AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಬಾಝ್​ಬಾಲ್​ಗೆ ಪ್ರತ್ಯುತ್ತರ ನೀಡುತ್ತೇವೆ: ರಾಹುಲ್ ದ್ರಾವಿಡ್

India vs England 2nd Test: ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಫೆಬ್ರವರಿ 2 ರಿಂದ ಶುರುವಾಗಲಿದೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯವು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈಎಸ್​ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿದೆ. 

IND vs ENG: ಬಾಝ್​ಬಾಲ್​ಗೆ ಪ್ರತ್ಯುತ್ತರ ನೀಡುತ್ತೇವೆ: ರಾಹುಲ್ ದ್ರಾವಿಡ್
Rahul Dravid-Rohit Sharma
TV9 Web
| Edited By: |

Updated on: Jan 30, 2024 | 10:53 AM

Share

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ನಾವು ಬಾಝ್​ಬಾಲ್​ಗೆ ಪ್ರತ್ಯುತ್ತರ ನೀಡಬೇಕಿದೆ… ಹೀಗಂದಿದ್ದು ಮಾತ್ಯಾರೂ ಅಲ್ಲ ಟೀಮ್ ಇಂಡಿಯಾ (Team India) ಕೋಚ್ ರಾಹುಲ್ ದ್ರಾವಿಡ್ (Rahul Dravid). ಆಂಗ್ಲರ ಪಡೆಯ ಆಕ್ರಮಣಕಾರಿ ಆಟಕ್ಕೆ ಪ್ರತಿತಂತ್ರ ರೂಪಿಸಬೇಕಾದ ಅಗತ್ಯತೆ ಇದೆ ಎಂಬುದು ಇದೀಗ ಭಾರತ ತಂಡಕ್ಕೆ ಮನವರಿಕೆಯಾಗಿದೆ.

ಏಕೆಂದರೆ ಹೈದರಾಬಾದ್​ನಲ್ಲಿ ನಡೆದ ಈ ಪಂದ್ಯದ ಮೊದಲ ಮೂರು ದಿನದಾಟಗಳಲ್ಲೂ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಇಂಗ್ಲೆಂಡ್ ತಂಡ 28 ರನ್​ಗಳ ಜಯಭೇರಿ ಬಾರಿಸಿತ್ತು.

ಈ ಗೆಲುವಿನ ಶ್ರೇಯಸ್ಸು ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಆಟಕ್ಕೆ (ಬಾಝ್​ಬಾಲ್) ಸಲ್ಲುತ್ತದೆ. ಇದೇ ಕಾರಣದಿಂದಾಗಿ ಆಂಗ್ಲರನ್ನು ಸೋಲಿಸಬೇಕಿದ್ದರೆ ಭಾರತ ತಂಡ ಕೂಡ ಬಾಝ್​ಬಾಲ್​ಗೆ ಪ್ರತ್ಯುತ್ತರ ನೀಡಬೇಕಾದ ಅಗತ್ಯತೆಯಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ನಾವು ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರೂ, ಇಂಗ್ಲೆಂಡ್ ಆಟಗಾರರು ಸ್ವೀಪ್ ಹಾಗೂ ರಿವರ್ಸ್ ಸ್ವೀಪ್​ ಶಾಟ್​ಗಳನ್ನು ಬಾರಿಸಿದರು. ಹೀಗೆ ಸ್ಥಿರವಾಗಿ ಇಂತಹ ಹೊಡೆತಗಳನ್ನು ಬಾರಿಸಿರುವುದನ್ನು ನಾನಂತು ನೋಡಿಲ್ಲ. ಅದು ಕೂಡ ತಪ್ಪುಗಳನ್ನೇ ಮಾಡದೇ ವೇಗವಾಗಿ ರನ್​ಗಳಿಸಿದ್ದಾರೆ. ಇದುವೇ ಇಂಗ್ಲೆಂಡ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಟೀಮ್ ಇಂಡಿಯಾ ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ತಂಡದ ಇಂತಹ ಅಟ್ಯಾಕಿಂಗ್​ ತಂತ್ರಕ್ಕೆ ನಾವು ಕೂಡ ಪ್ರತಿತಂತ್ರ ಹೆಣೆಯಬೇಕಿದೆ. ಬಾಝ್​ಬಾಲ್ ಆಟಕ್ಕೆ ನಾವು ಸಹ ಪ್ರತ್ಯುತ್ತರ ಕೊಡಲೇಬೇಕಿದೆ. ಅಂತಹದೊಂದು ಪ್ರತಿಕ್ರಿಯೆಯ ಅಗತ್ಯವಿದೆ. ಇದಕ್ಕಾಗಿ ಮುಂದಿನ ಪಂದ್ಯದಲ್ಲಿ ನಾವು ಸಹ ಒಂದಷ್ಟು ಪ್ಲ್ಯಾನ್ ಮತ್ತು ತಂತ್ರಗಳೊಂದಿಗೆ ಕಣಕ್ಕಿಳಿಯಲಿದ್ದೇವೆ ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ಏನಿದು ಬಾಝ್​ಬಾಲ್?

ನ್ಯೂಝಿಲೆಂಡ್​ನ ಮಾಜಿ ಆಟಗಾರ, ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಂ ಅವರ ಅಡ್ಡ ಹೆಸರು ಬಾಝ್. ಕ್ರಿಕೆಟ್​ ಅಂಗಳದಲ್ಲಿ ಬಾಝ್​ ಎಂದೇ ಗುರುತಿಸಿಕೊಂಡಿರುವ ಮೆಕಲಂ ಅವರ ಆಕ್ರಮಣಕಾರಿ ಟೆಸ್ಟ್ ಆಟದ ವಿಧಾನವನ್ನು ಇದೀಗ ಬಾಝ್​ಬಾಲ್ (BazBall) ಕ್ರಿಕೆಟ್ ಎಂದು ಕರೆಯಲಾಗುತ್ತಿದೆ. ವಿಶೇಷ ಎಂದರೆ ಬಾಝ್​ಬಾಲ್ ಆಟ ಶುರು ಮಾಡಿದ ಬಳಿಕ ಇಂಗ್ಲೆಂಡ್ 20 ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ 14 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು  5 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ಹಾಗೆಯೇ ಕೇವಲ 1 ಮ್ಯಾಚ್ ಅನ್ನು ಡ್ರಾ ಮಾಡಿಕೊಂಡಿದೆ.

2ನೇ ಟೆಸ್ಟ್ ಪಂದ್ಯ ಯಾವಾಗ?

ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಫೆಬ್ರವರಿ 2 ರಿಂದ ಶುರುವಾಗಲಿದೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯವು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈಎಸ್​ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: IND vs ENG 2nd Test: ಟೀಮ್ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಅಲಭ್ಯ

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸಮಬಲ ಸಾಧಿಸುವ ಇರಾದೆಯಲ್ಲಿದೆ.

ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್!
ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್!