೆ ಬಿಗ್ ಶಾಕ್
Karnataka vs Tamil Nadu: ತಮಿಳುನಾಡು ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆ ಹೊಂದಿದೆ. ಇದೇ ವಿಭಾಗದಲ್ಲಿದ್ದ ಕರ್ನಾಟಕ ಪ್ರಿ-ಕ್ವಾರ್ಟರ್ ಫೈನಲ್ ಗೆದ್ದು ಅಂತಿಮ ಎಂಟರ ಸುತ್ತಿಗೆ ಬಂದಿದೆ. ರವಿವಾರ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ರಾಜಸ್ಥಾನ ವಿರುದ್ಧ ಭರ್ಜರಿ ಜಯ ಗಳಿಸಿರುವುದು ಕರ್ನಾಟಕ ತಂಡದಲ್ಲಿ ಆಸೆ ಚಿಗುರಲು ಕಾರಣ.

ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಪ್ರೀಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ರಾಜಸ್ಥಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಕರ್ನಾಟಕ ತಂಡ ಇಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ (Karnataka vs Tamil Nadu) ಸೆಣೆಸಾಟ ನಡೆಸಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಟೂರ್ನಿಯ ಫೈನಲ್‌ನಲ್ಲಿ ನಿರಾಶೆ ಅನುಭವಿಸಿದ ಮನೀಶ್ ಪಾಂಡೆ (Manish Pandey) ಪಡೆಗೆ ತಮಿಳುನಾಡು ವಿರುದ್ಧ ಸೇಡಿ ತೀರಿಸಿಕೊಳ್ಳುವ ಪ್ಲಾನ್ನಲ್ಲಿದೆ. ಆದರೆ, ಇದಕ್ಕೂ ಮುನ್ನ ರಾಜ್ಯ ತಂಡಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ತಂಡದ ಸ್ಟಾರ್ ಆಟಗಾರರಾದ ರವಿಕುಮಾರ್ ಸಮರ್ಥ್ ಮತ್ತು ಕೃಷ್ಣಪ್ಪ ಗೌತಮ್ ಇಂಜುರಿಯಿಂದಾಗಿ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಪ್ರಮುಖ ಪಂದ್ಯದಲ್ಲೆ ಅನುಭವಿಗಳ ಅನುಪಸ್ಥಿತಿಯಲ್ಲಿ ಕರ್ನಾಟಕ ಕಣಕ್ಕಿಳಿಯುತ್ತಿದೆ.
TN vs KAR Dream11, TN vs KAR Dream11 Team, TN vs KAR Dream11 Prediction, TN vs KAR Dream11 Tips, TN vs KAR Dream11 Final, Check TN vs KAR Dream11 Captain, TN vs KAR Dream11 Vice-Captain, TN vs KAR Dream11 Probable Playing XI, TN vs KAR Dream11 Hints,Tamil Nadu vs Karnataka Dream11, TN vs KAR Dream11 Latest Update, TN vs KAR Dream11 Win ಭಾನುವಾರದ ಪಂದ್ಯದಲ್ಲಿ ಕರ್ನಾಟಕ 8 ವಿಕೆಟ್‌ಗಳಿಂದ ಆತಿಥೇಯ ತಂಡವನ್ನು ಮಣಿಸಿತ್ತು. ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ವಿರುದ್ಧವೂ ಇದೇ ಲಯದಲ್ಲಿ ಆಡಲು ತಂಡ ಸಜ್ಜಾಗಿದೆ. ಬಲಿಷ್ಠ ಬ್ಯಾಟಿಂಗ್ ಬಳಗ ತಂಡದ ಭರವಸೆಯಾಗಿದ್ದು ತಮಿಳುನಾಡು ತಂಡದಲ್ಲಿ ಸಮರ್ಥ ಆಲ್‌ರೌಂಡರ್‌ಗಳು ಇದ್ದಾರೆ.
Not so good morning. Ravikumar Samarth and Krishnappa Gowtham are ruled out of injuries.
Today, Karnataka will face Tamil Nadu in the quarter finals of Vijay Hazare Trophy 2021-22. Game starts at 9.00 and not aired on any platform.#VHTrophy #KARvTN
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) December 21, 2021
ಕರ್ನಾಟಕ ಪರ ನಾಯಕ ಮನೀಷ್ ಪಾಂಡೆ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಇವರ ಜೊತೆಗೆ ದೇವದತ್ ಪಡಿಕ್ಕಲ್ ತಂಡ ಸೇರಿದ್ದು ಸಾಕಷ್ಟು ನಿರೀಕ್ಷೆಗಳಿವೆ. ಮತ್ತೊಂದೆಡೆ, ಬೌಲಿಂಗ್‌ನಲ್ಲಿ ಮಿಂಚುತ್ತಿರುವ ಜೆ.ಸುಚಿತ್, ಕೆಸಿ ಕಾರ್ಯಪ್ಪ ನಡುವೆ ಪೈಪೋಟಿ ಏರ್ಪಡಲಿದೆ. ಅನುಭವಿ ವೇಗಿ ಪ್ರಸಿದ್ಧ ಕೃಷ್ಣ ತಂಡದ ಬೌಲಿಂಗ್ ಸಾರಥ್ಯ ವಹಿಸಲಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಕರ್ನಾಟಕ ತಂಡ ಸುಲಭ ಗೆಲುವಿನ ಕನಸಿನಲ್ಲಿದೆ.
ತ. ನಾಡು ತಂಡದ ಎನ್. ಜಗದೀಶನ್, ಬಾಬಾ ಇಂದ್ರಜಿತ್, ದಿನೇಶ್ ಕಾರ್ತಿಕ್, ವಾಷಿಂಗ್ಟನ್ ಸುಂದರ್ ಮತ್ತು ನಾಯಕ ವಿಜಯ ಶಂಕರ್ ಅವರೊಂದಿಗೆ ಸ್ಫೋಟಕ ಬ್ಯಾಟರ್ ಶಾರೂಖ್ ಖಾನ್ ಅವರನ್ನು ನಿಯಂತ್ರಿಸುವ ಸವಾಲು ಕರ್ನಾಟಕದ ಮುಂದೆ ಇದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಶಾರೂಖ್ ಖಾನ್ ಕರ್ನಾಟಕದಿಂದ ಜಯ ಕಸಿದುಕೊಂಡಿದ್ದು ಮರೆಯುವಂತಿಲ್ಲ.
ತನ್ನ ಬ್ಯಾಟಿಂಗ್ ಲೈನ್‌ಅಪ್ ಎಷ್ಟು ಬಲಿಷ್ಠ ಎಂಬುದನ್ನು ಕರ್ನಾಟಕ ಈ ಪಂದ್ಯದಲ್ಲಿ ತೋರಿಸಿಕೊಡಬೇಕಿದೆ. ತಮಿಳುನಾಡು ಬ್ಯಾಟಿಂಗ್ ಸರದಿಯೂ ಸದೃಢವಾಗಿದೆ. ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದವರಿಗೆ ಗೆಲುವು ಒಲಿಯಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಪಂದ್ಯ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ.
ಮಂಗಳವಾರ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಪ್ರದೇಶ ಮತ್ತು ಹಿಮಾಚಲಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ. ಹಿಮಾಚಲಪ್ರದೇಶ ನೇರ ಪ್ರವೇಶ ಪಡೆದಿದ್ದು ಉತ್ತರಪ್ರದೇಶ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶವನ್ನು ಮಣಿಸಿ ಎಂಟರ ಘಟ್ಟ ಪ್ರವೇಶಿಸಿತ್ತು.
Virat Kohli: ವಿರಾಟ್ ಕೊಹ್ಲಿಯ ಶತಕದ ಬರ ನೀಗಿಸುವ ಜವಾಬ್ದಾರಿ ಹೊತ್ತ ರಾಹುಲ್ ದ್ರಾವಿಡ್?: ಇಲ್ಲಿದೆ ಸಾಕ್ಷಿ
(Karnataka will face Tamil Nadu in the quarter finals of Vijay Hazare Trophy 2021-22 Ravikumar Samarth and Krishnappa Gowtham ruled out)