AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs DC IPL 2026 Highlights: ಪರಾಗ್ ಹೋರಾಟ ವ್ಯರ್ಥ; ಡೆಲ್ಲಿಗೆ ಸುಲಭ ಜಯ

Rajasthan Royals vs Delhi Capitals, IPL 2026 Highlights: ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 43 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಹಿಂದಿನ ಪಂದ್ಯದಲ್ಲಿ 75 ರನ್‌ಗಳಿಗೆ ಆಲೌಟ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 226 ರನ್‌ಗಳ ಗುರಿ ಬೆನ್ನಟ್ಟಿ ಜಯ ಸಾಧಿಸಿತು.

RR vs DC IPL 2026 Highlights: ಪರಾಗ್ ಹೋರಾಟ ವ್ಯರ್ಥ; ಡೆಲ್ಲಿಗೆ ಸುಲಭ ಜಯ
Delhi Capitals
ಪೃಥ್ವಿಶಂಕರ
|

Updated on:May 01, 2026 | 11:32 PM

Share

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 43 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಹಿಂದಿನ ಪಂದ್ಯದಲ್ಲಿ 75 ರನ್‌ಗಳಿಗೆ ಆಲೌಟ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 226 ರನ್‌ಗಳ ಗುರಿ ಬೆನ್ನಟ್ಟಿ ಜಯ ಸಾಧಿಸಿತು. ಸತತ ಮೂರು ಪಂದ್ಯಗಳನ್ನು ಸೋತ ನಂತರ ಇದು ಡೆಲ್ಲಿ ತಂಡಕ್ಕೆ ಮೊದಲ ಗೆಲುವು. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 225 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಪರ ಪಾತುಮ್ ನಿಸ್ಸಂಕಾ ಹಾಗೂ ಕೆಎಲ್ ರಾಹುಲ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

LIVE NEWS & UPDATES

The liveblog has ended.
  • 01 May 2026 11:31 PM (IST)

    RR vs DC IPL 2026: 7 ವಿಕೆಟ್‌ಗಳ ಜಯ

    ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಹಿಂದಿನ ಪಂದ್ಯದಲ್ಲಿ 75 ರನ್‌ಗಳಿಗೆ ಆಲೌಟ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.1 ಓವರ್‌ಗಳಲ್ಲಿ 226 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತು.

  • 01 May 2026 11:28 PM (IST)

    RR vs DC IPL 2026: 6 ಎಸೆತಗಳಲ್ಲಿ 5 ರನ್ ಬೇಕು

    ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 221 ರನ್ ಗಳಿಸಿದೆ. ಗೆಲ್ಲಲು 6 ಎಸೆತಗಳಲ್ಲಿ 5 ರನ್‌ಗಳು ಬೇಕಾಗಿವೆ. ಅಶುತೋಷ್ ಶರ್ಮಾ (21) ಮತ್ತು ಟ್ರಿಸ್ಟಾನ್ ಸ್ಟಬ್ಸ್ (18) ಕ್ರೀಸ್‌ನಲ್ಲಿದ್ದಾರೆ.

  • 01 May 2026 11:09 PM (IST)

    RR vs DC IPL 2026: ರಾಹುಲ್ ಔಟ್

    ಕೆಎಲ್ ರಾಹುಲ್ 75 ರನ್ ಗಳಿಸಿ ಔಟ್ ಆದರು. ಅಶುತೋಷ್ ಶರ್ಮಾ ಹೊಸ ಬ್ಯಾಟ್ಸ್‌ಮನ್. ಟ್ರಿಸ್ಟಾನ್ ಸ್ಟಬ್ಸ್ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 15.2 ಓವರ್‌ಗಳಲ್ಲಿ 3 ವಿಕೆಟ್‌ಗೆ 178 ರನ್ ಗಳಿಸಿದೆ. ಗೆಲ್ಲಲು 28 ಎಸೆತಗಳಲ್ಲಿ 48 ರನ್‌ಗಳ ಅಗತ್ಯವಿದೆ.

  • 01 May 2026 10:49 PM (IST)

    RR vs DC IPL 2026: ರಾಹುಲ್-ನಿತೀಶ್ ಕ್ರೀಸ್‌ನಲ್ಲಿ

    ಡೆಲ್ಲಿ ಕ್ಯಾಪಿಟಲ್ಸ್ 14 ಓವರ್‌ಗಳಲ್ಲಿ 1 ವಿಕೆಟ್‌ಗೆ 166 ರನ್ ಗಳಿಸಿದೆ. ಗೆಲ್ಲಲು 36 ಎಸೆತಗಳಲ್ಲಿ 60 ರನ್‌ಗಳು ಬೇಕಾಗಿವೆ. ಕೆಎಲ್ ರಾಹುಲ್ (69) ಮತ್ತು ನಿತೀಶ್ ರಾಣಾ (33) ಕ್ರೀಸ್‌ನಲ್ಲಿದ್ದಾರೆ.

  • 01 May 2026 10:39 PM (IST)

    RR vs DC IPL 2026: ರಾಹುಲ್ ಅರ್ಧಶತಕ

    ಕೆ.ಎಲ್. ರಾಹುಲ್ ಅರ್ಧಶತಕ ಗಳಿಸಿದ್ದಾರೆ. ನಿತೀಶ್ ರಾಣಾ 6 ರನ್ ಮತ್ತು ಕೆ.ಎಲ್. ರಾಹುಲ್ 51 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 11 ಓವರ್ ಗಳಲ್ಲಿ 1 ವಿಕೆಟ್ ಗೆ 120 ರನ್ ಗಳಿಸಿದೆ. ಗೆಲ್ಲಲು 54 ಎಸೆತಗಳಲ್ಲಿ 106 ರನ್ ಗಳ ಅಗತ್ಯವಿದೆ.

  • 01 May 2026 10:29 PM (IST)

    RR vs DC IPL 2026: ನಿಸ್ಸಂಕ ಔಟ್

    ಪಾತುಮ್ ನಿಸ್ಸಂಕ 62 ರನ್ ಗಳಿಸಿ ಔಟ್ ಆದರು. ಕೆಎಲ್ ರಾಹುಲ್ 47 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 9.3 ಓವರ್ ಗಳಲ್ಲಿ 1 ವಿಕೆಟ್ ಗೆ 110 ರನ್ ಗಳಿಸಿದೆ. ಗೆಲುವಿಗೆ 63 ಎಸೆತಗಳಲ್ಲಿ 116 ರನ್ ಗಳ ಅವಶ್ಯಕತೆಯಿದೆ. ನಿತೀಶ್ ರಾಣಾ ಹೊಸ ಬ್ಯಾಟ್ಸ್ ಮನ್.

  • 01 May 2026 10:29 PM (IST)

    RR vs DC IPL 2026: ನಿಸ್ಸಾಂಕ ಅರ್ಧಶತಕ

    ಡೆಲ್ಲಿ ಕ್ಯಾಪಿಟಲ್ಸ್ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 70 ರನ್ ಗಳಿಸಿದೆ. ಗೆಲ್ಲಲು 84 ಎಸೆತಗಳಲ್ಲಿ 156 ರನ್ ಗಳಿಸಬೇಕಾಗಿದೆ. ಕೆಎಲ್ ರಾಹುಲ್ 20 ರನ್ ಮತ್ತು ಪಾಥುಮ್ ನಿಸ್ಸಂಕಾ 50 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 01 May 2026 10:03 PM (IST)

    RR vs DC IPL 2026: ಸ್ಫೋಟಕ ಬ್ಯಾಟಿಂಗ್

    ಡೆಲ್ಲಿ ಕ್ಯಾಪಿಟಲ್ಸ್ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದ್ದು, ಗೆಲ್ಲಲು 177 ರನ್ ಗಳಿಸಬೇಕಾಗಿದೆ. ಪಾಥುಮ್ ನಿಸ್ಸಂಕ 34 ರನ್‌ಗಳೊಂದಿಗೆ ಮತ್ತು ಕೆಎಲ್ ರಾಹುಲ್ 14 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಈ ಜೋಡಿ 24 ಎಸೆತಗಳಲ್ಲಿ 49 ರನ್‌ಗಳನ್ನು ಗಳಿಸಿದೆ.

  • 01 May 2026 09:39 PM (IST)

    RR vs DC IPL 2026: 226 ರನ್​ಗಳ ಗುರಿ

    ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 225 ರನ್ ಗಳಿಸಿತು. ಡೆನೋವನ್ ಫೆರೇರಾ 14 ಎಸೆತಗಳಲ್ಲಿ 47 ರನ್ ಗಳಿಸಿದರು. ಜೋಫ್ರಾ ಆರ್ಚರ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.

  • 01 May 2026 09:12 PM (IST)

    RR vs DC IPL 2026: ಶತಕ ವಂಚಿತ ಪರಾಗ್

    ರಿಯಾನ್ ಪರಾಗ್ ಶತಕ ವಂಚಿತರಾದರು. ಮಿಚೆಲ್ ಸ್ಟಾರ್ಕ್ ಅವರನ್ನು ಔಟ್ ಮಾಡಿದರು. ಪರಾಗ್ 50 ಎಸೆತಗಳಲ್ಲಿ 90 ರನ್ ಗಳಿಸಿದರು. ರಾಜಸ್ಥಾನ್ ರಾಯಲ್ಸ್ 16.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದೆ.

  • 01 May 2026 08:48 PM (IST)

    RR vs DC IPL 2026: ಶತಕದ ಸಮೀಪದಲ್ಲಿರುವ ಪರಾಗ್

    ರಾಜಸ್ಥಾನ್ ರಾಯಲ್ಸ್ 15 ಓವರ್‌ಗಳಲ್ಲಿ 3 ವಿಕೆಟ್‌ಗೆ 147 ರನ್ ಗಳಿಸಿದೆ. ರವೀಂದ್ರ ಜಡೇಜಾ (14) ಮತ್ತು ರಿಯಾನ್ ಪರಾಗ್ (77) ಕ್ರೀಸ್‌ನಲ್ಲಿದ್ದಾರೆ.

  • 01 May 2026 08:32 PM (IST)

    RR vs DC IPL 2026: ಪರಾಗ್ ಅರ್ಧಶತಕ

    ರಿಯಾನ್ ಪರಾಗ್ ಅರ್ಧಶತಕ ಗಳಿಸಿದರು. ಅವರು 34 ಎಸೆತಗಳಲ್ಲಿ 60 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಧ್ರುವ್ ಜುರೆಲ್ 35 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ 11 ಓವರ್‌ಗಳಲ್ಲಿ 2 ವಿಕೆಟ್‌ಗೆ 106 ರನ್ ಗಳಿಸಿದೆ.

  • 01 May 2026 08:19 PM (IST)

    RR vs DC IPL 2026: 8 ಓವರ್‌ಗಳಲ್ಲಿ 71 ರನ್

    ರಾಜಸ್ಥಾನ್ ರಾಯಲ್ಸ್ 8 ಓವರ್‌ಗಳಲ್ಲಿ 2 ವಿಕೆಟ್‌ಗೆ 71 ರನ್ ಕಲೆಹಾಕಿದೆ. ರಿಯಾನ್ ಪರಾಗ್ 32 ಮತ್ತು ಧ್ರುವ್ ಜುರೆಲ್ 29 ರನ್ ಬಾರಿಸಿ ಆಡುತ್ತಿದ್ದಾರೆ. 37 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ನಡೆದಿದೆ.

  • 01 May 2026 07:58 PM (IST)

    RR vs DC IPL 2026: 5 ಓವರ್‌ ಪೂರ್ಣ

    ರಾಜಸ್ಥಾನ್ ರಾಯಲ್ಸ್ 5 ಓವರ್‌ಗಳಲ್ಲಿ 2 ವಿಕೆಟ್‌ಗೆ 36 ರನ್ ಗಳಿಸಿದೆ. ರಿಯಾನ್ ಪರಾಗ್ (8) ಮತ್ತು ಧ್ರುವ್ ಜುರೆಲ್ (18) ಕ್ರೀಸ್‌ನಲ್ಲಿದ್ದಾರೆ. 19 ಎಸೆತಗಳಲ್ಲಿ 24 ರನ್‌ಗಳ ಜೊತೆಯಾಟ.

  • 01 May 2026 07:58 PM (IST)

    RR vs DC IPL 2026: ವೈಭವ್ ಔಟ್

    ಕೈಲ್ ಜೇಮಿಸನ್ ಬೌಲಿಂಗ್​ನಲ್ಲಿ ವೈಭವ್ ಸೂರ್ಯವಂಶಿ ಔಟ್ ಆದರು. ವೈಭವ್ ಬೌಂಡರಿ ಬಾರಿಸಿ ತಮ್ಮ ಖಾತೆ ತೆರೆದರಾದರೂ ನಂತರದ ಎಸೆಯದಲ್ಲೇ ಔಟಾದರು. ರಾಜಸ್ಥಾನ್ ರಾಯಲ್ಸ್ 1.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿದೆ.

  • 01 May 2026 07:39 PM (IST)

    RR vs DC IPL 2026: ಜೈಸ್ವಾಲ್ ಔಟ್

    ರಾಜಸ್ಥಾನ ರಾಯಲ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಕ್ರೀಸ್‌ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಆರಂಭಿಸಿದ್ದಾರೆ. ಯಶಸ್ವಿ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟ್ ಆದರು.

  • 01 May 2026 07:14 PM (IST)

    RR vs DC IPL 2026: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI

    ಕೆಎಲ್ ರಾಹುಲ್ (ವಾಕ್), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ಕೈಲ್ ಜೇಮಿಸನ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಟಿ ನಟರಾಜನ್.

  • 01 May 2026 07:13 PM (IST)

    RR vs DC IPL 2026: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI

    ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಶುಭಂ ದುಬೆ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ.

  • 01 May 2026 07:02 PM (IST)

    RR vs DC IPL 2026: ಟಾಸ್ ಗೆದ್ದ ರಾಜಸ್ಥಾನ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Published On - May 01,2026 7:01 PM

Follow Us
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
ಶಿವಮೊಗ್ಗ KSCA ಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ್ ಅಂತಿಮ ದರ್ಶನ
ಶಿವಮೊಗ್ಗ KSCA ಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ್ ಅಂತಿಮ ದರ್ಶನ
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ
ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು 'ಪಂಕ್ಚರ್ ಮಾಫಿಯಾ' ಆಟ!
ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು 'ಪಂಕ್ಚರ್ ಮಾಫಿಯಾ' ಆಟ!