AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಕಣ್ಣೀರಿಟ್ಟಿದ್ದ ಅಭಿಮಾನಿ ಬಳಿ ಕ್ಷಮೆಯಾಚಿಸಿದ ರೋಹಿತ್ ಶರ್ಮಾ

Rohit Sharma Apologizes to Crying Fan: ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದ ನಡುವೆಯೂ ರೋಹಿತ್ ಶರ್ಮಾ ಜನಪ್ರಿಯತೆ ಕುಗ್ಗಿಲ್ಲ. ಈಡನ್ ಗಾರ್ಡನ್ಸ್‌ನಲ್ಲಿ ರೋಹಿತ್ ನೋಡಲು ಕಾದು ಕಣ್ಣೀರಿಟ್ಟ ಅಭಿಮಾನಿಯ ವೈರಲ್ ವಿಡಿಯೋ ನಂತರ, ರೋಹಿತ್ ಶರ್ಮಾ ವೈಯಕ್ತಿಕವಾಗಿ ಕ್ಷಮೆಯಾಚಿಸಿ ಮುಂದಿನ ಭೇಟಿಗೆ ಆಶ್ವಾಸನೆ ನೀಡಿದ್ದಾರೆ. ತಂಡದ ಸ್ಥಿರ ಪ್ರದರ್ಶನದಲ್ಲಿನ ಕೊರತೆಯಿಂದ ಮುಂಬೈ ಪ್ಲೇಆಫ್ ರೇಸ್‌ನಿಂದ ಹೊರಬಿದ್ದರೂ, ರೋಹಿತ್ ಅವರ ಈ ಮಾನವೀಯ ಸ್ಪಂದನೆ ಮೆಚ್ಚುಗೆ ಗಳಿಸಿದೆ.

IPL 2026: ಕಣ್ಣೀರಿಟ್ಟಿದ್ದ ಅಭಿಮಾನಿ ಬಳಿ ಕ್ಷಮೆಯಾಚಿಸಿದ ರೋಹಿತ್ ಶರ್ಮಾ
Rohit Sharma
ಪೃಥ್ವಿಶಂಕರ
|

Updated on:May 23, 2026 | 10:16 PM

Share

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಈ ಸೀಸನ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿರುವ 13 ಪಂದ್ಯಗಳಲ್ಲಿ ಮುಂಬೈ ಕೇವಲ 4 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ ರೇಸ್​ನಿಂದ ಹೊರಬಿದ್ದಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಆಟಗಾರರ ಸ್ಥಿರ ಪ್ರದರ್ಶನದಲ್ಲಿನ ಕೊರೆತೆಯೇ ಪ್ರಮುಖ ಕಾರಣ ಎನ್ನಬಹುದು. ಅದರಲ್ಲೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದು ಕೂಡ ತಂಡವನ್ನು ಸಂಕಷ್ಟಕ್ಕೆ ದೂಡಿತು. ರೋಹಿತ್ ಪಂದ್ಯವನ್ನು ಆಡದಿದ್ದರೂ ಅವರ ಅಭಿಮಾನಿಗಳ ಬಳಗ ಕೊಂಚವೂ ಕಡಿಮೆ ಆಗಿಲ್ಲ. ಅವರನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಾರೆ. ಅದರಂತೆ ಅವರನ್ನು ನೋಡಲು ತಂಡದ ಹೋಟೆಲ್ ಹೊರಗೆ ಕಾಯುತ್ತಿದ್ದ ಅಭಿಮಾನಿಯೊಬ್ಬರಿಗೆ ರೋಹಿತ್ ದರ್ಶನವಾಗಿಲ್ಲ. ಇದರಿಂದ ಬೇಸರಗೊಂಡ ಆ ಅಭಿಮಾನಿ ಅಲ್ಲಿಯೇ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸ್ವತಃ ರೋಹಿತ್ ಅವರೇ ಆ ಅಭಿಮಾನಿ ಬಳಿ ಕ್ಷಮೆಯಾಚಿಸಿದ್ದಾರೆ.

ಕಣ್ಣೀರಿಟ್ಟಿದ ಯುವತಿ

ವಾಸ್ತವವಾಗಿ ಈಡನ್ ಗಾರ್ಡನ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ, ಮುಂಬೈ ತಂಡ ತಂಗಿದ್ದ ಹೋಟೆಲ್ ಹೊರಗೆ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ರೋಹಿತ್ ಶರ್ಮಾ ಅವರನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಜಮಾಯಿಸಿದ್ದರು. ಆ ಜನಸಂದಣಿಯಲ್ಲಿ ಯುವತಿಯೂ ಕೂಡ ಬಹಳ ಹೊತ್ತು ರೋಹಿತ್​ಗಾಗಿ ಕಾಯುತ್ತಿದ್ದರು. ಆದಾಗ್ಯೂ, ಭಾರಿ ಜನಸಂದಣಿ ಮತ್ತು ಭದ್ರತಾ ಕಾರಣಗಳಿಂದಾಗಿ, ರೋಹಿತ್ ಅವರನ್ನು ಗಮನಿಸದೆ ತೆರಳಿದ್ದರು. ಇದರಿಂದ ನಿರಾಶೆಗೊಂಡಿದ್ದ ಆಕೆ ಅಲ್ಲಿಯೇ ಕಣ್ಣೀರಿಟ್ಟಿದ್ದರು. ಆ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಕ್ಷಮೆಯಾಚಿಸಿದ ರೋಹಿತ್

ಸಾಮಾನ್ಯವಾಗಿ ಎಷ್ಟೇ ದೊಡ್ಡ ಸ್ಟಾರ್ ಆಟಗಾರನಾಗಿದ್ದರೂ, ಇಂತಹ ಸಣ್ಣ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಇದಕ್ಕೆ ತದ್ವೀರುದ್ದವಾಗಿರುವ ರೋಹಿತ್ ಶರ್ಮಾ ಯುವತಿಯ ಅಳುವ ವಿಡಿಯೋ ನೋಡಿದ ತಕ್ಷಣ ಪ್ರತಿಕ್ರಿಯಿಸಿದ್ದು, ‘ಕ್ಷಮಿಸಿ.. ಆ ಸಮಯದಲ್ಲಿ ನಾನು ನಿಮ್ಮನ್ನು ಈಡನ್ ಗಾರ್ಡನ್ಸ್‌ನಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ನಾನು ನಿಮ್ಮ ವೀಡಿಯೊವನ್ನು ನೋಡಿದೆ. ಮೈದಾನದ ಹೊರಗೆ, ಹೋಟೆಲ್‌ನಲ್ಲಿ, ಕೆಲವೊಮ್ಮೆ ಬಹಳಷ್ಟು ಜನಸಂದಣಿ ಮತ್ತು ಜೋರಾದ ಶಬ್ದಗಳು ಇರುತ್ತವೆ. ಅದಕ್ಕಾಗಿಯೇ ನನ್ನ ಗಮನ ನಿಮ್ಮ ಮೇಲೆ ಬೀಳಲಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇನೆ, ಮುಂದಿನ ಬಾರಿ ನಾನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ಬಂದಾಗ, ನಾನು ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Sat, 23 May 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​
ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!