WPL 2027 ವೇಳಾಪಟ್ಟಿ ಪ್ರಕಟ; ಆರ್‌ಸಿಬಿ vs ಮುಂಬೈ ನಡುವೆ ಉದ್ಘಾಟನಾ ಪಂದ್ಯ

WPL 2027ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಜನವರಿ 14ರಿಂದ ವಡೋದರಾದಲ್ಲಿ ಮೊದಲ ಹಂತದ ಪಂದ್ಯಗಳು ನಡೆಯಲಿದ್ದು, ನಂತರ ಮುಂಬೈಗೆ ಸ್ಥಳಾಂತರಗೊಳ್ಳಲಿವೆ. ಒಟ್ಟು 22 ಪಂದ್ಯಗಳು, ಪ್ಲೇಆಫ್ ಮತ್ತು ಫೈನಲ್ ಒಳಗೊಂಡಿದ್ದು, ಫೆಬ್ರವರಿ 7ರಂದು ಫೈನಲ್ ನಡೆಯಲಿದೆ. ಎಲ್ಲಾ ಪಂದ್ಯಗಳು ರಾತ್ರಿ 7:30ಕ್ಕೆ ಆರಂಭವಾಗಲಿವೆ.

WPL 2027 ವೇಳಾಪಟ್ಟಿ ಪ್ರಕಟ; ಆರ್‌ಸಿಬಿ vs ಮುಂಬೈ ನಡುವೆ ಉದ್ಘಾಟನಾ ಪಂದ್ಯ
Wpl 2027
Image Credit source: WPL X

Updated on: Nov 04, 2026 | 8:00 PM

ಕೆಲವೇ ದಿನಗಳ ಹಿಂದೆ ಬಿಸಿಸಿಐ, 2027ರ ಮಹಿಳಾ ಪ್ರೀಮಿಯರ್ ಲೀಗ್​ಗಾಗಿ ಮಿನಿ ಹರಾಜು ನಡೆಸಿತ್ತು. ಇದೀಗ ಈ ಐದನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಮುಂದಿನ ಸೀಸನ್ 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದ್ದು, ಈ ಬಾರಿ ವಡೋದರಾ ಮತ್ತು ಮುಂಬೈ ನಗರಗಳು ಈ ಲೀಗ್​ಗೆ ಆತಿಥ್ಯ ವಹಿಸಲಿವೆ. ಎರಡೂ ನಗರಗಳಲ್ಲಿ ತಲಾ 11 ಪಂದ್ಯಗಳು ನಡೆಯಲಿವೆ. ಈ ಟೂರ್ನಿಗೆ ಜನವರಿ 14ರಂದು ವಡೋದರಾದಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಮೊದಲ ಹಂತಕ್ಕೆ ವಡೋದರಾದ ಆತಿಥ್ಯ

ವಡೋದರಾದಲ್ಲಿ ಜನವರಿ 14ರಿಂದ 24ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಐದು ತಂಡಗಳು ಪ್ರಶಸ್ತಿಗಾಗಿ ತಮ್ಮ ಅಭಿಯಾನ ಆರಂಭಿಸಲಿದ್ದು, ಈ ಹಂತದಲ್ಲಿ ಒಟ್ಟು 11 ಪಂದ್ಯಗಳು ಜರುಗಲಿವೆ. ಬಳಿಕ ಜನವರಿ 26ರಿಂದ ಟೂರ್ನಿಯ ಪಂದ್ಯಗಳು ಮುಂಬೈಗೆ ಸ್ಥಳಾಂತರಗೊಳ್ಳಲಿವೆ. ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೋರ್ನ್ ಕ್ರೀಡಾಂಗಣ ಉಳಿದ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಲೀಗ್ ಹಂತದ ಪಂದ್ಯಗಳು ಫೆಬ್ರವರಿ 3ರವರೆಗೆ ನಡೆಯಲಿವೆ.

Loading...

ಫೆ. 5ರಂದು ಎಲಿಮಿನೇಟರ್ ಪಂದ್ಯ

ಟೂರ್ನಿಯ ಪ್ರಶಸ್ತಿ ಕಾಳಗ ಮತ್ತಷ್ಟು ರೋಚಕವಾಗಲಿದ್ದು, ಫೆಬ್ರವರಿ 5ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಕ್ಕಾಗಿ ಮುಖಾಮುಖಿಯಾಗಲಿವೆ. ಇನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಫೆಬ್ರವರಿ 7ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಅಂತಿಮ ಹಣಾಹಣಿ ನಡೆಯಲಿದೆ. ಹಾಗೆಯೇ ಪ್ಲೇಆಫ್ ಪಂದ್ಯಗಳೂ ಸೇರಿದಂತೆ ಒಟ್ಟು 22 ಪಂದ್ಯಗಳು ರಾತ್ರಿ 7:30ಕ್ಕೆ ಆರಂಭವಾಗಲಿವೆ.

WPL 2027ರ ಸಂಪೂರ್ಣ ವೇಳಾಪಟ್ಟಿ

ಮೊದಲ ಹಂತ

  • ಜನವರಿ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್
  • ಜನವರಿ 15: ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್
  • ಜನವರಿ 16: ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಜನವರಿ 17: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್
  • ಜನವರಿ 18: ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್
  • ಜನವರಿ 19: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್
  • ಜನವರಿ 20: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್
  • ಜನವರಿ 21: ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್
  • ಜನವರಿ 22: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಜನವರಿ 23: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
  • ಜನವರಿ 24: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್

ಎರಡನೇ ಹಂತ

  • ಜನವರಿ 26: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಜನವರಿ 27: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್
  • ಜನವರಿ 28: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್
  • ಜನವರಿ 29: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್
  • ಜನವರಿ 30: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್
  • ಜನವರಿ 31: ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಫೆಬ್ರವರಿ 1: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
  • ಫೆಬ್ರವರಿ 2: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್
  • ಫೆಬ್ರವರಿ 3: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್

ಪ್ಲೇಆಫ್ ಪಂದ್ಯಗಳು

  • ಫೆಬ್ರವರಿ 5: ಎಲಿಮಿನೇಟರ್
  • ಫೆಬ್ರವರಿ 7: ಫೈನಲ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Wed, 4 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us