Virat Kohli: ವಿರಾಟ್ ಕೊಹ್ಲಿಯ ಶತಕದ ಬರ ನೀಗಿಸುವ ಜವಾಬ್ದಾರಿ ಹೊತ್ತ ರಾಹುಲ್ ದ್ರಾವಿಡ್?: ಇಲ್ಲಿದೆ ಸಾಕ್ಷಿ
India vs South Africa: ಕೊಹ್ಲಿಯ ಶತಕದ ಬರ ನೀಗಿಸಲು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಹರಸಾಹಸ ಪಡುತ್ತಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್‌ನತ್ತ ಕೋಚ್ ರಾಹುಲ್ ದ್ರಾವಿಡ್, ವಿಶೇಷ ಗಮನಹರಿಸಿದ್ದಾರೆ. ಅಭ್ಯಾಸದ ವೇಳೆ ಕೊಹ್ಲಿ ಜತೆಗೆ ದ್ರಾವಿಡ್ ಹೆಚ್ಚಿನ ಕಳೆಯುತ್ತಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ (India vs South Africa) ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆಫ್ರಿಕಾ ಪಿಚ್ನ ಮರ್ಮವನ್ನು ತಿಳಿಯಲು ವಿರಾಟ್ ಕೊಹ್ಲಿ (Virat Kohli) ಪಡೆ ನೆಟ್ನಲ್ಲಿ ಬೆವರು ಹರಿಸುತ್ತಿದೆ. ಡಿಸೆಂಬರ್ 26 ರಂದು ಶುರುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಮೂಲಕ ಸರಣಿಗೆ ಚಾಲನೆ ಸಿಗಲಿದೆ. ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ (Team India) ಸಾಕಷ್ಟು ಬೆಳವಣಿಗೆಗಳು ನಡೆದವು. ಹೀಗಾಗಿ ಭಾರತ ತಂಡಕ್ಕೆ ಈ ಸರಣಿ ಮುಖ್ಯವಾಗಿದೆ. ಅಲ್ಲದೆ ಹರಿಣಗಳ ನೆಲದಲ್ಲಿ ಭಾರತ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಕೂಡ ಇದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಏಕೆಂದರೆ ಅದೇ ಶತಕಕ್ಕಾಗಿ. ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ಕಿಂಗ್ ಕೊಹ್ಲಿ ಈ ಬಾರಿಯಾದರೂ ಮೂರಂಕಿ ಗಡಿ ದಾಟುತ್ತಾರ ಎಂಬುದು ಕುತೂಹಲ.
ಕೊಹ್ಲಿಯ ಶತಕದ ಬರ ನೀಗಿಸಲು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಹರಸಾಹಸ ಪಡುತ್ತಿದ್ದಾರೆ. ಹೌದು, 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಹರ್ನಿಶಿ ಟೆಸ್ಟ್‌ನಲ್ಲಿ ಕೊಹ್ಲಿ ಕೊನೇ ಶತಕ ಸಿಡಿಸಿದ್ದರು. ಸದ್ಯ ಕೊಹ್ಲಿ ಅವರ ಬ್ಯಾಟಿಂಗ್‌ನತ್ತ ಕೋಚ್ ರಾಹುಲ್ ದ್ರಾವಿಡ್, ವಿಶೇಷ ಗಮನಹರಿಸಿದ್ದಾರೆ. ಅಭ್ಯಾಸದ ವೇಳೆ ಕೊಹ್ಲಿ ಜತೆಗೆ ದ್ರಾವಿಡ್ ಹೆಚ್ಚಿನ ಕಳೆಯುತ್ತಿದ್ದಾರೆ. ಕಳೆದ 13 ಟೆಸ್ಟ್‌ಗಳಲ್ಲಿ ಕೊಹ್ಲಿ ಕೇವಲ 26ರ ಸರಾಸರಿಯಲ್ಲಿ ರನ್ ಗಳಿಸಿದ್ದು, 74 ರನ್ ಅವರ ಗರಿಷ್ಠ ಗಳಿಕೆ ಎನಿಸಿದೆ. ಇದರ ನಡುವೆಯೂ ಅವರ ಟೆಸ್ಟ್ ವೃತ್ತಿಜೀವನದ ರನ್ ಸರಾಸರಿ 50ರ ಮೇಲೆಯೇ ಉಳಿದುಕೊಂಡಿದೆ. ಬ್ಯಾಟಿಂಗ್ ನಲ್ಲಿ ಹಲವು ದಾಖಲೆ ಬರೆದಿರುವ ಕೊಹ್ಲಿ ಅವರ ಬ್ಯಾಟಿಂಗ್ ಲೋಪಗಳನ್ನು ತಿದ್ದುವ ಮೂಲಕ ಹೊಸ ಹೊಳಪು ನೀಡುವತ್ತ ದ್ರಾವಿಡ್ ಗಮನ ಹರಿಸಿದ್ದು, ಈ ನಿಟ್ಟಿನಲ್ಲಿ ತರಬೇತಿ ಆರಂಭಿಸಿದ್ದಾರೆ.
ಸೆಂಚೂರಿಯನ್‌ನ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಭಾರತ ತಂಡ, ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಕಳೆದ 3 ದಿನಗಳಿಂದ ಅಭ್ಯಾಸ ನಡೆಸುತ್ತಿದೆ. ಅದರಲ್ಲೂ ಕ್ರೀಡಾಂಗಣದ ಸೆಂಟರ್ ಪಿಚ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಟ್ರೈನಿಂಗ್ ಸೆಷನ್ನಲ್ಲಿ ಆರ್ ಅಶ್ವಿನ್ ಬೌಲಿಂಗ್ ಅಭ್ಯಾಸ ನಡೆಸಿದರೆ, ನೆಟ್ ಸೆಷನ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಪ್ರಾಕ್ಟೀಸ್ ಬೆವರಿಳಿಸಿದರು. ಕ್ಲಾಸಿಕ್ ಬ್ಯಾಟರ್ ಆಗಿರುವ ಪೂಜಾರಗೆ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಒಂದು ರೀತಿ ಆ್ಯಸಿಡ್ ಟೆಸ್ಟ್ ಆಗಿದೆ. ರೋಹಿತ್ ಶರ್ಮಾ ಬದಲು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಪ್ರಿಯಾಂಕ್ ಪಾಂಚಾಲ್ ಕೂಡ ನೆಟ್ ಪ್ರಾಕ್ಟೀಸ್ ಮಾಡಿದರು. ಇನ್ನು ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತದ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್.
Virat Kohli: ಭಾರತ ತಂಡದ ಕೋಚ್ ದ್ರಾವಿಡ್ ದಾಖಲೆಯನ್ನೇ ಪುಡಿ ಮಾಡಲು ಸಜ್ಜಾದ ನಾಯಕ ವಿರಾಟ್ ಕೊಹ್ಲಿ
(Rahul Dravid was seen spending time with Test captain Virat Kohli For First Test In South Africa)
