Rishabh Pant: ತನ್ನದೇ ತಂಡದ ಆಟಗಾರನಿಗೆ ಕಪಾಳಮೋಕ್ಷ ಮಾಡಲು ಮುಂದಾದ ರಿಷಭ್ ಪಂತ್
LSG vs DC, IPL 2025: ಲಕ್ನೋ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಬ್ಯಾಟಿಂಗ್ ಇನ್ನಿಂಗ್ಸ್ನ 7 ನೇ ಓವರ್‌ನ ಕೊನೆಯ ದಿಗ್ವೇಶ್ ರಥಿ ಅವರ ಎಸೆತದಲ್ಲಿ ಲಕ್ನೋ ತಂಡವು ಕೆಎಲ್ ರಾಹುಲ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಲು ಮನವಿ ಮಾಡಲಾಯಿತು. ಆದರೆ ಅಂಪೈರ್ ರಾಹುಲ್ ನಾಟ್ ಔಟ್ ಎಂದು ಘೋಷಿಸಿದರು. ಈ ಸಂದರ್ಭ ದೊಡ್ಡ ಹೈ ಡ್ರಾಮವೇ ನಡೆದು ಹೋಯಿತು.

ಬೆಂಗಳೂರು (ಏ. 23): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ (Indian Premier League 2025) ರಿಷಭ್ ಪಂತ್ ಅಂದುಕೊಂಡಂತೆ ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ಪಂತ್ ಅವರ ಬ್ಯಾಟಿಂಗ್ ಆಗಲಿ ಅಥವಾ ನಾಯಕತ್ವವಾಗಲಿ ಈ ಋತುವಿನಲ್ಲಿ ತೀರ ಕಳಪೆಯಾಗಿದೆ. ಇದರಿಂದಾಗಿ ಪಂತ್ ಪ್ರತಿ ಪಂದ್ಯದಲ್ಲಿ ಸುದ್ದಿಯಲ್ಲಿದ್ದಾರೆ. ಇದೀಗ ಐಪಿಎಲ್ನಲ್ಲಿ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ತಮ್ಮದೇ ತಂಡದ ಆಟಗಾರನ ಮೇಲೆ ಕೋಪಗೊಂಡ ಘಟನೆ ನಡೆದಿದೆ. ಅಚ್ಚರಿ ಎಂದರೆ ಪಂತ್ ಆ ಆಟಗಾರನಿಗೆ ಕಪಾಳಮೋಕ್ಷ ಮಾಡಲು ಮುಂದಾದರು.
ರಿಷಭ್ ಪಂತ್‌ಗೆ ಕಪಾಳಮೋಕ್ಷ ಮಾಡಲು ಮುಂದಾದರು:
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 159 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಡಿಸಿ ಉತ್ತಮ ಆರಂಭವನ್ನು ಪಡೆಯಿತು. ಆದರೆ ಪವರ್‌ಪ್ಲೇನಲ್ಲಿ ಕರುಣ್ ನಾಯರ್ ಅವರ ವಿಕೆಟ್ ಕಳೆದುಕೊಂಡಿತು. ಈ ವಿಕೆಟ್ ಲಕ್ನೋ ತಂಡದ ಗೆಲುವಿನ ಆಸೆ ಚಿಗುರಿಸಿತು. ನಂತರ, 7 ನೇ ಓವರ್‌ನ ಕೊನೆಯ ದಿಗ್ವೇಶ್ ರಥಿ ಅವರ ಎಸೆತದಲ್ಲಿ ಲಕ್ನೋ ತಂಡವು ಕೆಎಲ್ ರಾಹುಲ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಲು ಮನವಿ ಮಾಡಲಾಯಿತು. ಆದರೆ ಅಂಪೈರ್ ರಾಹುಲ್ ನಾಟ್ ಔಟ್ ಎಂದು ಘೋಷಿಸಿದರು.
ಮೊದಲಿಗೆ ಚೆಂಡು ವಿಕೆಟ್ ಹೊರಗೆ ಬಡಿಯುತ್ತಿರುವಂತೆ ಕಂಡುಬಂತು. ಹೀಗಾಗಿ ರಿಷಭ್ ಪಂತ್ ಕೂಡ ಡಿಆರ್ಎಸ್ ತೆಗೆದುಕೊಳ್ಳುವಲ್ಲಿ ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ದಿಗ್ವೇಶ್ ರಿವ್ಯೂ ತೆಗೆದುಕೊಳ್ಳಲು ಮುಂದಾದರು. ಅವರು ಪಂತ್ ಅವರನ್ನು ವಿಮರ್ಶೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಹೀಗಾಗಿ ಪಂತ್ ಬೇರೆ ದಾರಿಯಿಲ್ಲದೆ ಡಿಆರ್ಎಸ್ ತೆಗೆದುಕೊಂಡರು. ಆದರೆ, ರಿವ್ಯೂ ನಲ್ಲಿ ಚೆಂಡು ವಿಕೆಟ್ ಹೊರಗೆ ಬಿದ್ದಿದೆ ಎಂದು ತೋರಿಸಲಾಯಿತು. ಈ ಮೂಲಕ ಲಕ್ನೋ ರಿವ್ಯೂ ಕಳೆದುಕೊಂಡಿತು. ಇದರಿಂದ ಕೋಪಗೊಂಡ ಪಂತ್ ಅವರು ದಿಗ್ವೇಶ್ ಅವರನ್ನು ಗದರಿಸಿ ಕೆನ್ನೆಗೆ ಹೊಡೆಯಲು ಪ್ರಯತ್ನಿಸಿದರು. ಇದರ ಫೋಟೋ-ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Kl Rahul: ದಾಖಲೆಗಳು ಧೂಳೀಪಟ… ಹೊಸ ಇತಿಹಾಸ ರಚಿಸಿದ ಕೆಎಲ್ ರಾಹುಲ್
ಪಂತ್ ಬ್ಯಾಟ್ ಕೂಡ ಸದ್ದು ಮಾಡಲಿಲ್ಲ:
ಇದಕ್ಕೂ ಮೊದಲು ಲಕ್ನೋ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ರಿಷಭ್ ಪಂತ್ ಬ್ಯಾಟಿಂಗ್ ನಲ್ಲಿ ಕೂಡ ಸಂಪೂರ್ಣವಾಗಿ ವಿಫಲರಾದರು. ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಪಂತ್ ಕೇವಲ 2 ಎಸೆತಗಳನ್ನು ಆಡಿ ಖಾತೆ ತೆರೆಯದೆಯೇ ಔಟಾದರು. ಇದಾದ ನಂತರ, ಪಂತ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.
ಲಕ್ನೋ ತಂಡ 160 ರನ್‌ಗಳ ಗುರಿ ನೀಡಿತು:
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಮಾತ್ರ ಗಳಿಸಿತು. ಐಡೆನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಮೊದಲ ವಿಕೆಟ್‌ಗೆ 10 ಓವರ್‌ಗಳಲ್ಲಿ 87 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟದ ನಂತರ, ಲಕ್ನೋದ ಮಧ್ಯಮ ಕ್ರಮಾಂಕವು ಹೇಳಿಕೊಳ್ಳುವಂತಹ ಸ್ಕೋರ್ ಕಲೆಹಾಕಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ, ಆಯುಷ್ ಬಡೋನಿ 21 ಎಸೆತಗಳಲ್ಲಿ 36 ರನ್ ಗಳಿಸಿ ತಂಡವನ್ನು 159 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು. ಡೆಲ್ಲಿ ಈ ಟಾರ್ಗೆಟ್ ಅನ್ನು 17.5 ಓವರ್ಗಳಲ್ಲೇ ಮುಟ್ಟಿ 8 ವಿಕೆಟ್ಗಳ ಅಮೋಘ ಗೆಲುವು ಕಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ