AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ವರ್ಷಗಳ ಬಳಿಕ ಕಂಬ್ಯಾಕ್: 33 ಎಸೆತಗಳಲ್ಲಿ ‘ಶೂನ್ಯ’ದ ದಾಖಲೆ!

ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಯನ್ನು ಗೆದ್ದು, ಸಾವು-ಬದುಕಿನ ಹೋರಾಟ ಮುಗಿಸಿ, ಬರೋಬ್ಬರಿ 10 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಆಸ್ಟ್ರೇಲಿಯಾದ 'ಬ್ಯಾಗಿ ಗ್ರೀನ್' ಕ್ಯಾಪ್ ಧರಿಸಿ ಕ್ರೀಸ್‌ಗೆ ಇಳಿದಾಗ ಇಡೀ ಕ್ರಿಕೆಟ್ ಜಗತ್ತೇ ಆತನಿಗೆ ಎದ್ದು ನಿಂತು ಗೌರವ ಸಲ್ಲಿಸಿತ್ತು. ಆದರೆ, ವಿಧಿಯ ಆಟ ಮಾತ್ರ ತೀರಾ ಕ್ರೂರವಾಗಿತ್ತು!

10 ವರ್ಷಗಳ ಬಳಿಕ ಕಂಬ್ಯಾಕ್: 33 ಎಸೆತಗಳಲ್ಲಿ 'ಶೂನ್ಯ'ದ ದಾಖಲೆ!
Nic MaddinsonImage Credit source: GettyImages
ಝಾಹಿರ್ ಯೂಸುಫ್
|

Updated on:Oct 11, 2026 | 7:14 AM

Share

ಕ್ರಿಕೆಟ್ ಅಂಗಳದಲ್ಲಿ ಕೆಲವು ಕಂಬ್ಯಾಕ್‌ಗಳು ಕೇವಲ ರನ್‌ಗಳು ಅಥವಾ ವಿಕೆಟ್‌ಗಳ ಲೆಕ್ಕಾಚಾರವನ್ನು ಮೀರಿರುತ್ತವೆ. ಆದರೆ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ನಿಕ್ ಮ್ಯಾಡಿನ್ಸನ್ ಅವರ ಟೆಸ್ಟ್ ಕ್ರಿಕೆಟ್‌ಗೆ ಮರಳುವಿಕೆ ಮಾತ್ರ ಇತಿಹಾಸ ಪುಟ ಸೇರಿದದ್ದು ವಿಶಿಷ್ಟ ‘ಡಕ್ ಔಟ್’ ಮೂಲಕ! ಅದು ಸಣ್ಣಪುಟ್ಟ ಶೂನ್ಯ ಸರಣಿಯಲ್ಲ, ಬರೋಬ್ಬರಿ 33 ಎಸೆತಗಳನ್ನು ಎದುರಿಸಿ ಗಳಿಸಿದ ‘ಮಹಾ ಡಕ್ ಔಟ್’!

ಭೀಕರ ಕ್ಯಾನ್ಸರ್ ಕಾಯಿಲೆಯನ್ನು ಗೆದ್ದು, ಬರೋಬ್ಬರಿ 10 ವರ್ಷಗಳ ನಂತರ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಮ್ಯಾಡಿನ್ಸನ್, ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕ್ರೀಸ್‌ಗೆ ಇಳಿದಾಗ ಇಡೀ ಕ್ರಿಕೆಟ್ ಜಗತ್ತು ಅವರತ್ತ ಕಣ್ಣಿಟ್ಟಿತ್ತು. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಅವರು 33 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ  ಔಟ್ ಆಗುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಬೇಡದ ದಾಖಲೆಯೊಂದನ್ನು ಬರೆದರು.

ಕ್ರೀಸ್‌ನಲ್ಲಿ 49 ನಿಮಿಷಗಳ ಅನಗತ್ಯ ದಾಖಲೆ!

ಸೌತ್ ಆಫ್ರಿಕಾದ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಮ್ಯಾಡಿನ್ಸನ್, ಖಾತೆ ತೆರೆಯಲು ತೀವ್ರ ಹೋರಾಟ ನಡೆಸಿದರು. ಸೌತ್ ಆಫ್ರಿಕಾದ ಮಾರಕ ಬೌಲಿಂಗ್ ದಾಳಿಗೆ ಎದೆಯೊಡ್ಡಿ ಬರೋಬ್ಬರಿ 49 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತ ಅವರು, ಎದುರಿಸಿದ 33 ಎಸೆತಗಳಲ್ಲಿ ಒಂದೂ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮಾರ್ಕೊ ಯಾನ್ಸೆನ್ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಅವರ ಸುದೀರ್ಘ ಹೋರಾಟ ಅಂತ್ಯವಾಯಿತು. ಈ  ಇನ್ನಿಂಗ್ಸ್ ಮೂಲಕ ಮ್ಯಾಡಿನ್ಸನ್ ಕ್ರಿಕೆಟ್ ಇತಿಹಾಸದ ಕೆಲವು ಅನಪೇಕ್ಷಿತ ದಾಖಲೆಗಳ ಪುಟ ಸೇರಿದರು

  • ಆಸ್ಟ್ರೇಲಿಯಾದ ಸುದೀರ್ಘ ‘ಡಕ್ ಔಟ್’: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರನೊಬ್ಬ ಅತೀ ಹೆಚ್ಚು ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗದ ಹೀನಾಯ ದಾಖಲೆ ಇದೀಗ ಮ್ಯಾಡಿನ್ಸನ್ ಪಾಲಾಗಿದೆ. 2022 ರ ಆ್ಯಶಸ್ ಸರಣಿಯಲ್ಲಿ ಡೇವಿಡ್ ವಾರ್ನರ್ 22 ಎಸೆತಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದು ಹಿಂದಿನ ದಾಖಲೆಯಾಗಿತ್ತು.
  • 21ನೇ ಶತಮಾನದ ದಾಖಲೆ: 21ನೇ ಶತಮಾನದಲ್ಲಿ ವಿಶ್ವದ ಯಾವುದೇ ಟೆಸ್ಟ್ ಆರಂಭಿಕ ಆಟಗಾರ ಎದುರಿಸಿದ ಅತ್ಯಂತ ಸುದೀರ್ಘವಾದ ‘ಡಕ್ ಔಟ್’ ಇನ್ನಿಂಗ್ಸ್ ಇದಾಗಿದೆ.
  • ವಿಶ್ವ ಇತಿಹಾಸದಲ್ಲಿ 3ನೇ ಸ್ಥಾನ: ಟೆಸ್ಟ್ ಇತಿಹಾಸದಲ್ಲೇ ಆರಂಭಿಕ ಆಟಗಾರನೊಬ್ಬ ಅತ್ಯಧಿಕ ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟ್ ಆದ ಪಟ್ಟಿಯಲ್ಲಿ ಮ್ಯಾಡಿನ್ಸನ್ 3ನೇ ಸ್ಥಾನ ಪಡೆದಿದ್ದಾರೆ.

ಕ್ಯಾನ್ಸರ್ ವಿರುದ್ಧ ಗೆದ್ದು ಬಂದ ವೀರ!

ಮ್ಯಾಡಿನ್ಸನ್ ಅವರ ಈ ಶೂನ್ಯ ರನ್ ಗಳಿಕೆಯನ್ನು ನೋಡಿ ಕೆಲವರು ಟೀಕಿಸಬಹುದು, ಆದರೆ ಅವರು ಕ್ರೀಸ್‌ಗೆ ಮರಳಿ ಬ್ಯಾಟ್ ಹಿಡಿದು ನಿಂತಿದ್ದೇ ಒಂದು ಪವಾಡ. ಡಿಸೆಂಬರ್ 2016 ರಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಮ್ಯಾಡಿನ್ಸನ್, ಆ ಬಳಿಕ ತಂಡದಿಂದ ಹೊರಬಿದ್ದಿದ್ದರು. ಇದಾದ ಬಳಿಕ ಏಪ್ರಿಲ್ 2025 ರಲ್ಲಿ ಅವರಿಗೆ ಟೆಸ್ಟಿಕ್ಯುಲರ್ ಕ್ಯಾನ್ಸರ್ (ವೃಷಣ ಕ್ಯಾನ್ಸರ್) ಇರುವುದು ಪತ್ತೆಯಾಯಿತು. ಈ ಭೀಕರ ಕ್ಯಾನ್ಸರ್ ಅವರ ಶ್ವಾಸಕೋಶ ಮತ್ತು ದುಗ್ಧರಸ ಗ್ರಂಥಿಗಳಿಗೂ ಹರಡಿತ್ತು.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಗಳು ಹಾಗೂ ತೀವ್ರವಾದ ಕಿಮೋಥೆರಪಿ ಚಿಕಿತ್ಸೆಗೆ ಒಳಗಾದ ಮ್ಯಾಡಿನ್ಸನ್, ಸಾವಿನ ದವಡೆಯಿಂದ ಹೊರಬಂದರು. ಕ್ಯಾನ್ಸರ್ ಮುಕ್ತರಾದ ಕೇವಲ 12 ತಿಂಗಳುಗಳಲ್ಲೇ ಅವರು ಮತ್ತೆ ದೇಶಿ ಕ್ರಿಕೆಟ್ ಆಡಿ, ಇದೀಗ ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆಯ್ಕೆಯ ಸುತ್ತ ವಿವಾದ!

ಕ್ಯಾಮರೋನ್ ಗ್ರೀನ್ ಮತ್ತು ಜೋಶ್ ಇಂಗ್ಲಿಸ್ ಅವರ ಗಾಯದ ಸಮಸ್ಯೆಯಿಂದಾಗಿ ನಿಕ್ ಮ್ಯಾಡಿನ್ಸನ್ ಅವರಿಗೆ ದಿಢೀರ್ ಆಗಿ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ಮಾರ್ಚ್ 2025 ರ ನಂತರ ಯಾವುದೇ ಪ್ರಥಮ ದರ್ಜೆ ಕ್ರಿಕೆಟ್ ಆಡದ ಮ್ಯಾಡಿನ್ಸನ್ ಅವರನ್ನು ನೇರವಾಗಿ ಆರಂಭಿಕ ಆಟಗಾರನನ್ನಾಗಿ ಕಣಕ್ಕಿಳಿಸಿದ ಆಯ್ಕೆಗಾರರ ನಿರ್ಧಾರದ ವಿರುದ್ಧ ಆಸ್ಟ್ರೇಲಿಯಾದ ಮಾಜಿ ದಿಗ್ಗಜರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ನ ಗುಣಮಟ್ಟವನ್ನು “ಮಧ್ಯಮ ದರ್ಜೆಯ ರಾಶಿ” ಎಂದು ಕರೆದರೆ, ಮಾರ್ಕ್ ವಾ “ಆಯ್ಕೆಗಾರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಡಾರ್ಟ್ ಬೋರ್ಡ್‌ಗೆ ಬಾಣ ಎಸೆದಂತೆ ಆಟಗಾರರನ್ನು ಆಯ್ಕೆ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮೈಕಲ್ ಹಸ್ಸಿ ಔಟ್!

ಒಟ್ಟಾರೆಯಾಗಿ, ಸ್ಕೋರ್ ಬೋರ್ಡ್‌ನಲ್ಲಿ ನಿಕ್ ಮ್ಯಾಡಿನ್ಸನ್ ಹೆಸರಿನ ಮುಂದೆ ‘0’ ಎಂದು ಕಾಣಿಸಬಹುದು. ಆದರೆ, ಕ್ಯಾನ್ಸರ್‌ನಂತಹ ಹೆಮ್ಮಾರಿಯನ್ನು ಮೆಟ್ಟಿ ನಿಂತು, 10 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ‘ಬ್ಯಾಗಿ ಗ್ರೀನ್’ (ಆಸ್ಟ್ರೇಲಿಯಾ ಟೆಸ್ಟ್ ಕ್ಯಾಪ್) ಧರಿಸಿ ಮೈದಾನಕ್ಕಿಳಿದ ಅವರ ಸಾಹಸ ಕ್ರಿಕೆಟ್ ಲೋಕಕ್ಕೆ ಸದಾ ಸ್ಪೂರ್ತಿಯಾಗಿ ಉಳಿಯಲಿದೆ.

Published On - 7:13 am, Sun, 11 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ