Mzansi Super League 2021: ಕೊರೋನಾಂತಕ ದಕ್ಷಿಣ ಆಫ್ರಿಕಾ ಸೂಪರ್ ಲೀಗ್ ರದ್ದು..!
Mzansi Super League 2021: ಇಂಡಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ ಮತ್ತು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಂತೆ ದಕ್ಷಿಣ ಆಫ್ರಿಕಾ 2018 ರಿಂದ ಮಝಾನ್ಸಿ ಸೂಪರ್ ಲೀಗ್ ಅನ್ನು ಆಯೋಜಿಸುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷ ನಡೆಯಬೇಕಿದ್ದ ಮಝಾನ್ಸಿ ಸೂಪರ್ ಲೀಗ್ (MSL 2021) ಅನ್ನು ಕೊರೋನಾಂತಕದ ಕಾರಣದಿಂದ ರದ್ದುಗೊಳಿಸಲಾಗಿದೆ. ಮಝಾನ್ಸಿ ಸೂಪರ್ ಲೀಗ್ನ 3ನೇ ಸೀಸನ್ ಅನ್ನು ಈ ಬಾರಿ ನವೆಂಬರ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೋನಾಂತಕದ ಕಾರಣ ಫೆಬ್ರವರಿಗೆ ಮುಂದೂಡಲಾಗಿತ್ತು. ಆದರೀಗ ಕೊರೋನಾ ಅಲೆಯ ಹೊಸ ರೂಪಾಂತರ ಓಮಿಕ್ರಾನ್ ಆತಂಕ ಹೆಚ್ಚಾದ ಕಾರಣ ಈ ಬಾರಿಯ ಟೂರ್ನಿಯನ್ನು ರದ್ದುಗೊಳಿಸುತ್ತಿರುವುದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ ಮತ್ತು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಂತೆ ದಕ್ಷಿಣ ಆಫ್ರಿಕಾ 2018 ರಿಂದ ಮಝಾನ್ಸಿ ಸೂಪರ್ ಲೀಗ್ ಅನ್ನು ಆಯೋಜಿಸುತ್ತಿದೆ. ಆದರೆ ಈ ಬಾರಿ ಪ್ರಯಾಣ ನಿರ್ಬಂಧಗಳು, ಬಯೋ ಬಬಲ್ ನಿಯಮ, ಓಮಿಕ್ರಾನ್ ಕೊರೋನಾಂತಕದ ಕಾರಣ ಈ ಸಲ ಟಿ20 ಲೀಗ್ ಅನ್ನು ಆಯೋಜಿಸದಿರಲು ಕ್ರಿಕೆಟ್ ಸೌತ್ ಆಫ್ರಿಕಾ ನಿರ್ಧರಿಸಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈಗಾಗಲೇ ದೇಶೀಯ ಟೂರ್ನಿಗಳನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. ಇದೀಗ ಮಝಾನ್ಸಿ ಸೂಪರ್ ಲೀಗ್ ಅನ್ನು ಕೂಡ ರದ್ದುಗೊಳಿಸಿದೆ. ಇದಾಗ್ಯೂ ಮತ್ತೊಂದೆಡೆ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಸರಣಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಕಳೆದ ಕೆಲ ದಿನಗಳಿಂದ ದಕ್ಷಿಣ ಆಫ್ರಿಕಾದಲ್ಲಿ 25 ಸಾವಿರಕ್ಕೂ ಹೆಚ್ಚು ಹೊಸ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಭಾರತ-ದಕ್ಷಿಣ ಆಫ್ರಿಕಾ ನಡುವಣ ಸರಣಿ ನಡೆಸುವುದು ಕೂಡ ದೊಡ್ಡ ಸಾವಾಲಾಗಲಿದೆ. ಈಗಾಗಲೇ ಮುಂಬರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಆಡಬೇಕಿದ್ದ ಸರಣಿಯನ್ನು ಮುಂದೂಡುವುದು ಸೂಕ್ತವೆಂದು ನೆದರ್ಲೆಂಡ್ಸ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಅತ್ತ ದಕ್ಷಿಣ ಆಫ್ರಿಕಾ ದೇಶೀಯ ಟೂರ್ನಿ ಹಾಗೂ ಮಝಾನ್ಸಿ ಸೂಪರ್ ಲೀಗ್ ಅನ್ನು ಕೂಡ ರದ್ದು ಮಾಡಿದೆ. ಇದಾಗ್ಯೂ ದಕ್ಷಿಣ ಆಫ್ರಿಕಾದಲ್ಲಿ ಉಳಿದಿರುವ ಟೀಮ್ ಇಂಡಿಯಾ ಕೊರೋನಾಂತಕದ ನಡುವೆ ಸರಣಿ ಆಡಲಿದೆಯಾ ಎಂಬುದೇ ಇದೀಗ ದೊಡ್ಡ ಪ್ರಶ್ನೆ.
ಇದನ್ನೂ ಓದಿ: PKL 2021: ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: IPL 2022: ಬರೋಬ್ಬರಿ 13 ನಾಯಕರನ್ನು ಬದಲಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: India vs south africa: ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಇರುವುದೇ ದಕ್ಷಿಣ ಆಫ್ರಿಕಾದ ದೊಡ್ಡ ಚಿಂತೆ
(Mzansi Super League 2021 called off due to Covid-19)
