AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ್ ತಂಡದ WTC ಫೈನಲ್ ಕನಸು ನುಚ್ಚುನೂರು!

ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಹೀನಾಯ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಪಾಕಿಸ್ತಾನ್ ತಂಡ, ದ್ವಿತೀಯ ಪಂದ್ಯದಲ್ಲಿ 194 ರನ್‌ಗಳಿಂದ ಪರಾಜಯಗೊಂಡಿದೆ. ಈ ಸತತ ಸೋಲುಗಳೊಂದಿಗೆ ಪಾಕ್ ಪಡೆಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಕನಸು ನುಚ್ಚುನೂರಾಗಿದೆ.

ಪಾಕಿಸ್ತಾನ್ ತಂಡದ WTC ಫೈನಲ್ ಕನಸು ನುಚ್ಚುನೂರು!
Pakistan Image Credit source: GettyImages
ಝಾಹಿರ್ ಯೂಸುಫ್
|

Updated on: Aug 31, 2026 | 10:19 AM

Share

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಫೈನಲ್ ತಲುಪುವ ಪಾಕಿಸ್ತಾನ್ ಕ್ರಿಕೆಟ್ ತಂಡದ ಕನಸು ನುಚ್ಚುನೂರಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿನೊಂದಿಗೆ ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ್ ತಂಡ, ಲಂಡನ್‌ನ ದಿ ಓವಲ್‌ನಲ್ಲಿ ನಡೆಯಲಿರುವ ಮಹತ್ವದ ಫೈನಲ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.

ಲಾರ್ಡ್ಸ್ ಟೆಸ್ಟ್ ಸೋಲಿನ ಆಘಾತ!

ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ್ ತಂಡವು ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 194 ರನ್‌ಗಳ ದೊಡ್ಡ ಅಂತರದ ಸೋಲನ್ನು ಒಪ್ಪಿಕೊಂಡಿತು. ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಸರಣಿ ಸೋಲಿನೊಂದಿಗೆ ಪಾಕಿಸ್ತಾನ್ ತಂಡ ಅಧಿಕೃತವಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ರೇಸ್​ನಿಂದ ಹೊರಬಿದ್ದಂತಾಗಿದೆ.

ಪಾತಾಳದಲ್ಲಿ ಪಾಕಿಸ್ತಾನ್:

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ್ ತಂಡ ಕೊನೆಯ ಸ್ಥಾನದಲ್ಲಿದೆ. ಈವರೆಗೆ ಆಡಿದ 8 ಪಂದ್ಯಗಳಲ್ಲಿ ಪಾಕ್ ಪಡೆ ಕೇವಲ 2 ಜಯ ಮತ್ತು 6 ಸೋಲುಗಳೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ. ಈ ಹಿನ್ನಡೆಯೊಂದಿಗೆ ಪಾಕಿಸ್ತಾನ್ ತಂಡ ಹೊಂದಿರುವ ಪಾಯಿಂಟ್ಸ್ ಪರ್ಸೆಂಟೇಜ್ ಕೇವಲ 16.67% ಮಾತ್ರ.

ಹೀಗಾಗಿಯೇ ಮುಂಬರುವ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹ ಅಗ್ರ ಎರಡು ಸ್ಥಾನಕ್ಕೇರಲು ಅಗತ್ಯವಿರುವ ಕನಿಷ್ಠ ಸರಾಸರಿಯನ್ನು ತಲುಪಲು ಪಾಕಿಸ್ತಾನ್ ತಂಡಕ್ಕೆ ಸಾಧ್ಯವಿಲ್ಲ.

ಪಾಕ್ ಪಡೆ ಹೊರಬೀಳಲು ಕಾರಣಗಳೇನು?

ನಿಧಾನಗತಿಯ ಓವರ್ ರೇಟ್ ದಂಡ: ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್‌ನಲ್ಲಿ ಸೋತಿದ್ದಲ್ಲದೆ, ನಿಧಾನಗತಿಯ ಓವರ್ ರೇಟ್‌ಗಾಗಿ ಪಾಕಿಸ್ತಾನ್ ತಂಡದ 8 ಅಂಕಗಳನ್ನು ಕಡಿತಗೊಳಿಸಿತು. ಇದರಿಂದಾಗಿ ಪಾಕಿಸ್ತಾನ್ ತಂಡವು ಅಂಕಪಟ್ಟಿಯಲ್ಲಿ ತೀವ್ರ ಕುಸಿತ ಕಂಡು ಕೊನೆಯ ಸ್ಥಾನದತ್ತ ಮುಖ ಮಾಡಿದೆ.

ಸರಣಿ ಸೋಲುಗಳು: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದ ನಂತರ, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ 194 ರನ್‌ಗಳ ಹೀನಾಯ ಸೋಲು ಕಂಡಿತು. ಸತತ ಸೋಲುಗಳು ಪಾಕಿಸ್ತಾನ್ ತಂಡದ ಫೈನಲ್​ ಲೆಕ್ಕಾಚಾರಗಳನ್ನು  ತಲೆಕೆಳಗಾಗಿಸಿದೆ.

ಯಾಕೆ ಫೈನಲ್​ಗೇರಲು ಸಾಧ್ಯವಿಲ್ಲ?

ಪಾಕಿಸ್ತಾನ್ ತಂಡಕ್ಕೆ ಇನ್ನು ಮುಂದೆ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ವಿರುದ್ಧ ತಲಾ 2 ಪಂದ್ಯಗಳು ಬಾಕಿ ಇವೆ. ಆದರೆ, ಈ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹ ಅಗ್ರ ಎರಡು ಸ್ಥಾನಕ್ಕೇರಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಐಸಿಸಿಯ ಅಂಕಗಳ ಶೇಕಡಾವಾರು ನಿಯಮ.

ಗರಿಷ್ಠ ಅಂಕಗಳ ಮಿತಿ: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸತತ ಸೋಲು ಕಂಡ ಬಳಿಕ ಪಾಕಿಸ್ತಾನದ PCT ಪಾತಾಳಕ್ಕೆ ಕುಸಿದಿದೆ. ಈಗ ಅವರಿಗಿರುವ ಪಂದ್ಯಗಳ ಸಂಖ್ಯೆ ತೀರಾ ಕಡಿಮೆ. ಪಾಕಿಸ್ತಾನ್ ತಂಡವು ತನ್ನ ಮುಂಬರುವ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದರೂ ಸಹ, ಅವರ ಗರಿಷ್ಠ PCT ಶೇಕಡಾ 50% ದಾಟಲು ಸಾಧ್ಯವಿಲ್ಲ.

ಟಾಪ್ ತಂಡಗಳ ಸದ್ಯದ ಸ್ಥಿತಿ: ಪ್ರಸ್ತುತ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ (80%) ಮತ್ತು ಸೌತ್ ಆಫ್ರಿಕಾ (75%) ತಂಡಗಳು ಈಗಾಗಲೇ ಪಾಕಿಸ್ತಾನ ತಲುಪಬಹುದಾದ ಗರಿಷ್ಠ ಮಿತಿಗಿಂತ (50%) ಬಹುದೂರ ಮುನ್ನಡೆದಿವೆ.

ರೇಸ್‌ನಲ್ಲಿರುವ ಇತರ ತಂಡಗಳು: ನ್ಯೂಝಿಲೆಂಡ್, ಬಾಂಗ್ಲಾದೇಶ್ ಮತ್ತು ಭಾರತ ತಂಡಗಳು ಕೂಡ 50% ಕ್ಕಿಂತ ಹೆಚ್ಚಿನ PCT ಹೊಂದಿವೆ. ಹೀಗಾಗಿ ಪಾಕಿಸ್ತಾನ ಇನ್ನುಳಿದ ಪಂದ್ಯಗಳನ್ನು ಗೆದ್ದರೂ ಈ ತಂಡಗಳನ್ನು ಹಿಂದಿಕ್ಕಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಭರ್ಜರಿ ದಾಖಲೆಯೊಂದಿಗೆ ವಿಶ್ವ ದಾಖಲೆಯತ್ತ ಹೆಜ್ಜೆಯನ್ನಿಟ್ಟ ಸ್ಮೃತಿ ಮಂಧಾನ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಬೇಕಿದ್ದರೆ ಕನಿಷ್ಠ ಶೇ. 60 ರಿಂದ ಶೇ. 65 ರಷ್ಟು ಪಿಸಿಟಿ (PCT) ಅಂಕಗಳ ಅಗತ್ಯವಿರುತ್ತದೆ. ಆದರೆ ಪಾಕಿಸ್ತಾನf ತಂಡವು ತನ್ನ ಮುಂಬರುವ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹ, ಗರಿಷ್ಠ ಪ್ರಯತ್ನದ ನಡುವೆಯೂ ಆ ಅಗತ್ಯ ಮಟ್ಟವನ್ನು ತಲುಪಲು ಸಾಧ್ಯವೇ ಇಲ್ಲ. ಅಲ್ಲಿಗೆ ಪಾಕಿಸ್ತಾನ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಸಂಪೂರ್ಣವಾಗಿ ನುಚ್ಚುನೂರಾದಂತಾಗಿದೆ.

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು