LSG vs DC: ಸೋತ ಬಳಿಕ, ತಲೆಬುಡವಿಲ್ಲದ ಉತ್ತರ ನೀಡಿದ ರಿಷಭ್ ಪಂತ್
IPL 2025 LSG vs DC: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 40ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.5 ಓವರ್ಗಳಲ್ಲಿ ಗುರಿ ತಲುಪಿ 8 ವಿಕೆಟ್ಗಳ ಜಯ ಸಾಧಿಸಿದೆ.

IPL 2025: ಐಪಿಎಲ್ 2025ರ 40ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಜಯ ಸಾಧಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 1596 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.5 ಓವರ್ಗಳಲ್ಲಿ 161 ರನ್ ಬಾರಿಸಿ 8 ವಿಕೆಟ್ಗಳ ಗೆಲುವು ದಾಖಲಿಸಿದೆ.
ಈ ಹೀನಾಯ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಪಂದ್ಯವು ಹೀಗೆ ನಡೆಯುತ್ತದೆ, ಹೀಗೆ ಆಗುತ್ತದೆ ಎಂದು ಯಾರನ್ನೂ ದೂರನ್ನು ಸಾಧ್ಯವಿಲ್ಲ. ಏಕೆಂದರೆ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಹೀಗಾಗಿ ನಾವು ಸೋಲನುಭವಿಸಿದ್ದೇವೆ ಎಂದರು.
ಲಕ್ನೋ ಪಂದ್ಯಗಳಲ್ಲಿ ಟಾಸ್ ದೊಡ್ಡ ಪಾತ್ರ ವಹಿಸುತ್ತಿದೆ. ಹೀಗಾಗಿ ಸೋಲಿಗೆ ನಾನು ನೆಪಗಳನ್ನು ಹುಡುಕುತ್ತಿಲ್ಲ. ಇದಾಗ್ಯೂ ನಾವು ಈ ಪಂದ್ಯದಲ್ಲಿ 20 ರನ್ಗಳನ್ನು ಕಡಿಮೆ ಕಲೆಹಾಕಿದ್ದೆವು. ಇದು ಸಹ ಒಂದು ಕಾರಣ ಎಂದು ರಿಷಭ್ ಪಂತ್ ಹೇಳಿದ್ದಾರೆ.
ಇನ್ನು ನೀವೇಕೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಂತ್, ನಾವು ಸಂದರ್ಭಗಳ ಲಾಭವನ್ನು ಪಡೆಯಲು ಬಯಸಿದ್ದೆವು. ಅದಕ್ಕಾಗಿ ನಾನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ಈ ಪಿಚ್ನ ಸಂಪೂರ್ಣ ಲಾಭ ಪಡೆಯಲು ನಾವು ಅಬ್ದುಲ್ ಸಮದ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಳಿಸಿದೆವು. ಆ ಬಳಿಕ ಡೇವಿಡ್ ಮಿಲ್ಲರ್ಗೆ ಅವಕಾಶ ನೀಡಿದೆವು. ಆದರೆ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿ ಬಂದಿರಲಿಲ್ಲ ಎಂದು ರಿಷಭ್ ಪಂತ್ ಹೇಳಿದ್ದಾರೆ.
ಇಲ್ಲಿ ರಿಷಭ್ ಪಂತ್ ತನ್ನ ಸಾಮರ್ಥ್ಯವನ್ನು ಕೆಳದರ್ಜೆಗೆ ಇಳಿಸಿದ್ರಾ? ಅಥವಾ ಅವರಿಗಿಂತ ತಾನು ಕೆಳಮಟ್ಟದ ಬ್ಯಾಟರ್ ಎಂಬುದನ್ನು ಸಾರಿದ್ರಾ ಎಂಬುದೇ ಪ್ರಶ್ನೆ. ಏಕೆಂದರೆ ಇದಕ್ಕೂ ಮುನ್ನ ರಿಷಭ್ ಪಂತ್ ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇದೀಗ 7ನೇ ಕ್ರಮಾಂಕದಲ್ಲೇಗೆ ಬ್ಯಾಟ್ ಬೀಸಿದ್ದೀರಿ ಎಂಬ ಪ್ರಶ್ನೆಗೆ ವಿಚಿತ್ರ ಉತ್ತರ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದ ಅಬ್ದುಲ್ ಸಮದ್, ಆಯುಷ್ ಬದೋನಿಯನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಅಲ್ಲದೆ ಡೇವಿಡ್ ಮಿಲ್ಲರ್ ಬಳಿಕ ಪಂತ್ ಬ್ಯಾಟಿಂಗ್ಗೆ ಆಗಮಿಸಿದ್ದರು. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ಪರ ರಿಷಭ್ ಪಂತ್ ಕೊನೆಯ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: VIDEO: ಮೈದಾನದಲ್ಲೇ ಸಹ ಆಟಗಾರನಿಗೆ ಏಟು: ಕುಸಿದು ಬಿದ್ದ ವಿಕೆಟ್ ಕೀಪರ್..!
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಪ್ರಮುಖ ಆಟಗಾರನಾಗಿರುವ ರಿಷಭ್ ಪಂತ್ ಬ್ಯಾಟರ್ಗಳ ಪಟ್ಟಿಯಲ್ಲಿ ಅಂತಿಮ ಕ್ರಮಾಂಕದಲ್ಲಿ ಕಣಕ್ಕಿಳಿದಿರುವುದೇ ಈಗ ಅಚ್ಚರಿ. ಇದನ್ನೇ ಪ್ರಶ್ನಿಸಿದಾಗ ಪಂತ್, ಅವೆಲ್ಲವೂ ನಮ್ಮ ಯೋಜನೆ ಎನ್ನುವ ಮೂಲಕ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ.