WTC Final 2023: ಟೀಮ್ ಇಂಡಿಯಾಗೆ 22 ವರ್ಷದ ಬೌಲರ್​ನದ್ದೇ ಚಿಂತೆ..!

WTC Final 2023: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಝಲ್​ವುಡ್, ಟ್ರಾವಿಸ್ ಹೆಡ್

WTC Final 2023: ಟೀಮ್ ಇಂಡಿಯಾಗೆ 22 ವರ್ಷದ ಬೌಲರ್​ನದ್ದೇ ಚಿಂತೆ..!
WTC Final 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 01, 2023 | 10:59 PM

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕಾಗಿ ಕೌಂಟ್ ಡೌನ್ ಶುರುವಾಗಿದೆ. ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ಶುರುವಾಗಲಿರುವ ಫೈನಲ್ ಫೈಟ್​ನಲ್ಲಿ ಭಾರತ (India) ಮತ್ತು ಆಸ್ಟ್ರೇಲಿಯಾ (Australia) ಮುಖಾಮುಖಿಯಾಗಲಿದೆ. ಈ ಅಂತಿಮ ಹಣಾಹಣಿಗಾಗಿ ಈಗಾಗಲೇ ಎರಡೂ ತಂಡಗಳು ತಯಾರಿ ಆರಂಭಿಸಿವೆ. ವಿಶೇಷ ಎಂದರೆ ಭಾರತಕ್ಕೆ ಇದು ಸತತ 2ನೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್. 2021 ರ WTC ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೋಲುಣಿಸಿ ನ್ಯೂಜಿಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಈ ಬಾರಿ ರೋಹಿತ್ ಶರ್ಮಾ ಪಡೆಯು ಯಾವುದೇ ಬೆಲೆ ತೆತ್ತಾದರೂ ಪ್ರಶಸ್ತಿ ಗೆಲ್ಲಲು ಪಣ ತೊಟ್ಟಿದೆ. ಆದರೆ ಟೀಮ್ ಇಂಡಿಯಾದ ಈ ಕನಸಿಗೆ ಆಸ್ಟ್ರೇಲಿಯಾದ ಯುವ ಬೌಲರ್ ಅಡ್ಡಿಯಾಗಬಲ್ಲರು. ಏಕೆಂದರೆ 22 ರ ಯುವ ಸ್ಪಿನ್ನರ್ ಈಗಾಗಲೇ ಟೀಮ್ ಇಂಡಿಯಾ ಮುಂದೆ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಅದು ಕೂಡ ಪ್ರತಿಷ್ಠೀತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎಂಬುದು ವಿಶೇಷ.

ಹೌದು, ಭಾರತದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ಪರ 22ರ ಯುವ ಸ್ಪಿನ್ನರ್ ಟಾಡ್ ಮರ್ಫಿ ಪಾದಾರ್ಪಣೆ ಮಾಡಿದ್ದರು. ಟಾಡ್ ಮೊದಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸುವ ಮೂಲಕ ತಲ್ಲಣ ಮೂಡಿಸಿದ್ದರು. 1882 ರ ನಂತರ, ಆಸ್ಟ್ರೇಲಿಯಾ ಪರ ಐದು ವಿಕೆಟ್ ಕಬಳಿಸಿದ ಅತ್ಯಂತ ಕಿರಿಯ ಸ್ಪಿನ್ನರ್ ಎಂಬ ದಾಖಲೆಯನ್ನು ಬರೆದಿದ್ದರು. ಅಲ್ಲದೆ ಟೀಮ್ ಇಂಡಿಯಾ ವಿರುದ್ಧದ ಸರಣಿಯಲ್ಲಿ 14 ವಿಕೆಟ್ ಕಬಳಿಸಿ ಮಿಂಚಿದ್ದರು.

ಇದನ್ನೂ ಓದಿ
Image
IPL 2023: ಪ್ರತಿ ಸೀಸನ್ ಐಪಿಎಲ್ ಆಡಿದ 7 ಆಟಗಾರರು ಯಾರು ಗೊತ್ತಾ?
Image
IPL 2023: ನಾನು ಬಂದಿರೋದು ಐಪಿಎಲ್ ಆಡುವುದಕ್ಕೆ, ಬೈಗುಳ ಕೇಳೋಕ್ಕಲ್ಲ: ನವೀನ್ ಉಲ್ ಹಕ್
Image
IPL 2023: RCB ಆಟಗಾರನ ಮಗನಿಗೆ ವಿಶೇಷ ಗಿಫ್ಟ್ ಕಳಿಸಿದ ವಿರಾಟ್ ಕೊಹ್ಲಿ
Image
Asia Cup 2023: ಏಷ್ಯಾಕಪ್​ಗೆ 6 ತಂಡಗಳು ಫೈನಲ್

ಇದೀಗ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್​ಗೆ ಅತ್ಯುತ್ತಮ ಸಾಥ್ ನೀಡುವ ಮೂಲಕ ಟಾಡ್ ಮರ್ಫಿ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ದಿ ಓವಲ್ ಮೈದಾನವು ಸ್ಪಿನ್ನರ್​ಗಳಿಗೆ ಸಹಕಾರಿಯಾಗಲಿದೆ ಎಂದು ಸ್ಟೀವ್ ಸ್ಮಿತ್ ತಿಳಿಸಿದ್ದಾರೆ. ಹೀಗಾಗಿ ಭಾರತದ ಸ್ಪಿನ್ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಇರುವ ವಿಶ್ವಾಸದಲ್ಲೇ ಆಸ್ಟ್ರೇಲಿಯಾ ಕಣಕ್ಕಿಳಿಯಲಿದೆ.

ಹೀಗಾಗಿಯೇ ದಿ ಓವಲ್​ ಮೈದಾನದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತದ ಆಟಗಾರರಿಂದ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ಯುವ ಸ್ಪಿನ್ನರ್ ಟಾಡ್ ಮರ್ಫಿ ಕಡೆಯಿಂದ ಸ್ಪಿನ್ ಮೋಡಿಯನ್ನು ಎದುರು ನೋಡಬಹುದಾಗಿದೆ.

ಇದನ್ನೂ ಓದಿ: WTC Final 2023: ರೋಹಿತ್ ಶರ್ಮಾ ಮುಂದಿದೆ 2 ದೊಡ್ಡ ಸವಾಲು..!

ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಝಲ್​ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.