ಸ್ಮೃತಿ ಮಂಧಾನ ಪಡೆ ಮತ್ತಷ್ಟು ಬಲಿಷ್ಠ: ಡಬ್ಲ್ಯುಪಿಎಲ್ 2027ಕ್ಕೆ ಆರ್‌ಸಿಬಿ ಸಜ್ಜು
ಆರ್‌ಸಿಬಿ ಮಹಿಳಾ ಪ್ರೀಮಿಯರ್ ಲೀಗ್ 2027ರ ಆವೃತ್ತಿಗೆ 17 ಆಟಗಾರ್ತಿಯರ ಬಲಿಷ್ಠ ತಂಡವನ್ನು ಕಟ್ಟಿದೆ. ಹರಾಜಿನಲ್ಲಿ ಜೆಸ್ ಜೊನಾಸೆನ್, ಕ್ಲೋಯ್ ಟ್ರಯಾನ್, ವೃಂದಾ ದಿನೇಶ್ ಮತ್ತು ತೇಜಲ್ ಹಸಬ್ನಿಸ್ ಅವರನ್ನು ಖರೀದಿಸಿ ತಂಡಕ್ಕೆ ಹೆಚ್ಚಿನ ಬಲ ನೀಡಲಾಗಿದೆ. ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡು, ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ವಿಭಾಗವನ್ನು ಗಟ್ಟಿಗೊಳಿಸಿರುವ ಆರ್‌ಸಿಬಿ, ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

ಮಹಿಳಾ ಪ್ರೀಮಿಯರ್ ಲೀಗ್ 2027ರ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 17 ಆಟಗಾರ್ತಿಯರ ಬಲಿಷ್ಠ ತಂಡವನ್ನು ಸಿದ್ಧಪಡಿಸಿದೆ. ಹರಾಜಿನಲ್ಲಿ ನಾಲ್ವರು ಆಟಗಾರ್ತಿಯರನ್ನು ಖರೀದಿಸುವ ಮೂಲಕ ಈಗಾಗಲೇ ಬಲಿಷ್ಠವಾಗಿದ್ದ ತಂಡವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ಲೋಯ್ ಟ್ರಯಾನ್ ಅವರನ್ನು ಆರ್‌ಸಿಬಿ 30 ಲಕ್ಷ ರೂ. ನೀಡಿ ಖರೀದಿಸಿದೆ. ಇನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಜೆಸ್ ಜೊನಾಸೆನ್ ಅವರನ್ನು 40 ಲಕ್ಷಕ್ಕೆ ತಂಡಕ್ಕೆ ಸೇರಿಸಿಕೊಂಡಿದೆ.
ಭಾರತದ ಬ್ಯಾಟರ್‌ಗಳಾದ ವೃಂದಾ ದಿನೇಶ್ ಅವರನ್ನು 10 ಲಕ್ಷಕ್ಕೆ ಹಾಗೂ ತೇಜಲ್ ಹಸಬ್ನಿಸ್ ಅವರನ್ನು 30 ಲಕ್ಷಕ್ಕೆ ಖರೀದಿಸಿದೆ. ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಒಟ್ಟು 1.1 ಕೋಟಿ ಖರ್ಚು ಮಾಡಿದೆ. ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಈ ಹಿಂದೆ 13.85 ಕೋಟಿ ವ್ಯಯಿಸಿದ್ದ ತಂಡದ ಬಳಿ ಇದೀಗ ಕೇವಲ 5 ಲಕ್ಷ ಬಾಕಿ ಉಳಿದಿದೆ. ಆರ್‌ಸಿಬಿ ತಂಡದಲ್ಲಿ ಒಟ್ಟು 11 ಭಾರತೀಯ ಆಟಗಾರ್ತಿಯರು ಹಾಗೂ ಆರು ವಿದೇಶಿ ಆಟಗಾರ್ತಿಯರಿದ್ದಾರೆ. ಬ್ಯಾಟಿಂಗ್ ಬಲದ ಜೊತೆಗೆ ಆಲ್‌ರೌಂಡರ್‌ಗಳ ಆಯ್ಕೆಯನ್ನೂ ಹೆಚ್ಚಿಸಿಕೊಂಡಿರುವ ತಂಡ, ಮುಂಬರುವ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ.
ಆರ್‌ಸಿಬಿ ಉಳಿಸಿಕೊಂಡಿದ್ದ ಆಟಗಾರ್ತಿಯರು
- ಸ್ಮೃತಿ ಮಂಧಾನ- 3.5 ಕೋಟಿ ರೂ.
- ರಿಚಾ ಘೋಷ್- 2.75 ಕೋಟಿ ರೂ.
- ಎಲ್ಲಿಸ್ ಪೆರ್ರಿ- 2 ಕೋಟಿ ರೂ.
- ಲಾರೆನ್ ಬೆಲ್- 90 ಲಕ್ಷ ರೂ.
- ಪೂಜಾ ವಸ್ತ್ರಾಕರ್- 85 ಲಕ್ಷ ರೂ.
- ಅರುಂಧತಿ ರೆಡ್ಡಿ- 75 ಲಕ್ಷ ರೂ.
- ರಾಧಾ ಯಾದವ್- 65 ಲಕ್ಷ ರೂ.
- ನಡಿನ್ ಡಿ ಕ್ಲರ್ಕ್- 65 ಲಕ್ಷ ರೂ.
- ಜಾರ್ಜಿಯಾ ವೋಲ್- 60 ಲಕ್ಷ ರೂ.
- ಶ್ರೇಯಾಂಕಾ ಪಾಟೀಲ್- 60 ಲಕ್ಷ ರೂ.
- ಸಯಾಲಿ ಸತ್ಘರೆ- 30 ಲಕ್ಷ ರೂ.
- ಪ್ರೇಮಾ ರಾವತ್- 20 ಲಕ್ಷ ರೂ.
- ಪ್ರತ್ಯೂಷಾ ಕುಮಾರ್- 10 ಲಕ್ಷ ರೂ.
ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ನಾಲ್ವರು ಆಟಗಾರ್ತಿಯರು
- ಜೆಸ್ ಜೊನಾಸೆನ್- 40 ಲಕ್ಷ ರೂ.
- ಕ್ಲೋಯ್ ಟ್ರಯಾನ್- 30 ಲಕ್ಷ ರೂ.
- ತೇಜಲ್ ಹಸಬ್ನಿಸ್- 30 ಲಕ್ಷ ರೂ.
- ವೃಂದಾ ದಿನೇಶ್- 10 ಲಕ್ಷ ರೂ.
ಈ ನಾಲ್ವರ ಸೇರ್ಪಡೆಯಿಂದ ಆರ್‌ಸಿಬಿ ತಂಡಕ್ಕೆ ಹೆಚ್ಚುವರಿ ಆಲ್‌ರೌಂಡರ್ ಆಯ್ಕೆಗಳು ಲಭ್ಯವಾಗಿವೆ. ಜೊತೆಗೆ ಬ್ಯಾಟಿಂಗ್ ವಿಭಾಗಕ್ಕೂ ಹೆಚ್ಚಿನ ಬಲ ಸಿಕ್ಕಿದೆ. ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡು, ಅಗತ್ಯವಿದ್ದ ಸ್ಥಾನಗಳನ್ನು ಹರಾಜಿನಲ್ಲಿ ತುಂಬಿರುವ ಆರ್‌ಸಿಬಿ, ಡಬ್ಲ್ಯುಪಿಎಲ್ 2027ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 pm, Wed, 28 October 26




