25 ಸಿಕ್ಸ್, 429 ರನ್ಸ್: ವರ್ಷದ ಮೊದಲ ಪಂದ್ಯದಲ್ಲೇ ರನ್ ಸುರಿಮಳೆ
New Zealand vs Sri Lanka: ಶ್ರಿಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯನ್ನು ನ್ಯೂಝಿಲೆಂಡ್ 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲೆರಡು ಪಂದ್ಯಗಳ ಮೂಲಕ ಸರಣಿ ವಶಪಡಿಸಿಕೊಂಡಿದ್ದ ಕಿವೀಸ್ ಪಡೆ ವರ್ಷದ ಮೊದಲ ಮ್ಯಾಚ್ನಲ್ಲಿ ಲಂಕಾ ವಿರುದ್ಧ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಅದು ಕೂಡ ಕೇವಲ 7 ರನ್ಗಳ ಅಂತರದಿಂದ ಎಂಬುದು ವಿಶೇಷ.
2025ರ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರನ್ಗಳ ಸುರಿಮಳೆಯಾಗಿದೆ. ಹೀಗೆ ರನ್ಗಳ ಸುರಿಮಳೆ ಸುರಿಸಿದ್ದು ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ತಂಡಗಳು. ಸಾಕ್ಷಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾದ ಪಾತುಮ್ ನಿಸ್ಸಂಕಾ (14) ಹಾಗೂ ಕುಸಾಲ್ ಮೆಂಡಿಸ್ (22) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್ ಪೆರೇರಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಸಿಸಿ ಮಿಂಚಿದರು.
ಸಾಕ್ಷಟನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಬಾರಿಸಿ ಕುಸಾಲ್ ಪೆರೇರಾ ಕಿವೀಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 46 ಎಸೆತಗಳಲ್ಲಿ ಪೆರೇರಾ ಬ್ಯಾಟ್ನಿಂದ 4 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 101 ರನ್ ಮೂಡಿಬಂತು.
ಈ ಮೂಲಕ ಕುಸಾಲ್ ಪೆರೇರಾ ವರ್ಷದ ಮೊದಲ ಟಿ20 ಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ನಾಯಕ ಚರಿತ್ ಅಸಲಂಕಾ 24 ಎಸೆತಗಳಲ್ಲಿ 5 ಸಿಕ್ಸ್ಗಳೊಂದಿಗೆ 46 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವು 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.
ಕುಸಾಲ್ ಪೆರೇರಾ ಭರ್ಜರಿ ಸೆಂಚುರಿ ವಿಡಿಯೋ:
1️⃣st century of 2️⃣0️⃣2️⃣5️⃣ ✅ 1️⃣st T20I century of his career ✅
Kusal Perera ensured the 🆕 Year started with a bang for Sri Lanka 🦁🇱🇰
Watch #NZvSL 3rd T20I highlights on #SonyLIV 📲 pic.twitter.com/wOVvvDwtVx
— Sony LIV (@SonyLIV) January 2, 2025
219 ರನ್ಗಳ ಗುರಿ:
ಶ್ರೀಲಂಕಾ ನೀಡಿದ 219 ರನ್ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಟಿಮ್ ರಾಬಿನ್ಸನ್ (37) ಹಾಗೂ ರಚಿನ್ ರವೀಂದ್ರ (69) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತಕ್ಕೊಳಗಾದ ನ್ಯೂಝಿಲೆಂಡ್ ತಂಡವು ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 211 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ವರ್ಷದ ಮೊದಲ ಪಂದ್ಯದಲ್ಲೇ ಶ್ರೀಲಂಕಾ ತಂಡವು 7 ರನ್ಗಳ ರೋಚಕ ಜಯ ಸಾಧಿಸಿತು.
25 ಸಿಕ್ಸ್, 429 ರನ್ಸ್:
ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಮೂಡಿಬಂದ ಒಟ್ಟು ಸ್ಕೋರ್ 429 ರನ್ಗಳು. ಹಾಗೆಯೇ ಈ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟರ್ಗಳು 12 ಸಿಕ್ಸ್ ಬಾರಿಸಿದರೆ, ನ್ಯೂಝಿಲೆಂಡ್ ದಾಂಡಿಗರು 13 ಸಿಕ್ಸ್ಗಳನ್ನು ಸಿಡಿಸಿದ್ದರು. ಈ ಮೂಲಕ 2025ರ ಮೊದಲ ಟಿ20 ಪಂದ್ಯದಲ್ಲೇ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಒದಗಿಸಿದ್ದರು.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಿಮ್ ರಾಬಿನ್ಸನ್ , ರಚಿನ್ ರವೀಂದ್ರ , ಮಾರ್ಕ್ ಚಾಪ್ಮನ್ , ಗ್ಲೆನ್ ಫಿಲಿಪ್ಸ್ , ಡೇರಿಲ್ ಮಿಚೆಲ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಮೈಕೆಲ್ ಬ್ರೇಸ್ವೆಲ್ , ಮಿಚೆಲ್ ಸ್ಯಾಂಟ್ನರ್ (ನಾಯಕ) , ಜಕಾರಿ ಫೌಲ್ಕ್ಸ್ , ಮ್ಯಾಟ್ ಹೆನ್ರಿ , ಜಾಕೋಬ್ ಡಫಿ.
ಇದನ್ನೂ ಓದಿ: ಟೀಮ್ ಇಂಡಿಯಾ ನಾಯಕತ್ವದ ಮೇಲೆ ಕಣ್ಣು: ಮಿಸ್ಟರ್ ಫಿಕ್ಸ್ ಇಟ್ ಯಾರು?
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಕುಸಾಲ್ ಪೆರೇರಾ , ಅವಿಷ್ಕ ಫೆರ್ನಾಂಡೋ , ಚರಿತ್ ಅಸಲಂಕಾ (ನಾಯಕ) , ಭಾನುಕಾ ರಾಜಪಕ್ಸೆ , ವನಿಂದು ಹಸರಂಗ , ಚಮಿಂದು ವಿಕ್ರಮಸಿಂಘೆ , ಮಹೇಶ್ ತೀಕ್ಷಣ , ಬಿನುರ ಫೆರ್ನಾಂಡೋ , ನುವಾನ್ ತುಷಾರ.