AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಸ್ಥಳಾಂತರ; ಬಿಸಿಸಿಐಗೆ ಅಧಿಕೃತ ಮನವಿ

ಭಾರತ vs ಶ್ರೀಲಂಕಾ ಏಕದಿನ ಸರಣಿಯ ಮೊದಲ ಪಂದ್ಯದ ಸ್ಥಳ ಬದಲಾವಣೆಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಬಿಸಿಸಿಐಗೆ ಮನವಿ ಸಲ್ಲಿಸಿದೆ. ಡಿಸೆಂಬರ್ 13ರಂದು ದೆಹಲಿಯಲ್ಲಿ ನಿಗದಿಯಾಗಿದ್ದ ಪಂದ್ಯಕ್ಕೆ ಕ್ರೀಡಾಂಗಣದ ನವೀಕರಣ ಮತ್ತು ಡಿಸೆಂಬರ್ ತಿಂಗಳ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ. ಬಿಸಿಸಿಐನ ಅಂತಿಮ ನಿರ್ಧಾರಕ್ಕಾಗಿ ಕ್ರೀಡಾ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.

ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ  ಪಂದ್ಯ ಸ್ಥಳಾಂತರ; ಬಿಸಿಸಿಐಗೆ ಅಧಿಕೃತ ಮನವಿ
Arun Jaitley StadiumImage Credit source: PTI
ಪೃಥ್ವಿಶಂಕರ
|

Updated on: Nov 03, 2026 | 10:39 PM

Share

ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸವನ್ನು ಮುಗಿಸಿದ ಬಳಿಕ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸರಣಿಗಳನ್ನು ಆಡಲಿದೆ. ಉಭಯ ತಂಡಗಳ ನಡುವೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಒಂದು ಪಂದ್ಯದ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ವಾಸ್ತವವಾಗಿ ಡಿಸೆಂಬರ್ 13ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಅಧಿಕೃತವಾಗಿ ಮನವಿ ಮಾಡಿದೆ.

ನಿಗದಿತ ವೇಳಾಪಟ್ಟಿಯ ಪ್ರಕಾರ, ಏಕದಿನ ಸರಣಿಯ ಮೊದಲ ಪಂದ್ಯ ಡಿಸೆಂಬರ್ 13ರಂದು ದೆಹಲಿಯಲ್ಲಿ ನಡೆಯಬೇಕಿದೆ. ಎರಡನೇ ಪಂದ್ಯ ಬೆಂಗಳೂರಿನಲ್ಲಿ ಹಾಗೂ ಮೂರನೇ ಪಂದ್ಯ ಅಹಮದಾಬಾದ್‌ನಲ್ಲಿ ಆಯೋಜನೆಯಾಗಿದೆ. ಆದರೆ ದೆಹಲಿಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿ ಹಾಗೂ ಡಿಸೆಂಬರ್ ತಿಂಗಳಲ್ಲಿನ ಹವಾಮಾನ ವೈಪರೀತ್ಯದ ಕಾರಣ ಪಂದ್ಯ ಆಯೋಜಿಸಲು ಸಾಧ್ಯವಿಲ್ಲ ಎಂದು ಡಿಡಿಸಿಎ ತಿಳಿಸಿದೆ.

ಪಂದ್ಯ ಸ್ಥಳಾಂತರಕ್ಕೆ ಡಿಡಿಸಿಎ ಮನವಿ

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡಿಡಿಸಿಎ ಮೂಲಗಳು, ಡಿಸೆಂಬರ್ 13ರಂದು ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐಗೆ ಅಧಿಕೃತವಾಗಿ ಮನವಿ ಸಲ್ಲಿಸಿರುವುದಾಗಿ ತಿಳಿಸಿವೆ. ಕ್ರೀಡಾಂಗಣದಲ್ಲಿ ಸದ್ಯ ನವೀಕರಣ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಗೆ ಡಿಸೆಂಬರ್‌ನಲ್ಲಿ ದೆಹಲಿಯ ಹವಾಮಾನವೂ ಪಂದ್ಯ ಆಯೋಜನೆಗೆ ಪೂರಕವಾಗಿರುವುದಿಲ್ಲ. ಹೀಗಾಗಿ ಪಂದ್ಯ ನಡೆಸಲು ತಾವು ಸಿದ್ಧರಿಲ್ಲ ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ.

ಈ ಕುರಿತು ಮಾತನಾಡಿದ ಡಿಡಿಸಿಎ ಮೂಲಗಳು, ‘ಡಿಸೆಂಬರ್ 13ರಂದು ನಡೆಯಬೇಕಿರುವ ಭಾರತ-ಶ್ರೀಲಂಕಾ ಏಕದಿನ ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ನಾವು ಬಿಸಿಸಿಐಗೆ ಅಧಿಕೃತವಾಗಿ ಮನವಿ ಮಾಡಿದ್ದೇವೆ. ನಮ್ಮ ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯ ಹವಾಮಾನವೂ ಸಮಸ್ಯೆಯಾಗಲಿದೆ. ಪಂದ್ಯ ಆಯೋಜಿಸುವ ಸ್ಥಿತಿಯಲ್ಲಿ ನಾವಿಲ್ಲ. ಈ ಬಗ್ಗೆ ಮಂಡಳಿಗೆ ಮನವಿ ಸಲ್ಲಿಸಿದ್ದೇವೆ. ಮುಂದೇನು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ’ ಎಂದು ತಿಳಿಸಿದ್ದಾರೆ.

ಭಾರತ- ನ್ಯೂಜಿಲೆಂಡ್ ನಡುವೆ 5 ಪಂದ್ಯಗಳ ಏಕದಿನ ಸರಣಿ; ಪೂರ್ಣ ವಿವರ ಇಲ್ಲಿದೆ

ಮೂರು ನಗರಗಳಲ್ಲಿ ಟಿ20 ಪಂದ್ಯಗಳು

ಏಕದಿನ ಸರಣಿಯ ಬಳಿಕ ಭಾರತ ಮತ್ತು ಶ್ರೀಲಂಕಾ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಸರಣಿಯ ಪಂದ್ಯಗಳು ರಾಜ್‌ಕೋಟ್, ಕಟಕ್ ಮತ್ತು ಪುಣೆಯಲ್ಲಿ ನಡೆಯಲಿವೆ. ಆದರೆ ಸದ್ಯ ಮೊದಲ ಏಕದಿನ ಪಂದ್ಯದ ಸ್ಥಳ ಬದಲಾವಣೆಯ ಬಗ್ಗೆ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ