AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಕೋಟಿ ರೂ. ಕೊಟ್ಟರು ಕೊಹ್ಲಿ ನೀಡಿದ ಉಡುಗೂರೆಯನ್ನು ಮಾರುವುದಿಲ್ಲ ಎಂದ ಪಾಕಿಸ್ತಾನಿ ಅಭಿಮಾನಿ..!

ಟೀಂ ಇಂಡಿಯಾ ಆಟಗಾರರು ನಿಮಗೆ ಯಾಕೆ ಇಷ್ಟು ಎಂದು ಪಾಕಿಸ್ತಾನದ ಅಭಿಮಾನಿಯನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಅಭಿಮಾನಿ, 'ನಮ್ಮ ಸಂಸ್ಕೃತಿ ಮತ್ತು ಭಾರತದ ಸಂಸ್ಕೃತಿ ಒಂದೇ ಆಗಿದ್ದು, ಅವರು ತಮ್ಮಂತೆಯೇ ಕಾಣುತ್ತಾರೆ.

1 ಕೋಟಿ ರೂ. ಕೊಟ್ಟರು ಕೊಹ್ಲಿ ನೀಡಿದ ಉಡುಗೂರೆಯನ್ನು ಮಾರುವುದಿಲ್ಲ ಎಂದ ಪಾಕಿಸ್ತಾನಿ ಅಭಿಮಾನಿ..!
ಅಭಿಮಾನಿಗಳೊಂದಿಗೆ ಕೊಹ್ಲಿ
TV9 Web
| Edited By: |

Updated on: Sep 09, 2022 | 10:00 PM

Share

ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತದ ಅಭಿಮಾನಿಗಳು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ 71 ನೇ ಶತಕವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಕೊಹ್ಲಿಗೆ ಅಭಿಮಾನಿಗಳ ದಂಡೆ ಇದ್ದು, ಪಾಕಿಸ್ತಾನದಲ್ಲೂ ಇಂತಹ ಅಭಿಮಾನಿಗಳ ಸಂಖ್ಯೆ ಬಹಳ ದೊಡ್ಡದಿದೆ. ಇದೇ ಕಾರಣಕ್ಕೆ ಯುಎಇಯಲ್ಲಿ ಕೊಹ್ಲಿಯನ್ನು ನೋಡಲು ಬಂದಿದ್ದ ಅಭಿಮಾನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿಗಳು ಸೇರಿದ್ದರು. 71ನೇ ಶತಕ ಬಾರಿಸಿದ ಬಳಿಕ ಕೊಹ್ಲಿ ಅಂತಹ ಅಭಿಮಾನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಕೊಹ್ಲಿಯ ಬ್ಯಾಟ್ ಮಾರಲು ಒಪ್ಪದ ಪಾಕಿಸ್ತಾನದ ಅಭಿಮಾನಿ

ಕೊಹ್ಲಿಯಿಂದ ವಿಶೇಷ ಉಡುಗೊರೆ ಪಡೆದ ಅಭಿಮಾನಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್‌ನೊಂದಿಗೆ ಮಾತನಾಡುತ್ತಿದ್ದ ಅಭಿಮಾನಿ, ‘ನನ್ನ ಕೈಯಲ್ಲಿದ್ದ ಬ್ಯಾಟ್‌ಗೆ ವಿರಾಟ್ ಕೊಹ್ಲಿ ಭಯ್ಯಾ ಸಹಿ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ನಾನು ತುಂಬಾ ಅದೃಷ್ಟಶಾಲಿ, ಅವರು ಇಂದು ಶತಕ ಬಾರಿಸಿದ್ದಾರೆ. ಅದು ನನಗೆ ತುಂಬಾ ಸಂತೋಷ ನೀಡಿದೆ. ಪಂದ್ಯ ಮುಗಿದ ಬಳಿಕ ನಾನು ಕೊಹ್ಲಿ ಬಳಿ ವಿಶೇಷ ಮನವಿ ಮಾಡಿದ್ದೇ, ಅದನ್ನು ಒಪ್ಪಿಕೊಂಡಿದ್ದ ಅವರು ನನಗೆ ಬ್ಯಾಟ್ ಮೇಲೆ ಸಹಿ ಮಾಡಿ ಉಡುಗೂರೆಯಾಗಿ ನೀಡಿದ್ದರು.

ಈಗ ಕೊಹ್ಲಿ ಸಹಿ ಮಾಡಿದ ಬ್ಯಾಟನ್ನು ಇಲ್ಲಿನ ನಾಗರೀಕರೊಬ್ಬರು ಭಾರಿ ಬೆಲೆ ನೀಡಿ ಖರೀದಿಸಲು ಮುಂದಾಗಿದ್ದರು. ಆದರೆ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ ಎಂದು ಈ ಅಭಿಮಾನಿ ಹೇಳಿಕೊಂಡಿದ್ದಾರೆ. ಇಲ್ಲಿ ನಿಂತಿದ್ದ ಸಹೋದರರೊಬ್ಬರು ನನಗೆ 4000-5000 ದಿರ್ಹಮ್ (1 ದಿರ್ಹಾಮ್ = INR 21.68) ನೀಡುತ್ತೇನೆ ಈ ಬ್ಯಾಟ್ ನೀಡುವಂತೆ ಕೇಳಿಕೊಂಡರು. ಆದರೆ ನಾನು ಅದನ್ನು ಮಾರಾಟ ಮಾಡಲು ಬಯಸುವುದಿಲ್ಲ. ಅಲ್ಲದೆ ಯಾರಾದರೂ ಐದು ಲಕ್ಷ ದಿರ್ಹಮ್ (INR 1.08 ಕೋಟಿ) ನೀಡಿತ್ತೇನೆಂದರು ನಾನು ಈ ಬ್ಯಾಟನ್ನು ಮಾರಾಟ ಮಾಡುವುದಿಲ್ಲ ಎಂದು ಈ ಅಭಿಮಾನಿ ಹೇಳಿಕೊಂಡಿದ್ದಾರೆ.

ಭಾರತೀಯ ಆಟಗಾರರೆಂದರೆ ಪಾಕಿಗಳಿಗೆ ತುಂಬಾ ಇಷ್ಟ

ಟೀಂ ಇಂಡಿಯಾ ಆಟಗಾರರು ನಿಮಗೆ ಯಾಕೆ ಇಷ್ಟು ಎಂದು ಪಾಕಿಸ್ತಾನದ ಅಭಿಮಾನಿಯನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಅಭಿಮಾನಿ, ‘ನಮ್ಮ ಸಂಸ್ಕೃತಿ ಮತ್ತು ಭಾರತದ ಸಂಸ್ಕೃತಿ ಒಂದೇ ಆಗಿದ್ದು, ಅವರು ತಮ್ಮಂತೆಯೇ ಕಾಣುತ್ತಾರೆ. ನಮಗೆ ಕೊಹ್ಲಿ, ರೋಹಿತ್ ಮತ್ತು ಧೋನಿ ಎಂದರೆ ತುಂಬಾ ಇಷ್ಟ. ಇಸ್ಲಾಮಾಬಾದ್‌ನಲ್ಲಿ ವಾಸಿಸುವ ಅಭಿಮಾನಿ, 150 ಬ್ಯಾಟ್‌ಗಳ ಸಂಗ್ರಹವನ್ನು ಹೊಂದಿದ್ದು, ಅದರ ಮೇಲೆ ಅವರು ಪ್ರಪಂಚದಾದ್ಯಂತದ ಆಟಗಾರರ ಹಸ್ತಾಕ್ಷರಗಳನ್ನು ತೆಗೆದುಕೊಂಡಿದ್ದಾರೆ. ಅವರು ಭಾರತದ ಮಾಜಿ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅವರ ಹಸ್ತಾಕ್ಷರಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಮತ್ತು ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಹಸ್ತಾಕ್ಷರದ ಬ್ಯಾಟ್‌ಗಳೂ ಇವೆ ಎಂದಿದ್ದಾರೆ.

ವಿರಾಟ್ ಕೊಹ್ಲಿಗೆ ಗುರುವಾರ ಅತ್ಯಂತ ಮಹತ್ವದ ದಿನವಾಗಿತ್ತು. ಸುಮಾರು ಮೂರು ವರ್ಷಗಳ ನಂತರ, ಅವರ ಬ್ಯಾಟ್ ಶತಕ ಗಳಿಸಿತು. ಏಷ್ಯಾಕಪ್‌ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 122 ರನ್ ಗಳಿಸಿದ್ದರು. ಇದು ಅವರ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನದ ಮೊದಲ ಶತಕವಾಗಿದೆ. ಟಿ20ಯಲ್ಲಿ ಭಾರತದ ಪರ ಒಬ್ಬ ಆಟಗಾರ ಆಡಿದ ಅತಿ ದೊಡ್ಡ ಇನ್ನಿಂಗ್ಸ್ ಕೂಡ ಇದಾಗಿದೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ