AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದು ನೋ ಬಾಲ್: ​ಅಂಪೈರ್​ ತೀರ್ಪಿಗೆ CSK ಫ್ಯಾನ್ಸ್ ಆಕ್ರೋಶ

IPL 2025 CSK vs PBKS: ಐಪಿಎಲ್​ 2025ರ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಗ್ಗರಿಸಿದೆ. ಮುಲ್ಲನ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 219 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 201 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪಂಜಾಬ್ ಪಡೆ 18 ರನ್​ಗಳ ಜಯ ಸಾಧಿಸಿದೆ.

ಅದು ನೋ ಬಾಲ್: ​ಅಂಪೈರ್​ ತೀರ್ಪಿಗೆ CSK ಫ್ಯಾನ್ಸ್ ಆಕ್ರೋಶ
Ms Dhoni
ಝಾಹಿರ್ ಯೂಸುಫ್
|

Updated on:Apr 09, 2025 | 12:57 PM

Share

IPL 2025: ಐಪಿಎಲ್​ನ 22ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮುಲ್ಲನ್​ಪುರ್​ನ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ (PBKS) ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು 17.5 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಹಂತದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ಅದರಲ್ಲೂ ಲಾಕಿ ಫರ್ಗುಸನ್ ಎಸೆದ 18ನೇ ಓವರ್​ನ 5ನೇ ಮತ್ತು 6ನೇ ಎಸೆತಗಳಲ್ಲಿ  ಧೋನಿ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಆದರೆ 6ನೇ ಎಸೆತವು ಫುಲ್ ಟಾಸ್ ಆಗಿದ್ದರಿಂದ ಫೀಲ್ಡ್ ಅಂಪೈರ್ ನೋ ಬಾಲ್​ ನೀಡಿದ್ದರು.

ಇದನ್ನೂ ಓದಿ
Image
ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾದ ಮಾಜಿ ಆಟಗಾರನ ಪುತ್ರ
Image
VIDEO: ವಿರಾಟ್ ಕೊಹ್ಲಿಗೆ ಬೌಲಿಂಗ್: ಭಾವುಕರಾಗಿ ಅರ್ಧದಲ್ಲೇ ನಿಂತ ಸಿರಾಜ್
Image
11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಶ್ವ ದಾಖಲೆ ಬರೆದ ನಸೀಮ್ ಶಾ
Image
MS Dhoni: ಕೇವಲ 3 ರನ್​: ಗ್ರೇಟ್​ ಫಿನಿಶರ್ ಫಿನಿಶ್..!

ಮಹೇಂದ್ರ ಸಿಂಗ್ ಧೋನಿ ಸಿಕ್ಸ್ ವಿಡಿಯೋ:

ಆದರೆ ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಧೋನಿಯ ಸೊಂಟದ ಭಾಗಕ್ಕಿಂತ ಕೆಳಗಿಳಿನಲ್ಲಿರುವುದು ಕಂಡು ಬಂದಿದೆ. ಅದು ಸಹ 0.03 ಮಿಲಿ ಮೀಟರ್​ಗಳ ಅಂತರದಲ್ಲಿ. ಅಂದರೆ ಮಹೇಂದ್ರ ಸಿಂಗ್ ಧೋನಿ ಅವರ ಸೊಂಟದರೆಗಿನ ಎತ್ತರ 1.01 ಆಗಿತ್ತು. ಲಾಕಿ ಫರ್ಗುಸನ್ ಎಸೆದ ಚೆಂಡು 0.98 ಎತ್ತರದಲ್ಲಿತ್ತು. ಹೀಗಾಗಿ ಥರ್ಡ್​ ಅಂಪೈರ್ ನೋ ಬಾಲ್ ನೀಡಿರಲಿಲ್ಲ.

Ms Dhoni (11)

Ms Dhoni

ಮೂರನೇ ಅಂಪೈರ್​ನ ಈ ನಿರ್ಧಾರಕ್ಕೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ. ಅಲ್ಲದೆ ಈ ಎಸೆತವು ನೋ ಬಾಲ್ ಆಗಿದ್ದರೆ ಸಿಎಸ್​ಕೆ ತಂಡಕ್ಕೆ ಗೆಲ್ಲುವ ಅವಕಾಶಗಳು ದೊರೆಯುತ್ತಿದ್ದವು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪಿನ ವಿರುದ್ಧ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ತಿರುಗಿ ನಿಂತಿದ್ದು, ಈ ಮೂಲಕ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ.

Published On - 12:57 pm, Wed, 9 April 25