AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಇದೇನು ಗಲ್ಲಿ ಕ್ರಿಕೆಟಾ? ಚೆಂಡಿಗಾಗಿ ವೇದಿಕೆ ಕೆಳಗೆ ನುಗ್ಗಿದ ವಿರಾಟ್ ಕೊಹ್ಲಿ

T20 World Cup 2024: ಟಿ20 ವಿಶ್ವಕಪ್​ನ 47ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 196 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡ 146 ರನ್​ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ತಂಡವು 50 ರನ್​ಗಳ ಗೆಲುವು ದಾಖಲಿಸಿದೆ.

VIDEO: ಇದೇನು ಗಲ್ಲಿ ಕ್ರಿಕೆಟಾ? ಚೆಂಡಿಗಾಗಿ ವೇದಿಕೆ ಕೆಳಗೆ ನುಗ್ಗಿದ ವಿರಾಟ್ ಕೊಹ್ಲಿ
Virat Kohli
ಝಾಹಿರ್ ಯೂಸುಫ್
|

Updated on: Jun 23, 2024 | 11:17 AM

Share

ಶನಿವಾರ ನಡೆದ ಟಿ20 ವಿಶ್ವಕಪ್ (T20 World Cup 2024) ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಭಾರತ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 196 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡ ಆರಂಭದಲ್ಲಿ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತ್ತು.

ಆದರೆ ಆ ಬಳಿಕ ಸಾಂಘಿಕ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಬೌಲರ್​ಗಳು ಬಾಂಗ್ಲಾದೇಶ್ ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಇದರ ನಡುವೆ ನಡೆದ ಘಟನೆಯೊಂದು ಇಡೀ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು.

ಬಾಂಗ್ಲಾದೇಶ್ ಇನಿಂಗ್ಸ್​ನ 17ನೇ ಓವರ್​ನಲ್ಲಿ ಅರ್ಷದೀಪ್ ಸಿಂಗ್​ ಎಸೆತದಲ್ಲಿ ರಿಶಾದ್ ಹೊಸೈನ್ ಡೀಪ್ ಮಿಡ್-ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ್ದರು. ಈ ವೇಳೆ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಸಮಯ ವ್ಯರ್ಥ ಮಾಡದೆ ಚೆಂಡನ್ನು ಹೆರಕಲು ಓಡಿದರು.

ಆದರೆ ಚೆಂಡು ಪಟಾಕಿ ಸಿಡಿಸುವ ವೇದಿಕೆಯ ಕೆಳಗೆ ನುಗ್ಗಿಯಾಗಿತ್ತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವಿರಾಟ್ ಕೊಹ್ಲಿ ಮಕ್ಕಳಂತೆ ವೇದಿಕೆ ಕೆಳಗೆ ನುಗ್ಗಿ ಚೆಂಡನ್ನು ತೆಗೆದರು.

ಇದೀಗ ವಿರಾಟ್ ಕೊಹ್ಲಿಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಇದೇನು ಗಲ್ಲಿ ಕ್ರಿಕೆಟಾ? ಎಂದು ಅನೇಕರು ಪ್ರಶ್ನಿಸಿದ್ದಾರೆ. ಇನ್ನು ಕ್ರಿಕೆಟ್ ಅಂಗಳದ ಕಿಂಗ್ ಆಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ ಈ ಸರಳತೆಯನ್ನು ಅನೇಕರು ಪ್ರಶಂಸಿದ್ದಾರೆ.

View this post on Instagram

A post shared by ICC (@icc)

ಗೆದ್ದು ಬೀಗಿದ ಟೀಮ್ ಇಂಡಿಯಾ:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್​ ಕಲೆಹಾಕಿತು.

ಇದನ್ನೂ ಓದಿ: Pat Cummins: 2 ಹ್ಯಾಟ್ರಿಕ್ಸ್: ವಿಶ್ವ ದಾಖಲೆ ನಿರ್ಮಿಸಿದ ಕಮಿನ್ಸ್

197 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ನಾಯಕ ನಜ್ಮುಲ್ ಹೊಸೈನ್ ಶಾಂಟೋ 32 ಎಸೆತಗಳಲ್ಲಿ 40 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 50 ರನ್​ಗಳ ಭರ್ಜರಿ ಜಯ ಸಾಧಿಸಿದೆ.