ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 165 ವಿಕೆಟ್ಗಳನ್ನು ಕಬಳಿಸಿರುವ ಅಶ್ವಿನ್ಗೆ ಲಿಯಾನ್ ಅವರ ಅತ್ಯಧಿಕ ವಿಕೆಟ್ಗಳ ಸಾಧನೆಯನ್ನು ಹಿಂದಿಕ್ಕಲು ಉತ್ತಮ ಅವಕಾಶವಿದೆ. ಲಿಯಾನ್ ಇದುವರೆಗೆ 174 ವಿಕೆಟ್ ಕಬಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದದರೆ, ಪ್ಯಾಟ್ ಕಮಿನ್ಸ್ (169) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 165 ವಿಕೆಟ್ಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಅಶ್ವಿನ್ ಮುಂಬರುವ ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದರೆ ಅಗ್ರಸ್ಥಾನಕ್ಕೇರಬಹುದು.