RCB ಬಲವೇ, SRH ದೌರ್ಬಲ್ಯ: 40 ತಿಂಗಳ ಬಳಿಕ ವೇಗಾಸ್ತ್ರವಿಲ್ಲದೆ ಕಣಕ್ಕಿಳಿಯಲಿದೆ ಸನ್‌ರೈಸರ್ಸ್
IPL 2025 SRH vs RR: ಐಪಿಎಲ್ ಸೀಸನ್-18ರ ದ್ವಿತೀಯ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಕಣಕ್ಕಿಳಿಯಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 3.30 ರಿಂದ ಶುರುವಾಗಲಿದೆ. ಈ ಪಂದ್ಯದ ಮೂಲಕ ಯಾವ ತಂಡ ಶುಭಾರಂಭ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇಂದು (ಮಾ.23) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) ದ್ವಿತೀಯ ಪಂದ್ಯದಲ್ಲಿ ಇಂದು ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಮುಖ ಆಟಗಾರನಿಲ್ಲದೆ ಕಣಕ್ಕಿಳಿಯುತ್ತಿರುವುದು ವಿಶೇಷ.
ಅಂದರೆ ಕಳೆದ 10 ವರ್ಷಗಳ ಕಾಲ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ಭುವನೇಶ್ವರ್ ಕುಮಾರ್ ಇಲ್ಲದೆ, ಎಸ್ಆರ್ಹೆಚ್ ಇದೀಗ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದು ಸಹ 40 ತಿಂಗಳುಗಳ ಬಳಿಕ ಭುವಿ ಇಲ್ಲದೆ ಸನ್‌ರೈಸರ್ಸ್ ಪಂದ್ಯವಾಡುತ್ತಿರುವುದು ವಿಶೇಷ.
ಭುವನೇಶ್ವರ್ ಕುಮಾರ್ ಇಲ್ಲದೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ ರೂಪಿಸಿದ್ದು 2021 ರಲ್ಲಿ. ಆ ಬಳಿಕ ಎಸ್ಆರ್ಹೆಚ್ ತಂಡದ ಎಲ್ಲಾ ಪಂದ್ಯಗಳಲ್ಲೂ ಭುವಿ ಕಾಣಿಸಿಕೊಂಡಿದ್ದರು.
ಇದೀಗ ಬರೋಬ್ಬರಿ 40 ತಿಂಗಳ ಬಳಿಕ ಅಂದರೆ 1261 ದಿನಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ತಂಡವು ಭುವಿ ಇಲ್ಲದೆ ಐಪಿಎಲ್ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ.
11 ವರ್ಷ ಆಡಿದ್ದ ಭುವಿ:
2014 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಭುವನೇಶ್ವರ್ ಕುಮಾರ್ 2024 ರವರೆಗೆ ಒಂದೇ ಫ್ರಾಂಚೈಸಿ ಪರ 11 ಸೀಸನ್ ಆಡಿದ್ದಾರೆ. ಆದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇತ್ತ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಅವರನ್ನು ಬರೋಬ್ಬರಿ 10.75 ಕೋಟಿ ರೂ.ಗೆ ಖರೀದಿಸಿ ಆರ್ಸಿಬಿ ತನ್ನ ಬೌಲಿಂಗ್ ಬಲವನ್ನು ಹೆಚ್ಚಿಸಿದೆ. ಅತ್ತ ಭುವಿ ಕೈ ತಪ್ಪಿರುವುದೇ ಈಗ ಎಸ್ಆರ್ಹೆಚ್ ತಂಡದ ದೌರ್ಬಲ್ಯ ಎಂದರೆ ತಪ್ಪಾಗಲಾರದು.
ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ ಪ್ರದರ್ಶನ:
ಭುವನೇಶ್ವರ್ ಕುಮಾರ್ ಇದುವರೆಗೆ ಐಪಿಎಲ್‌ನಲ್ಲಿ 176 ಪಂದ್ಯಗಳನ್ನು ಆಡಿದ್ದು, ಈ ವೇಳೆ 181 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ 181 ವಿಕೆಟ್‌ಗಳಲ್ಲಿ, ಅವರು ಕಳೆದ 11 ಐಪಿಎಲ್ ಸೀಸನ್ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ 147 ವಿಕೆಟ್‌ಗಳನ್ನು ಪಡೆದಿದ್ದಾರೆ. ಸನ್‌ರೈಸರ್ಸ್ ಪರ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದು 2017 ರಲ್ಲಿ. ಅಂದು ಅವರು 14 ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು ಐಪಿಎಲ್ ಸೀಸನ್ನಲ್ಲಿನ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, ಭುವನೇಶ್ವರ್ ಇದುವರೆಗೆ 3 ಬಾರಿ 20 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಅದು ಸಹ ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಾಗ ಎಂಬುದು ವಿಶೇಷ.
ಸನ್‌ರೈಸರ್ಸ್ ಹೈದರಾಬಾದ್ ತಂಡ: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಸಚಿನ್ ಬೇಬಿ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಆ್ಯಡಂ ಝಂಪಾ, ಮೊಹಮ್ಮದ್ ಶಮಿ, ರಾಹುಲ್ ಚಹರ್, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ಅಥರ್ವ ಟೈಡೆ, ಸಿಮರ್‌ಜೀತ್ ಸಿಂಗ್, ಎಶನ್ ಮಾಲಿಂಗ, ಅನಿಕೇತ್ ವರ್ಮಾ.
ಇದನ್ನೂ ಓದಿ: VIDEO: ಅವನು ನನ್ನ ಫ್ಯಾನ್, ಏನೂ ಮಾಡ್ಬೇಡಿ… ಅಭಿಮಾನಿಯ ಬೆಂಬಲಕ್ಕೆ ನಿಂತ ವಿರಾಟ್ ಕೊಹ್ಲಿ
ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶುಭಂ ದುಬೆ, ವನಿಂದು ಹಸರಂಗ, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ, ಫಝಲ್ಹಕ್ ಫಾರೂಖಿ, ಯುಗ್ ಚರಕ್, ಮಹೇಶ್ ತೀಕ್ಷಣ, ಕ್ವೇನಾ ಮಫಕಾ, ಅಶೋಕ್ ಶರ್ಮಾ, ವೈಭವ್ ಸೂರ್ಯವಂಶಿ, ಕುನಾಲ್ ಸಿಂಗ್ ರಾಥೋಡ್.