RR vs MI Highlights, IPL 2024: ಜೈಸ್ವಾಲ್ ಅಜೇಯ ಶತಕ; ಮುಂಬೈಗೆ ಮತ್ತೊಂದು ಸೋಲು

ಪೃಥ್ವಿಶಂಕರ
|

Updated on:Apr 22, 2024 | 11:56 PM

Rajasthan Royals vs Mumbai Indians Highlights in Kannada: ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್‌ನ ಅಮೋಘ ಪ್ರದರ್ಶನ ಮುಂದುವರಿದಿದೆ. ಟೂರ್ನಿಯ 38ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗ ಮುಂಬೈ ಇಂಡಿಯನ್ಸ್ ತಂಡವನ್ನು 9 ವಿಕೆಟ್​ಗಳಿಂದ ಮಣಿಸುವ ಮೂಲಕ ಲೀಗ್​ನಲ್ಲಿ 7ನೇ ಜಯ ಸಾಧಿಸಿದೆ.

RR vs MI Highlights, IPL 2024: ಜೈಸ್ವಾಲ್ ಅಜೇಯ ಶತಕ; ಮುಂಬೈಗೆ  ಮತ್ತೊಂದು ಸೋಲು

ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್‌ನ ಅಮೋಘ ಪ್ರದರ್ಶನ ಮುಂದುವರಿದಿದೆ. ಟೂರ್ನಿಯ 38ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗ ಮುಂಬೈ ಇಂಡಿಯನ್ಸ್ ತಂಡವನ್ನು 9 ವಿಕೆಟ್​ಗಳಿಂದ ಮಣಿಸುವ ಮೂಲಕ ಲೀಗ್​ನಲ್ಲಿ 7ನೇ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 179 ರನ್ ಗಳಿಸಿತು. ಉತ್ತರವಾಗಿ ರಾಜಸ್ಥಾನ 18.4 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಿತು. ಈ ಚೇಸಿಂಗ್ ವೇಳೆ ರಾಜಸ್ಥಾನ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದು ದೊಡ್ಡ ವಿಷಯ. ಭರ್ಜರಿ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ರಾಜಸ್ಥಾನದ ಗೆಲುವಿನ ಹೀರೋ ಎನಿಸಿಕೊಂಡರು. ಜೈಸ್ವಾಲ್ 60 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ ಅಜೇಯ 104 ರನ್ ಬಾರಿಸಿದರೆ, ಅವರನ್ನು ಹೊರತುಪಡಿಸಿ, ಜೋಸ್ ಬಟ್ಲರ್ 25 ಎಸೆತಗಳಲ್ಲಿ 35 ರನ್, ಸಂಜು ಸ್ಯಾಮ್ಸನ್ ಔಟಾಗದೆ 38 ರನ್ ಗಳಿಸಿದರು.

LIVE NEWS & UPDATES

The liveblog has ended.
  • 22 Apr 2024 11:54 PM (IST)

    ರಾಜಸ್ಥಾನ್​ಗೆ 9 ವಿಕೆಟ್‌ ಜಯ

    180 ರನ್‌ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ 18.4 ಓವರ್‌ಗಳಲ್ಲಿ ಬೆನ್ನಟ್ಟಿದೆ. ಈ ಚೇಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಅಜೇಯ 104 ರನ್ ಬಾರಿಸಿದರೆ ಸಂಜು ಸ್ಯಾಮ್ಸನ್ 28 ಎಸೆತಗಳಲ್ಲಿ 38 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ಜೋಸ್ ಬಟ್ಲರ್ 35 ರನ್‌ಗಳ ಇನಿಂಗ್ಸ್ ಆಡಿದ್ದರು.

  • 22 Apr 2024 11:48 PM (IST)

    ಜೈಸ್ವಾಲ್ ಶತಕ

    ಯಶಸ್ವಿ ಜೈಸ್ವಾಲ್ 59 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿವೆ.

  • 22 Apr 2024 11:38 PM (IST)

    ವಿಕೆಟ್ ಹುಡುಕಾಟದಲ್ಲಿ ಮುಂಬೈ

    ರಾಜಸ್ಥಾನ್ ರಾಯಲ್ಸ್ 16 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ. ಮುಂಬೈ ಇಂಡಿಯನ್ಸ್ ಇನ್ನೂ ವಿಕೆಟ್‌ಗಳ ಹುಡುಕಾಟದಲ್ಲಿದೆ. ಯಶಸ್ವಿ ಜೈಸ್ವಾಲ್ 95 ರನ್ ಹಾಗೂ ಸಂಜು ಸ್ಯಾಮ್ಸನ್ 24 ರನ್ ಗಳಿಸಿ ಆಡುತ್ತಿದ್ದಾರೆ.

  • 22 Apr 2024 11:23 PM (IST)

    36 ಎಸೆತಗಳಲ್ಲಿ 45 ರನ್‌ಗಳ ಅಗತ್ಯ

    ರಾಜಸ್ಥಾನ್ ರಾಯಲ್ಸ್ 14 ಓವರ್‌ಗಳ ನಂತರ 1 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 75 ರನ್ ಹಾಗೂ ಸಂಜು ಸ್ಯಾಮ್ಸನ್ 22 ರನ್ ಗಳಿಸಿ ಆಡುತ್ತಿದ್ದಾರೆ. ಇನ್ನು ರಾಜಸ್ಥಾನ ಗೆಲ್ಲಲು 36 ಎಸೆತಗಳಲ್ಲಿ 45 ರನ್‌ಗಳ ಅಗತ್ಯವಿದೆ.

  • 22 Apr 2024 11:23 PM (IST)

    11 ಓವರ್‌ ಮುಕ್ತಾಯ

    ರಾಜಸ್ಥಾನ್ ರಾಯಲ್ಸ್ 11 ಓವರ್‌ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 62 ರನ್ ಹಾಗೂ ಸಂಜು ಸ್ಯಾಮ್ಸನ್ 10 ರನ್ ಗಳಿಸಿ ಆಡುತ್ತಿದ್ದಾರೆ.

  • 22 Apr 2024 11:03 PM (IST)

    ಜೈಸ್ವಾಲ್ ಅರ್ಧಶತಕ

    ಯಶಸ್ವಿ ಜೈಸ್ವಾಲ್ ಈ ಸೀಸನ್​ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದ್ದಾರೆ. ಯಶಸ್ವಿ ಜೈಸ್ವಾಲ್ 31 ಎಸೆತಗಳಲ್ಲಿ 50 ರನ್‌ಗಳ ಗಡಿ ಮುಟ್ಟಿದರು.

  • 22 Apr 2024 10:56 PM (IST)

    ಜೋಸ್ ಬಟ್ಲರ್ ಔಟ್

    ರಾಜಸ್ಥಾನ್ ರಾಯಲ್ಸ್ 74 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಜೋಸ್ ಬಟ್ಲರ್ 35 ರನ್ ಗಳಿಸಿ ಔಟಾದರು.

  • 22 Apr 2024 10:19 PM (IST)

    ಮಳೆಯಿಂದಾಗಿ ಆಟ ಸ್ಥಗಿತ

    ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಜೈಪುರದಲ್ಲಿ ತುಂತುರು ಮಳೆಯಾಗಿದ್ದು, ಪಂದ್ಯವನ್ನು ನಿಲ್ಲಿಸಲಾಗಿದೆ.

  • 22 Apr 2024 09:56 PM (IST)

    ರಾಯಲ್ಸ್‌ಗೆ ಉತ್ತಮ ಆರಂಭ

    ಮೊದಲ 4 ಓವರ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 35 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 19 ರನ್ ಹಾಗೂ ಜೋಸ್ ಬಟ್ಲರ್ 14 ರನ್ ಗಳಿಸಿ ಆಡುತ್ತಿದ್ದಾರೆ.

  • 22 Apr 2024 09:56 PM (IST)

    2 ಓವರ್‌ ಮುಕ್ತಾಯ

    ರಾಜಸ್ಥಾನ್ ರಾಯಲ್ಸ್ ಮೊದಲ ಎರಡು ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 2 ರನ್ ಹಾಗೂ ಜೋಸ್ ಬಟ್ಲರ್ 11 ರನ್ ಗಳಿಸಿ ಆಡುತ್ತಿದ್ದಾರೆ.

  • 22 Apr 2024 09:21 PM (IST)

    180 ರನ್‌ಗಳ ಗುರಿ

    ರಾಜಸ್ಥಾನ ವಿರುದ್ಧ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿದೆ.

  • 22 Apr 2024 09:20 PM (IST)

    ತಿಲಕ್ ವರ್ಮಾ ಔಟ್

    ಮುಂಬೈ ಇಂಡಿಯನ್ಸ್ 176 ರನ್‌ಗಳಿಗೆ 7ನೇ ವಿಕೆಟ್ ಕಳೆದುಕೊಂಡಿದೆ. ತಿಲಕ್ ವರ್ಮಾ 45 ಎಸೆತಗಳಲ್ಲಿ 65 ರನ್ ಗಳಿಸಿ ಔಟಾದರು.

  • 22 Apr 2024 09:07 PM (IST)

    ನೇಹಾಲ್ ವಧೇರಾ ಔಟ್

    ಮುಂಬೈ ಇಂಡಿಯನ್ಸ್ ಐದನೇ ವಿಕೆಟ್ ಕಳೆದುಕೊಂಡಿದೆ. ನೆಹಾಲ್ ವಧೇರಾ 24 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು. ಮುಂಬೈ ಸ್ಕೋರ್ 16.1 ಓವರ್‌ಗಳಲ್ಲಿ 151 ರನ್ ಆಗಿದೆ.

  • 22 Apr 2024 08:58 PM (IST)

    ತಿಲಕ್ ವರ್ಮಾ ಭರ್ಜರಿ ಅರ್ಧಶತಕ

    ತಿಲಕ್ ವರ್ಮಾ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅರ್ಧಶತಕ ಪೂರೈಸಿದ್ದಾರೆ.

  • 22 Apr 2024 08:47 PM (IST)

    ಮುಂಬೈ ಶತಕ ಪೂರ್ಣ

    ಮುಂಬೈ ಇಂಡಿಯನ್ಸ್ 13 ಓವರ್‌ಗಳಲ್ಲಿ ಶತಕ ಪೂರೈಸಿದೆ. ತಿಲಕ್ ವರ್ಮಾ ಮತ್ತು ನೆಹಾಲ್ ವಧೇರಾ ಕ್ರೀಸ್‌ನಲ್ಲಿದ್ದಾರೆ. ತಿಲಕ್ ವರ್ಮಾ 37 ರನ್ ಹಾಗೂ ನೇಹಾಲ್ ವಧೇರಾ ಕೂಡ 18 ರನ್ ಗಳಿಸಿದ್ದಾರೆ.

  • 22 Apr 2024 08:22 PM (IST)

    ನಬಿ ಔಟ್

    ಮುಂಬೈ ಇಂಡಿಯನ್ಸ್ 52 ರನ್ ಗಳಿಸುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಮೊಹಮ್ಮದ್ ನಬಿ 17 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಮೊಹಮ್ಮದ್ ನಬಿ ಅವರನ್ನು ಯುಜ್ವೇಂದ್ರ ಚಹಾಲ್ ಔಟ್ ಮಾಡಿದರು.

  • 22 Apr 2024 08:05 PM (IST)

    ಪವರ್ ಪ್ಲೇ ಅಂತ್ಯ

    ಮುಂಬೈ ಇಂಡಿಯನ್ಸ್ ಮೊದಲ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 45 ರನ್ ಗಳಿಸಿದೆ. ತಿಲಕ್ ವರ್ಮಾ 6 ರನ್ ಹಾಗೂ ಮೊಹಮ್ಮದ್ ನಬಿ 20 ರನ್ ಗಳಿಸಿ ಆಡುತ್ತಿದ್ದಾರೆ.

  • 22 Apr 2024 08:04 PM (IST)

    ಸೂರ್ಯ ಔಟ್

    ಮುಂಬೈ ಇಂಡಿಯನ್ಸ್ ಕೂಡ ಮೂರನೇ ವಿಕೆಟ್ ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ 8 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ಮುಂಬೈ ತಂಡ 3.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ.

  • 22 Apr 2024 07:45 PM (IST)

    ಎರಡನೇ ವಿಕೆಟ್

    ಮುಂಬೈ ಇಂಡಿಯನ್ಸ್ ಎರಡನೇ ವಿಕೆಟ್ ಕಳೆದುಕೊಂಡಿದೆ. ಇಶಾನ್ ಕಿಶನ್ ಕೂಡ ಔಟಾಗಿದ್ದಾರೆ. ಇಶಾನ್ ಕಿಶನ್ ಖಾತೆ ತೆರೆಯದೆ ಪೆವಿಲಿಯನ್​ಗೆ ಮರಳಿದ್ದಾರೆ.

  • 22 Apr 2024 07:39 PM (IST)

    ರೋಹಿತ್ ಔಟ್

    ಮುಂಬೈ ಇಂಡಿಯನ್ಸ್ ಮೊದಲ ಓವರ್​ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ಇದೀಗ ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಬಂದಿದ್ದಾರೆ.

  • 22 Apr 2024 07:20 PM (IST)

    ರಾಜಸ್ಥಾನ್ ರಾಯಲ್ಸ್

    ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

    ಇಂಪ್ಯಾಕ್ಟ್ ಪ್ಲೇಯರ್: ಜೋಸ್ ಬಟ್ಲರ್, ಕೇಶವ್ ಮಹಾರಾಜ್, ಶುಭಂ ದುಬೆ, ನವದೀಪ್ ಸೈನಿ, ಟಾಮ್ ಕೊಹ್ಲರ್-ಕ್ಯಾಡ್ಮೋರ್.

  • 22 Apr 2024 07:20 PM (IST)

    ಮುಂಬೈ ಇಂಡಿಯನ್ಸ್

    ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ನೆಹಾಲ್ ವಧೇರಾ, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ.

    ಇಂಪ್ಯಾಕ್ಟ್ ಪ್ಲೇಯರ್: ನುವಾನ್ ತುಷಾರ, ಆಕಾಶ್ ಮಧ್ವಲ್, ನಮನ್ ಧೀರ್, ಶಮ್ಸ್ ಮುಲಾನಿ, ಡೆವಾಲ್ಡ್ ಬ್ರೂಯಿಸ್.

  • 22 Apr 2024 07:06 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 22 Apr 2024 06:42 PM (IST)

    ರಾಜಸ್ಥಾನ್- ಮುಂಬೈ ಹಣಾಹಣಿ

    ಐಪಿಎಲ್ 2024ರ 38ನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.

  • Published On - Apr 22,2024 6:41 PM

    Follow us
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್