RCB vs DC, IPL 2025: ಐಪಿಎಲ್ನಲ್ಲಿಂದು ಆರ್‌ಸಿಬಿ ಪಂದ್ಯ: ಬೆಂಗಳೂರಲ್ಲಿ ರಜತ್ ಪಡೆ ಗೆದ್ದರೆ ಏನೆಲ್ಲ ಆಗಲಿದೆ ನೋಡಿ
Royal Challengers Bengaluru vs Delhi Capitals Preview: ಏಪ್ರಿಲ್ 10 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ರ 24 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಮಾಂಚಕ ಗೆಲುವು ಸಾಧಿಸಿತು.

ಬೆಂಗಳೂರು (ಏ. 10): ಐಪಿಎಲ್ 2025 ರ 24 ನೇ ಲೀಗ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Royal Challengers Bengaluru vs Delhi Capitals) ನಡುವೆ ಇಂದು (ಏಪ್ರಿಲ್ 10) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಆರಂಭವಾಗಲಿದೆ. ಈ ಋತುವಿನಲ್ಲಿ ಆರ್‌ಸಿಬಿ ತಂಡ ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರರಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಆರ್‌ಸಿಬಿ ತಂಡವು ಪ್ರಸ್ತುತ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ, ಆದರೆ ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ ಭಯಾನಕವಾಗಿದೆ. ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಮೂರನ್ನೂ ಗೆದ್ದು ಬೀಗಿದ್ದಾರೆ.
ಹೀಗಾಗಿ ಇಂದಿನ ಹೈವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. 2015 ರ ನಂತರ ಈ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಗಳಿಸಿದ ಮೊದಲ ಗೆಲುವು ಇದಾಗಿದೆ. ಮತ್ತೊಂದೆಡೆ, ಈ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ಏಕೈಕ ತಂಡ ಡೆಲ್ಲಿ. ಅಕ್ಷರ್ ಪಟೇಲ್ ನೇತೃತ್ವದ ತಂಡವು ಆರ್‌ಸಿಬಿ ವಿರುದ್ಧವೂ ಅದೇ ಪ್ರದರ್ಶನವನ್ನು ಪುನರಾವರ್ತಿಸುತ್ತಾ ನೋಡಬೇಕಿದೆ.
Bigger dreams, bigger moves! 🤝👊
Captain and coach are in the zone for tomorrow’s game at home!💡#PlayBold #ನಮ್ಮRCB #IPL2025 pic.twitter.com/fMMqQi9vtg
— Royal Challengers Bengaluru (@RCBTweets) April 9, 2025
ಎರಡೂ ತಂಡಗಳ ಹೆಡ್ ಟು ಹೆಡ್ ದಾಖಲೆಯ ಬಗ್ಗೆ ನೋಡುವುದಾದರೆ, ಆರ್‌ಸಿಬಿ ಮೇಲುಗೈ ಸಾಧಿಸಿರುವಂತೆ ತೋರುತ್ತದೆ. ಇಲ್ಲಿಯವರೆಗೆ ಬೆಂಗಳೂರು ಮತ್ತು ಡೆಲ್ಲಿ ಮಧ್ಯೆ 31 ಐಪಿಎಲ್ ಪಂದ್ಯಗಳು ನಡೆದಿದ್ದು, ಆರ್‌ಸಿಬಿ 19 ಪಂದ್ಯಗಳಲ್ಲಿ ಜಯಗಳಿಸಿ ಮುಂದಿದ್ದರೆ, ದೆಹಲಿ 11 ಪಂದ್ಯಗಳಲ್ಲಿ ಜಯಗಳಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಮತ್ತು ದೆಹಲಿ ನಡುವೆ 12 ಪಂದ್ಯಗಳು ನಡೆದಿದ್ದು, ಅವುಗಳಲ್ಲಿ ಆರ್‌ಸಿಬಿ 7 ಪಂದ್ಯಗಳನ್ನು ಗೆದ್ದಿದೆ. ಈ ದಾಖಲೆಯನ್ನು ನೋಡಿದರೆ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡವೇ ಫೇವರಿಟ್ ಆಗಿದೆ. ಇಂದಿನ ಪಂದ್ಯದಲ್ಲಿ ರಜತ್ ಪಡೆ ಗೆದ್ದರೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರುವ ಸಂಭವವಿದೆ.
ಬೆಂಗಳೂರಿನ ಪಿಚ್ ಬ್ಯಾಟಿಂಗ್‌ಗೆ ಸ್ವರ್ಗ:
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ನಲ್ಲಿ ಈ ಋತುವಿನಲ್ಲಿ ಒಂದು ಪಂದ್ಯ ನಡೆದಿದ್ದು, ಇದರಲ್ಲಿ ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಿ ಕೇವಲ 169 ರನ್ ಗಳಿಸಲು ಸಾಧ್ಯವಾಯಿತು, ಆದರೆ ಆ ಪಂದ್ಯದಲ್ಲಿ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 2 ಓವರ್‌ಗಳ ಮುಂಚಿತವಾಗಿಯೇ ಪಂದ್ಯವನ್ನು ಗೆದ್ದಿತು. ಚಿನ್ನಸ್ವಾಮಿ ಪಿಚ್ ಬ್ಯಾಟಿಂಗ್‌ಗೆ ಸಾಕಷ್ಟು ಉತ್ತಮವೆಂದು ಪರಿಗಣಿಸಲಾಗಿದೆ, ಇದರಲ್ಲಿ ತಂಡಗಳು 200 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಬಹುದು.
ಇಲ್ಲಿಯವರೆಗೆ, ಈ ಮೈದಾನದಲ್ಲಿ ಒಟ್ಟು 96 ಐಪಿಎಲ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 41 ಪಂದ್ಯಗಳಲ್ಲಿ ಗೆದ್ದಿದ್ದರೆ, ಗುರಿಯನ್ನು ಬೆನ್ನಟ್ಟಿದ ತಂಡ 51 ಪಂದ್ಯಗಳಲ್ಲಿ ಗೆದ್ದಿದೆ.
ಪಂದ್ಯಕ್ಕೆ ಮಳೆ ಅಡ್ಡಿ?:
ಈ ಪಂದ್ಯದ ಹವಾಮಾನದ ಬಗ್ಗೆ ಹೇಳುವುದಾದರೆ, ಅಭಿಮಾನಿಗಳು ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆಯುವ ಸಂಪೂರ್ಣ ಪಂದ್ಯವನ್ನು ಆನಂದಿಸಬಹುದು. ಅಕ್ಯೂವೆದರ್ ವರದಿಯ ಪ್ರಕಾರ, ಮಳೆ ಬರುವ ಸಾಧ್ಯತೆ ಇಲ್ಲದಿದ್ದರೂ, ಪಂದ್ಯದ ಸಮಯದಲ್ಲಿ ತಾಪಮಾನವು 27 ರಿಂದ 31 ಡಿಗ್ರಿ ಸೆಲ್ಸಿಯಸ್ ನಡುವೆ ಇರುವ ನಿರೀಕ್ಷೆಯಿದೆ. ಅಂದರೆ ಮಳೆಯ ಸಾಧ್ಯತೆ ಇಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ