AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಷದೀಪ್‌ಗೆ 4 ವಿಕೆಟ್, ಕೊಹ್ಲಿ 74 ರನ್; 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೆದ್ದ ಅನ್ಶುಲ್ ಕಾಂಬೋಜ್‌

ಆಕ್ಲೆಂಡ್‌ನಲ್ಲಿ ನಡೆದ ಮೊದಲ ODIನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಅಚ್ಚರಿ ಎಂಬಂತೆ, ಭರ್ಜರಿ ಬ್ಯಾಟಿಂಗ್ ಮಾಡಿದ ಕೊಹ್ಲಿ ಹಾಗೂ ನಾಲ್ಕು ವಿಕೆಟ್ ಪಡೆದ ಅರ್ಷದೀಪ್‌ರನ್ನು ಮೀರಿಸಿ ಅನ್ಶುಲ್ ಕಾಂಬೋಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅವರ 10 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ, 2 ವಿಕೆಟ್ ಕಬಳಿಸಿದ ಮಿತವ್ಯಯದ ಬೌಲಿಂಗ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಅರ್ಷದೀಪ್‌ಗೆ 4 ವಿಕೆಟ್, ಕೊಹ್ಲಿ 74 ರನ್; 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೆದ್ದ ಅನ್ಶುಲ್ ಕಾಂಬೋಜ್‌
Anshul KambojImage Credit source: BCCI X
ಪೃಥ್ವಿಶಂಕರ
|

Updated on: Nov 04, 2026 | 4:43 PM

Share

ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಮೊದಲು ಬೌಲರ್‌ಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು. ಬಳಿಕ ಶುಭ್​ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಸುಲಭವಾಗಿ ಗೆಲುವಿನ ದಡ ಸೇರಿತು. ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ವಿರಾಟ್ ಕೊಹ್ಲಿ ಕೇವಲ 51 ಎಸೆತಗಳಲ್ಲಿ 74 ರನ್ ಸಿಡಿಸಿ ಮಿಂಚಿದರು. ಆದರೆ ಅಚ್ಚರಿಯ ಸಂಗತಿಯೆಂದರೆ, ಎರಡು ವಿಕೆಟ್ ಪಡೆದ ಅನ್ಶುಲ್ ಕಾಂಬೋಜ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಹಾಗಾದರೆ, ಹೆಚ್ಚು ವಿಕೆಟ್ ಪಡೆದ ಬೌಲರ್ ಮತ್ತು ಸ್ಫೋಟಕ ಬ್ಯಾಟಿಂಗ್ ಮಾಡಿದ ಕೊಹ್ಲಿಯನ್ನು ಹಿಂದಿಕ್ಕಿ ಕಾಂಬೋಜ್ ಈ ಪ್ರಶಸ್ತಿ ಗೆದ್ದಿದ್ದೇಕೆ?

ಅನ್ಶುಲ್ ಕಾಂಬೋಜ್‌ಗೆ ಪಂದ್ಯಶ್ರೇಷ್ಠ ಗೌರವ

ಅನ್ಶುಲ್ ಕಾಂಬೋಜ್ ಅವರ ಮಿತವ್ಯಯದ ಬೌಲಿಂಗ್ ಪ್ರದರ್ಶನವೇ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ತಂದುಕೊಟ್ಟಿತು. ಅವರು ತಮ್ಮ 10 ಓವರ್‌ಗಳ ಕೋಟಾದಲ್ಲಿ ಕೇವಲ 22 ರನ್ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ವಿಶೇಷವೆಂದರೆ, ತಮ್ಮ ಬೌಲಿಂಗ್‌ನಲ್ಲಿ ಬರೋಬ್ಬರಿ 46 ಎಸೆತಗಳಲ್ಲಿ ಯಾವುದೇ ರನ್ ಬಿಟ್ಟುಕೊಡಲಿಲ್ಲ. ಆಕ್ಲೆಂಡ್ ಮೈದಾನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ ಕಾಂಬೋಜ್, ತಮ್ಮ ಶಾರ್ಟ್ ಲೆಂಗ್ತ್ ಎಸೆತಗಳ ಮೂಲಕ ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಅಲ್ಲದೆ, ಮಿಚೆಲ್ ಸ್ಯಾಂಟ್ನರ್ ಮತ್ತು ನಾಥನ್ ಸ್ಮಿತ್ ಅವರ ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅನ್ಶುಲ್ ಕಾಂಬೋಜ್‌ ಭರ್ಜರಿ ಕಮ್‌ಬ್ಯಾಕ್

ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅನ್ಶುಲ್ ಕಾಂಬೋಜ್, ತಮ್ಮ ಚೊಚ್ಚಲ ಪಂದ್ಯದಲ್ಲಿ 82 ರನ್ ಬಿಟ್ಟುಕೊಟ್ಟು ನಿರಾಸೆ ಅನುಭವಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಎರಡನೇ ಏಕದಿನ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಸಾಧನೆ ಮಾಡಿದ ಏಳನೇ ಭಾರತೀಯ

ಕೇವಲ ಎರಡು ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಏಳನೇ ಭಾರತೀಯ ಬೌಲರ್ ಎಂಬ ವಿಶೇಷ ಸಾಧನೆಯನ್ನು ಅನ್ಶುಲ್ ಕಾಂಬೋಜ್ ಮಾಡಿದ್ದಾರೆ. ಇದಕ್ಕೂ ಮೊದಲು ಜಸ್ಪ್ರೀತ್ ಬುಮ್ರಾ ಎರಡು ಬಾರಿ ಎರಡು ವಿಕೆಟ್‌ಗಳ ಸಾಧನೆಯೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 1990ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಅನಿಲ್ ಕುಂಬ್ಳೆ ಪಾತ್ರರಾಗಿದ್ದರು.

ಕೊಹ್ಲಿ ಕ್ಲಾಸ್, ವೇಗಿಗಳ ಮಾಸ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಭಾರತಕ್ಕೆ ಭರ್ಜರಿ ಗೆಲುವು

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 185 ರನ್‌ಗಳಿಗೆ ಆಲೌಟ್ ಆಯಿತು. ಟಿಮ್ ಸೀಫರ್ಟ್ 38 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಗ್ಲೆನ್ ಫಿಲಿಪ್ಸ್ 30 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬ್ಲೇರ್ ಟಿಕ್ನರ್ 34 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 185ಕ್ಕೆ ತಲುಪಿಸಲು ನೆರವಾದರು.

ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ನಾಯಕ ಶುಭ್ಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಕೇವಲ 104 ಎಸೆತಗಳಲ್ಲಿ 113 ರನ್‌ಗಳ ಅಮೂಲ್ಯ ಜೊತೆಯಾಟವಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ
ಬೆಂಗಳೂರಿನ ಜನರಿಗೆ ಬಿಗ್​​ ಶಾಕ್
ಬೆಂಗಳೂರಿನ ಜನರಿಗೆ ಬಿಗ್​​ ಶಾಕ್
ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು
ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?