AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanju Samson: ಟೀಮ್ ಇಂಡಿಯಾದಿಂದ ಸಂಜು ಸ್ಯಾಮ್ಸನ್ ಔಟ್: ಯುವ ಆಟಗಾರ ಆಯ್ಕೆ

India vs Sri Lanka 2nd T20: ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್ ಅವರ ಬದಲಿಗೆ ಅರ್ಷದೀಪ್ ಸಿಂಗ್ ಕಣಕ್ಕಿಳಿಯಬಹುದು. ಜ್ವರದ ಕಾರಣ ಅರ್ಷದೀಪ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

Sanju Samson: ಟೀಮ್ ಇಂಡಿಯಾದಿಂದ ಸಂಜು ಸ್ಯಾಮ್ಸನ್ ಔಟ್: ಯುವ ಆಟಗಾರ ಆಯ್ಕೆ
Sanju Samson
TV9 Web
| Edited By: |

Updated on:Jan 04, 2023 | 10:43 PM

Share

India vs Sri lanka 2nd T20: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಸಂಜು ಸ್ಯಾಮ್ಸನ್ (Sanju Samson) ಹೊರಬಿದ್ದಿದ್ದಾರೆ. ಮೊದಲ ಟಿ20 ಪಂದ್ಯದ ಫೀಲ್ಡಿಂಗ್ ವೇಳೆ ಸ್ಯಾಮ್ಸನ್ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದೀಗ ಅವರ ಗಾಯದ ಸ್ಕ್ಯಾನ್ ರಿಪೋರ್ಟ್ ಬಂದಿದ್ದು, ಗಾಯವು ಗಂಭೀರವಾಗಿರುವ ಕಾರಣ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಅವರನ್ನು ಟೀಮ್ ಇಂಡಿಯಾದಿಂದ ಕೈ ಬಿಡಲಾಗಿದೆ. ಇನ್ನು ಸಂಜು ಸ್ಯಾಮ್ಸನ್ ಅವರ ಸ್ಥಾನದಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜಿತೇಶ್ ಶರ್ಮಾಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ.

ರಣಜಿಯಲ್ಲಿ ವಿದರ್ಭ ಪರ ಆಡುತ್ತಿರುವ ಜಿತೇಶ್ ಶರ್ಮಾ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ತಂಡದಲ್ಲಿದ್ದಾರೆ. ಅಲ್ಲದೆ ಕಳೆದ ಸೀಸನ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಇದೀಗ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಿಂದ ಜಿತೇಶ್ ಶರ್ಮಾಗೆ ಬುಲಾವ್ ಸಿಕ್ಕಿದೆ.

ಅದರಂತೆ ಶ್ರೀಲಂಕಾ ವಿರುದ್ಧದ ಮುಂದಿನ 2 ಪಂದ್ಯಗಳಿಗಾಗಿ ಜಿತೇಶ್ ಶರ್ಮಾ ಟೀಮ್ ಇಂಡಿಯಾದಲ್ಲಿ ಇರಲಿದ್ದಾರೆ. ಇನ್ನು ಸ್ಯಾಮ್ಸನ್ ಅವರ ತಂಡದಿಂದ ಹೊರಗುಳಿದಿರುವ ಕಾರಣ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರಲಿದೆ. ಅದರಂತೆ ರಾಹುಲ್ ತ್ರಿಪಾಠಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ
Image
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
Image
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
Image
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
Image
IPL 2023 RCB Team: RCB ಹೊಸ ತಂಡ ಹೀಗಿದೆ

ಏಕೆಂದರೆ ಕಳೆದ ಕೆಲ ಸರಣಿಗಳಿಂದ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರುವ ತ್ರಿಪಾಠಿಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ಇದೀಗ ಸಂಜು ಸ್ಯಾಮ್ಸನ್ ಹೊರಗುಳಿದರೆ ರಾಹುಲ್ ತ್ರಿಪಾಠಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು.

ಇದಾಗ್ಯೂ 2ನೇ ಪಂದ್ಯದಲ್ಲೂ  ಆರಂಭಿಕರಾಗಿ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ಮುಂದುವರೆಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡರೆ, ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್​ ತ್ರಿಪಾಠಿಗೆ ಅವಕಾಶ ಸಿಗಬಹುದು. 5ನೇ, 6ನೇ ಮತ್ತು 7ನೇ ಕ್ರಮಾಂಕದಲ್ಲಿ ಆಲ್​ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್ ಅವರ ಬದಲಿಗೆ ಅರ್ಷದೀಪ್ ಸಿಂಗ್ ಕಣಕ್ಕಿಳಿಯಬಹುದು. ಜ್ವರದ ಕಾರಣ ಅರ್ಷದೀಪ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಉಳಿದಂತೆ ಶಿವಂ ಮಾವಿ, ಉಮ್ರಾನ್ ಮಲಿಕ್ ಹಾಗೂ ಯುಜುವೇಂದ್ರ ಚಹಾಲ್ ಬೌಲಿಂಗ್ ವಿಭಾಗದಲ್ಲಿ ಮುಂದುವರೆಯಲಿದ್ದಾರೆ.

ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಟೀಮ್ ಇಂಡಿಯಾ ಟಿ20 ತಂಡ:

ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್, ಜಿತೇಶ್ ಶರ್ಮಾ.

Published On - 10:41 pm, Wed, 4 January 23