AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH-CSK ಪಂದ್ಯದ ವೇಳೆ ಬ್ಲಾಕ್ ಮ್ಯಾಜಿಕ್; ನಿಂಬೆ ಹಣ್ಣು ಮಂತ್ರಿಸಿದ ಕೂಡಲೇ ಬಿತ್ತು ವಿಕೆಟ್!

SRH vs CSK IPL 2026: ಐಪಿಎಲ್ 2026 ರ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸಿತು. ಈ ಪಂದ್ಯದ ವೇಳೆ 'ಮಾಟ-ಮಂತ್ರ'ದ ಪ್ರಯೋಗ ನಡೆದಿದೆ ಎಂಬ ವಿಡಿಯೋ ಹಾಗೂ ಬಿಸಿಸಿಐಗೆ ದೂರು ನೀಡಲಾಗಿದೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ವಿಡಿಯೋದಲ್ಲಿನ ಘಟನೆ ಕೇವಲ ಕಾಕತಾಳೀಯ. ಅಲ್ಲದೆ, ಸಿಎಸ್‌ಕೆ ಬಿಸಿಸಿಐಗೆ ದೂರು ನೀಡಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಮತ್ತು ನಕಲಿ ದೂರು ಪ್ರತಿಯೂ ಸತ್ಯಾಂಶಕ್ಕೆ ದೂರವಾಗಿದೆ.

SRH-CSK ಪಂದ್ಯದ ವೇಳೆ ಬ್ಲಾಕ್ ಮ್ಯಾಜಿಕ್; ನಿಂಬೆ ಹಣ್ಣು ಮಂತ್ರಿಸಿದ ಕೂಡಲೇ ಬಿತ್ತು ವಿಕೆಟ್!
Srh Vs Csk
ಪೃಥ್ವಿಶಂಕರ
|

Updated on:Apr 19, 2026 | 4:23 PM

Share

ಐಪಿಎಲ್ 2026 (IPL 2026) ರ 27 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಮ್ಮ ಮೂರನೇ ಗೆಲುವು ದಾಖಲಿಸಿತು. ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 195 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿಫಲವಾಯಿತು. ಪರಿಣಾಮವಾಗಿ ಸಿಎಸ್​​ಕೆ ಲೀಗ್​ನಲ್ಲಿ 4ನೇ ಸೋಲು ಅನುಭವಿಸಿದರೆ, ಇತ್ತ ಸನ್‌ರೈಸರ್ಸ್ ಮೂರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇದು ಪಂದ್ಯದ ವಿಚಾರವಾದರೆ, ಇದೇ ಪಂದ್ಯದ ವೇಳೆ ಮಾಟ- ಮಂತ್ರದ ಪ್ರಯೋಗ ನಡೆದಿದ್ದು, ಇದರಿಂದಾಗಿ ಸಿಎಸ್​​ಕೆ ತಂಡ ಸೋತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಈ ವಿಚಾರವಾಗಿ ಸಿಎಸ್​ಕೆ ಆಡಳಿತ ಮಂಡಳಿ ಬಿಸಿಸಿಐಗೆ ದೂರು ನೀಡಿದೆ ಎಂದು ವರದಿಯಾಗಿದ್ದು, ದೂರಿನ ಪ್ರತಿಯೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಅದರ ಅಸಲಿಯತ್ತೇನು ಎಂಬುದನ್ನು ನೋಡುವುದಾದರೆ..

ವೈರಲ್ ವಿಡಿಯೋದಲ್ಲಿ ಇರುವುದೇನು?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಇರುವುದೇನು ಎಂಬುದನ್ನು ನೋಡುವುದಾದರೆ.. ಸನ್‌ರೈಸರ್ಸ್ ತಂಡದ ಜೆರ್ಸಿ ತೊಟ್ಟಿರುವ ಅಭಿಮಾನಿಯೊಬ್ಬ ಸಿಎಸ್​​ಕೆ ತಂಡದ ಬ್ಯಾಟಿಂಗ್‌ ನಡೆಯುವ ವೇಳೆ ತನ್ನ ಕಿಸೆಯಲ್ಲಿದ್ದ ನಿಂಬೆ ಹಣ್ಣನ್ನು ಹೊರತೆಗೆದು ಮಂತ್ರ ಜಪಿಸಿದ್ದಾನೆ. ಆತ ಹಾಗೆ ಮಾಡಿದ ಕೂಡಲೇ ಸಿಎಸ್​ಕೆ ಪರ ಬ್ಯಾಟಿಂಗ್‌ ಮಾಡುತ್ತಿದ್ದ ಸ್ಫೋಟಕ ದಾಂಡಿಗ ಶಿವಂ ದುಬೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದೆಲ್ಲವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿದೆ. ಆದಾಗ್ಯೂ ಈ ವಿಡಿಯೋದಲ್ಲಿ ಸನ್‌ರೈಸರ್ಸ್ ಅಭಿಮಾನಿ ನಿಂಬೆ ಹಣ್ಣನ್ನು ಮಂತ್ರಿಸಿರುವುದು ಸತ್ಯವಾಗಿದ್ದರೂ, ಆತನ ಮಂತ್ರದಿಂದಲೇ ವಿಕೆಟ್ ಬಿತ್ತು ಎಂದು ಹೇಳಲಾಗದು. ಆತ ಹಾಗೆ ಮಾಡುವುದಕ್ಕೂ ವಿಕೆಟ್ ಬೀಳುವುದಕ್ಕೂ ಕಾಕತಾಳೀಯವಿರಬಹುದೇ ಹೊರತು ಇದರಲ್ಲಿ ಯಾವುದೇ ಬ್ಲಾಕ್ ಮ್ಯಾಜಿಕ್ ನಡೆದಿಲ್ಲ. ಇಂತಹ ಮೂಡನಂಭಿಕೆಗಳನ್ನು ಟಿವಿ9 ಕನ್ನಡ ಪ್ರೋತ್ಸಾಹಿಸುವುದಿಲ್ಲ.

ದೂರು ನೀಡಿತಾ ಸಿಎಸ್​ಕೆ?

ಇನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಬಿಸಿಸಿಐಗೆ ದೂರು ಸಲ್ಲಿಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ದೂರಿನ ಪ್ರತಿಯೂ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಿಎಸ್​ಕೆ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹಾಗೆಯೇ ಸಿಎಸ್​ಕೆ ಆಡಳಿತ ಮಂಡಳಿ ಈ ರೀತಿಯ ವಿಚಾರಗಳಿಗೆ ದೂರು ನೀಡುವ ಸಾಧ್ಯತೆಗಳಿಲ್ಲ. ಹೀಗಾಗಿ ವೈರಲ್ ಆಗಿರುವ ದೂರಿನ ಪ್ರತಿ ನಕಲಿಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Sun, 19 April 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!