11 ಆಟಗಾರರು ಅಲಭ್ಯ: ಆದರೂ ಮಕಾಡೆ ಮಲಗಿದ ಪಾಕಿಸ್ತಾನ್
New Zealand vs Pakistan: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಝಿಲೆಂಡ್ ತಂಡ ವಶಪಡಿಸಿಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ 73 ರನ್ಗಳ ಜಯ ಸಾಧಿಸಿದ್ದ ಪಾಕ್ ಪಡೆ ಇದೀಗ ದ್ವಿತೀಯ ಪಂದ್ಯದಲ್ಲಿ 84 ರನ್ಗಳ ಗೆಲುವು ದಾಖಲಿಸಿದೆ. ಇನ್ನು ಈ ಸರಣಿಯ ಮೂರನೇ ಪಂದ್ಯವು ಏಪ್ರಿಲ್ 5 ರಂದು ಬೇ ಓವಲ್ ಮೈದಾನದಲ್ಲಿ ನಡೆಯಲಿದೆ.

ಪ್ರಮುಖ ಆಟಗಾರರ ಅಲಭ್ಯತೆಯ ನಡುವೆಯೂ ನ್ಯೂಝಿಲೆಂಡ್ ತಂಡ ಪಾಕಿಸ್ತಾನ್ (New Zealand vs Pakistan) ವಿರುದ್ಧ ಸರಣಿ ಗೆದ್ದುಕೊಂಡಿದೆ. ಈ ಮೊದಲು ನಡೆದ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದ್ದ ಕಿವೀಸ್ ಪಡೆ ಇದೀಗ ಏಕದಿನ ಸರಣಿಯಲ್ಲೂ ವಿಜಯ ಪತಾಕೆ ಹಾರಿಸಿದೆ. ಹ್ಯಾಮಿಲ್ಟನ್ನ ಸೆಡೆನ್ ಪಾರ್ಕ್ ಮೈದಾನದಲ್ಲಿ ನಡೆದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಇದಾಗ್ಯೂ ವಿಕೆಟ್ ಕೀಪರ್ ಬ್ಯಾಟರ್ ಮಿಚೆಲ್ ಹೇ 78 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 99 ರನ್ ಬಾರಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಮುಹಮ್ಮದ್ ಅಬ್ಬಾಸ್ 41 ರನ್ ಬಾರಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 292 ರನ್ ಕಲೆಹಾಕಿತು.
293 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 32 ರನ್ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಫಹೀಮ್ ಅಶ್ರಫ್ 80 ಎಸೆತಗಳಲ್ಲಿ 73 ರನ್ ಬಾರಿಸಿದರು.
ಇನ್ನು ಕೊನೆಯ ಹಂತದಲ್ಲಿ ಅಬ್ಬರಿಸಿದ ನಸೀಮ್ ಶಾ 44 ಎಸೆತಗಳಲ್ಲಿ 51 ರನ್ ಬಾರಿಸಿದರು. ಈ ಮೂಲಕ 41.2 ಓವರ್ಗಳಲ್ಲಿ 208 ರನ್ ಬಾರಿಸಿ ಪಾಕಿಸ್ತಾನ್ ತಂಡ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಅದು ಕೂಡ ಪ್ರಮುಖ ಆಟಗಾರರ ಅಲಭ್ಯತೆಯ ನಡುವೆ ಎಂಬುದು ವಿಶೇಷ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ನಿಕ್ ಕೆಲ್ಲಿ , ರೈಸ್ ಮಾರಿಯು , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಮುಹಮ್ಮದ್ ಅಬ್ಬಾಸ್ , ಮಿಚೆಲ್ ಹೇ (ವಿಕೆಟ್ ಕೀಪರ್) , ನಾಥನ್ ಸ್ಮಿತ್ , ಜಾಕೋಬ್ ಡಫಿ , ಬೆನ್ ಸಿಯರ್ಸ್ , ವಿಲಿಯಂ ಒರೋಕ್.
ಇದನ್ನೂ ಓದಿ: IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಇಮಾಮ್-ಉಲ್-ಹಕ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಫಹೀಮ್ ಅಶ್ರಫ್ , ಮೊಹಮ್ಮದ್ ವಾಸಿಮ್ ಜೂನಿಯರ್ , ಹಾರಿಸ್ ರೌಫ್ , ಸುಫಿಯಾನ್ ಮುಖೀಮ್ , ಅಕಿಫ್ ಜಾವೇದ್.
ಈ ಸರಣಿಗೆ ಅಲಭ್ಯರಾಗಿರುವ ನ್ಯೂಝಿಲೆಂಡ್ ಆಟಗಾರರು:
- ಕೇನ್ ವಿಲಿಯಮ್ಸನ್
- ಮಿಚೆಲ್ ಸ್ಯಾಂಟ್ನರ್
- ರಚಿನ್ ರವೀಂದ್ರ
- ಡೆವೊನ್ ಕಾನ್ವೆ
- ಲಾಕಿ ಫರ್ಗುಸನ್
- ಗ್ಲೆನ್ ಫಿಲಿಪ್ಸ್
- ಮ್ಯಾಟ್ ಹೆನ್ರಿ
- ಕೈಲ್ ಜೇಮಿಸನ್
- ಟಾಮ್ ಲ್ಯಾಥಮ್
- ವಿಲ್ ಯಂಗ್
- ಇಶ್ ಸೋಧಿ
Published On - 12:32 pm, Wed, 2 April 25