AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zimbabwe vs India T20, Highlights: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ

IND vs ZIM 1st T20 Highlights: ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಭಾರತ 13.2 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ತಲುಪಿತು.

Zimbabwe vs India T20, Highlights: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ
India
ಪೃಥ್ವಿಶಂಕರ
|

Updated on:Jul 23, 2026 | 7:57 PM

Share

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಭಾರತ 13.2 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ತಲುಪಿತು. ತಂಡದ ಪರ ವೈಭವ್ ಸೂರ್ಯವಂಶಿ ಅರ್ಧಶತಕ ಗಳಿಸಿದರೆ, ಇಶಾನ್ ಕಿಶನ್ 35 ರನ್‌ಗಳ ಇನ್ನಿಂಗ್ಸ್ ಆಡಿದರು. ನಾಯಕ ಶ್ರೇಯಸ್ ಅಯ್ಯರ್ 28 ಮತ್ತು ಉಪನಾಯಕ ತಿಲಕ್ ವರ್ಮಾ 6 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಈಗ ಎರಡನೇ ಟಿ20 ಅಂತರರಾಷ್ಟ್ರೀಯ ಪಂದ್ಯವು ಜುಲೈ 25 ರಂದು ಅದೇ ಮೈದಾನದಲ್ಲಿ ನಡೆಯಲಿದೆ.

LIVE Cricket Score & Updates

The liveblog has ended.
  • 23 Jul 2026 07:54 PM (IST)

    IND vs ZIM 1st T20 Live: ಭಾರತಕ್ಕೆ ಸುಲಭ ಜಯ

    ಭಾರತ ತಂಡವು 13.2 ಓವರ್‌ಗಳಲ್ಲಿ 126 ರನ್‌ಗಳ ಗುರಿಯನ್ನು ತಲುಪಿ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದು ಭಾರತದ ಏಳು ಪಂದ್ಯಗಳ ಗೆಲುವಿಲ್ಲದ ಸರಣಿಯನ್ನು ಕೊನೆಗೊಳಿಸಿದಲ್ಲದೆ ಟಿ20 ವಿಶ್ವಕಪ್ ಫೈನಲ್ ನಂತರ ಮೊದಲ ಗೆಲುವು ದಾಖಲಿಸಿತು. ನಾಯಕ ಶ್ರೇಯಸ್ ಅಯ್ಯರ್ 28 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

  • 23 Jul 2026 07:49 PM (IST)

    ದೆಹಲಿಯ ಜಂತರ್​ ಮಂತರ್​ ಸುತ್ತಮುತ್ತ ಇಂಟರ್​​ನೆಟ್ ಸೇವೆ ಸ್ಥಗಿತ

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್​ ಮಂತರ್​​​ನ್ಲಲಿ ಪ್ರತಿಭಟನೆ ಮುಂದುವರೆದಿದ್ದು, ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಂತರ್​ ಮಂತರ್ ಮೈದಾನದ 1.5 ಕಿ.ಮೀ. ವ್ಯಾಪ್ತಿಯಲ್ಲಿ ಇಂಟರ್​​ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇಂದು (ಜುಲೈ 23) ರಾತ್ರಿ 12 ಗಂಟೆವರೆಗೆ ಇಂಟರ್​​ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

  • 23 Jul 2026 07:43 PM (IST)

    IND vs ZIM 1st T20 Live: ಕಿಶನ್ 35 ರನ್ ಗಳಿಸಿ ಔಟ್

    ಇಶಾನ್ ಕಿಶನ್ 24 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಭಾರತ 114 ರನ್ ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ಮುಜರಬಾನಿ ಎರಡನೇ ವಿಕೆಟ್ ಪಡೆದರು. ಭಾರತ ಸುಲಭ ಗೆಲುವಿನ ಅಂಚಿನಲ್ಲಿದೆ.

  • 23 Jul 2026 07:41 PM (IST)

    IND vs ZIM 1st T20 Live: 100 ರನ್ ಪೂರ್ಣ

    ಭಾರತ 10.2 ಓವರ್‌ಗಳಲ್ಲಿ 2 ವಿಕೆಟ್‌ಗೆ 102 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ ಬೌಂಡರಿ ಬಾರಿಸಿ ಸ್ಕೋರ್ ಅನ್ನು 100 ರ ಗಡಿ ದಾಟಿಸಿದರು.

  • 23 Jul 2026 07:40 PM (IST)

    IND vs ZIM 1st T20 Live: 10 ಓವರ್‌ಗಳಲ್ಲಿ ಭಾರತ ಸ್ಕೋರ್ 96/2

    ಇಶಾನ್ ಕಿಶನ್ 26 ಮತ್ತು ಶ್ರೇಯಸ್ ಅಯ್ಯರ್ 17 ರನ್ ಗಳಿಸಿದ್ದಾರೆ. ಭಾರತ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 96 ರನ್ ಗಳಿಸಿದೆ. ಟೀಮ್ ಇಂಡಿಯಾ ಗೆಲ್ಲಲು 60 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿದೆ.

  • 23 Jul 2026 07:28 PM (IST)

    IND vs ZIM 1st T20 Live: ಅರ್ಧಶತಕ ಬಾರಿಸಿ ವೈಭವ್ ಔಟ್

    ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಅರ್ಧಶತಕ ಗಳಿಸಿದರು. ಇನ್ನಿಂಗ್ಸ್‌ನಲ್ಲಿ ಅವರು ನಾಲ್ಕು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರು. ನಂತರ ಮುಂದಿನ ಎಸೆತದಲ್ಲಿಯೇ ಅವರು ರಿಚರ್ಡ್ ನ್ಗಾರವಾ ಅವರಿಗೆ ವಿಕೆಟ್ ಒಪ್ಪಿಸಿದರು.

  • 23 Jul 2026 07:11 PM (IST)

    IND vs ZIM 1st T20 Live: ಪವರ್‌ಪ್ಲೇನಲ್ಲಿ ಭಾರತದ ಸ್ಕೋರ್ 66/1

    ಆರು ಓವರ್‌ಗಳ ನಂತರ ಭಾರತ 1 ವಿಕೆಟ್‌ಗೆ 66 ರನ್ ಗಳಿಸಿದೆ. ವೈಭವ್ ಸೂರ್ಯವಂಶಿ 17 ಎಸೆತಗಳಲ್ಲಿ 48 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಇಶಾನ್ ಕಿಶನ್ 11 ಎಸೆತಗಳಲ್ಲಿ 16 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಭಿಷೇಕ್ ಶರ್ಮಾ 8 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು.

  • 23 Jul 2026 07:07 PM (IST)

    IND vs ZIM 1st T20 Live: ಮೊದಲ ವಿಕೆಟ್ ಪತನ

    ಭಾರತ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು, ಮೂರನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ (1) ಮುಜರಬಾನಿ ಬೌಲಿಂಗ್​ನಲ್ಲಿ ಔಟ್ ಆದರು.

  • 23 Jul 2026 06:47 PM (IST)

    IND vs ZIM 1st T20 Live: ವೈಭವ್ ಸಿಕ್ಸರ್

    ಭಾರತೀಯ ಇನ್ನಿಂಗ್ಸ್‌ನ ಮೊದಲ ಸಿಕ್ಸರ್ ಬಾರಿಸಿದ ವೈಭವ್ ಸೂರ್ಯವಂಶಿ, ರಿಚರ್ಡ್ ನ್ಗಾರವಾ ಎಸೆದ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಪುಲ್ ಶಾಟ್ ಹೊಡೆದರು.

  • 23 Jul 2026 06:43 PM (IST)

    ವಿದ್ಯಾರ್ಥಿಗಳ ಪ್ರತಿಭಟನೆಗೆ ನಟಿ ಕರಿನಾ ಕಪೂರ್​ ಬೆಂಬಲ

    ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಟಿ ಕರಿನಾ ಕಪೂರ್​ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಧ್ವನಿಯನ್ನ ನಿರ್ಲಕ್ಷಿಸುವುದು ಸರಿಯಲ್ಲ. ಒಂದು ಪೀಳಿಗೆಯು ತನ್ನ ಭವಿಷ್ಯದ ಬಗ್ಗೆ ಧ್ವನಿ ಎತ್ತಿದ್ದು, ವಿದ್ಯಾರ್ಥಿಗಳ ಮಾತುಗಳನ್ನ ಆಲಿಸಬೇಕಿರುವುದು ಕರ್ತವ್ಯ. ಅವರು ಭವಿಷ್ಯಕ್ಕೋಸ್ಕರ ಹೋರಾಡುತ್ತಿಲ್ಲ, ಅವರೇ ಭವಿಷ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ​ ಪೋಸ್ಟ್ ಮಾಡಿಕೊಂಡಿದ್ದಾರೆ.

  • 23 Jul 2026 06:21 PM (IST)

    IND vs ZIM 1st T20 Live: ಭಾರತಕ್ಕೆ 126 ರನ್‌ಗಳ ಗುರಿ

    ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಜಿಂಬಾಬ್ವೆ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 125 ರನ್‌ಗಳಿಗೆ ಸೀಮಿತಗೊಳಿಸಿದರು. ಪ್ರಿನ್ಸ್ ಯಾದವ್ ಮತ್ತು ಮಯಾಂಕ್ ಯಾದವ್ ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ರವಿ ಬಿಷ್ಣೋಯ್ ಮತ್ತು ಶಿವಂ ದುಬೆ ಕೂಡ ತಲಾ ಒಂದು ವಿಕೆಟ್ ಪಡೆದರು.

  • 23 Jul 2026 06:17 PM (IST)

    IND vs ZIM 1st T20 Live: ಏಳನೇ ವಿಕೆಟ್ ಪತನ

    ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ಗಳು ಬಿದ್ದವು. ಮಾಧೇವೆರೆ ನಂತರ ಕ್ರೀಸ್‌ಗೆ ಬಂದ ಬ್ರಾಡ್ ಇವಾನ್ಸ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದರು. ಪ್ರಿನ್ಸ್ ಯಾದವ್ ವಿಕೆಟ್ ಪಡೆದರು.

  • 23 Jul 2026 06:07 PM (IST)

    IND vs ZIM 1st T20 Live: 17.2 ಓವರ್‌ಗಳಲ್ಲಿ 100 ರನ್ ಪೂರ್ಣ

    ಜಿಂಬಾಬ್ವೆ 17.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 101 ರನ್ ಗಳಿಸಿದೆ. ವೆಸ್ಲಿ ಮಾಧೇವೆರೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು 32 ರನ್ ಗಳಿಸಿದ್ದಾರೆ. ಮರುಮಾನಿ ಕೂಡ 11 ರನ್ ಗಳಿಸಿದ್ದಾರೆ.

  • 23 Jul 2026 06:03 PM (IST)

    ಕಾಂಗ್ರೆಸ್​ ಸಂಸದರ ಸಭೆ ಕರೆದ ರಾಹುಲ್​ ಗಾಂಧಿ

    ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದ. ಸಂಸತ್ ಅಧಿವೇಶದಲ್ಲೂ ಸಹ ಕಾಂಗ್ರೆಸ್ ಧ್ವನಿ ಎತ್ತಿದೆ. ಹೀಗಾಗಿ ಅಧಿವೇಶವನ್ನು ನಾಳೆಗೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಇದೀಗ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಸಂಸದರಿಗೆ ದಿಢೀರ್ ಬುಲಾವ್ ನೀಡಿದ್ದು, ಕೆಲವೇ ಹೊತ್ತಿನಲ್ಲಿ ದೆಹಲಿಯ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಯಲಿದೆ.

  • 23 Jul 2026 06:00 PM (IST)

    IND vs ZIM 1st T20 Live: 15 ಓವರ್‌ ಪೂರ್ಣ

    ಜಿಂಬಾಬ್ವೆ ತನ್ನ ಇನ್ನಿಂಗ್ಸ್‌ನ 15 ಓವರ್‌ಗಳನ್ನು ಪೂರ್ಣಗೊಳಿಸಿದ್ದು, ಕೊನೆಯ ಐದು ಓವರ್‌ಗಳು ಬಾಕಿ ಉಳಿದಿವೆ. ಆತಿಥೇಯರು 5 ವಿಕೆಟ್‌ಗಳಿಗೆ 78 ರನ್‌ಗಳಿಸಿದ್ದಾರೆ. ಮರುಮಾನಿ 9 ಮತ್ತು ಮಾಧೆವೆರೆ 12 ರನ್ ಗಳಿಸಿದ್ದಾರೆ.

  • 23 Jul 2026 05:30 PM (IST)

    IND vs ZIM 1st T20 Live: 10 ಓವರ್‌ಗಳಲ್ಲಿ ಜಿಂಬಾಬ್ವೆ 46/4

    ಜಿಂಬಾಬ್ವೆ ಇನ್ನಿಂಗ್ಸ್‌ನ 10 ಓವರ್‌ಗಳು ಮುಗಿದಿವೆ. ಸ್ಕೋರ್ ನಾಲ್ಕು ವಿಕೆಟ್‌ಗಳಿಗೆ 46. ಮಾಧೇವೆರೆ 5 ಮತ್ತು ರಯಾನ್ ಬರ್ಲ್ 12 ರನ್ ಗಳಿಸಿದ್ದಾರೆ.

  • 23 Jul 2026 05:27 PM (IST)

    ಹಾಸಿಗೆ ಗೋಡೌನ್ ನಲ್ಲಿ ಅಗ್ನಿ ಅವಘಡ

    ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿ ಬಳಿಯ ಹಾಸಿಗೆ ಗೋಡೌನ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಗೋಡೌನ್ ನಲ್ಲಿ ಕಾರ್ಮಿಕರು ಕೂಡಲೇ ಆಚೆ ಓಡೋಡಿ ಬಂದಿದ್ದಾರೆ. ಇದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

  • 23 Jul 2026 05:11 PM (IST)

    ಮುಳಬಾಗಿಲು ರೆಕಾರ್ಡ್ ರೂಮ್​ನ ಮೂವರು ಸಿಬ್ಬಂದಿ ಸಸ್ಪೆಂಡ್

    ಮುಳಬಾಗಿಲು ತಾಲೂಕು ಕಚೇರಿಗೆ ಖಾಸಗಿ ವ್ಯಕ್ತಿಗಳು ಪ್ರವೇಶ ಹಿನ್ನೆಲೆಯಲ್ಲಿ ರೆಕಾರ್ಡ್ ರೂಮ್​ನ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ಕೋಲಾರ ಜಿಲ್ಲಾಧಿಕಾರಿ ಡಾ.ಎ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಮುಳಬಾಗಿಲು ತಾಲೂಕು ಕಚೇರಿಗೆ ಖಾಸಗಿ ವ್ಯಕ್ತಿಗಳು ಪ್ರವೇಶ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಬೆನ್ನಲ್ಲೇ ಮೂವರು ಸಿಬ್ಬಂದಿ ಅಮಾನತು ಮಾಡಲಾಗಿದೆ.ತಾಲೂಕು ಕಚೇರಿಯ ರೆಕಾರ್ಡ್ ರೂಮ್​ನ FDA ತೌಫಿಕ್ ಅಹ್ಮದ್, ಸಿಬ್ಬಂದಿ ವೆಂಕಟಸ್ವಾಮಿ ಹಾಗೂ ಎ.ಸುಮಾ ಎನ್ನುವರನ್ನು ಅಮಾನತು ಮಾಡಲಾಗಿದೆ.

  • 23 Jul 2026 05:06 PM (IST)

    IND vs ZIM 1st T20 Live: ಮಾಯಾಂಕ್​ಗೆ 2ನೇ ವಿಕೆಟ್

    ಜಿಂಬಾಬ್ವೆ ತಂಡ ಮೂರನೇ ವಿಕೆಟ್ ಕಳೆದುಕೊಂಡಿತು. ಮಾಯಾಂಕ್ ಯಾದವ್ ಈ ಬಾರಿ, ಡಿಯೋನ್ ಮೈಯರ್ಸ್ (6) ಅವರನ್ನು ಔಟ್ ಮಾಡಿದರು.

  • 23 Jul 2026 04:57 PM (IST)

    IND vs ZIM 1st T20 Live: ಎರಡನೇ ವಿಕೆಟ್ ಪತನ

    ಜಿಂಬಾಬ್ವೆ ಎರಡನೇ ವಿಕೆಟ್ ಪತನವಾಯಿತು. ಪ್ರಿನ್ಸ್ ಯಾದವ್ ಬೌಲಿಂಗ್​ನಲ್ಲಿ ಬೆನ್ ಕರನ್ ಕೇವಲ 10 ರನ್ ಗಳಿಸಿ ಔಟಾದರು.

  • 23 Jul 2026 04:39 PM (IST)

    ಪ್ರಧಾನಿ ನರೇಂದ್ರ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ

    ನೀಟ್ ಪರೀಕ್ಷೆ ಸೋರಿಕೆ ವಿರುದ್ದ ಕ್ರಮ ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವನ್ನು ಡಿಸಿಎಂ ಡಾ ಜಿ ಪರಮೇಶ್ವರ್ ಖಂಡಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ವೈಫಲ್ಯ ಮತ್ತು ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುತ್ತಿರುವ ನಡೆಯನ್ನು ಪತ್ರದಲ್ಲಿ ಪ್ರಶ್ನಿಸಿದ್ದಾರೆ.ನೀಟ್ ಹಿಂತೆದುಕೊಳ್ಳಿ ಮತ್ತು ಪಾರದರ್ಶಕತೆ ಮತ್ತು ಅರ್ಹತೆಯ ಆಧಾರದ ಸಿಇಟಿಯನ್ನು ಮರುಸ್ಥಾಪಿಸಿ ಕಾಲಮಿತಿಯಲ್ಲಿ ಪಾರದರ್ಶಕ ತನಿಖೆಗೆ ಕ್ರಮವಹಿಸಿ ಎಂದು ಒತ್ತಾಯಿಸಿದ್ದಾರೆ. ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಹಾಗೂ ಹೋರಾಟದಲ್ಲಿ ಗಾಯಗೊಂಡವರಿಗೆ ಪರಿಹಾರ ಒದಗಿಸಬೇಕು. ಲಾಠಿಚಾರ್ಜ್‌ ಹಾಗೂ ಅಶ್ರುವಾಯು ದಾಳಿಗೆ ಹೊಣೆಗಾರರು ಯಾರು ಎಂಬುದನ್ನು ತಿಳಿಸಿ.ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಜೊತೆ ಅರ್ಥಪೂರ್ಣ ಸಂವಾದ ನಡೆಸಿ ನಮ್ಮ ಶಿಕ್ಷಣ ವ್ಯವಸ್ಥೆ ಮೇಲಿನ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಿ. ಪ್ರಶ್ನಿಸುತ್ತಿರುವ ನಮ್ಮ ಯುವಜನತೆಗೆ ಉತ್ತರ ಪಡೆಯುವ ಹಕ್ಕಿದೆ . ಬ್ಯಾರಿಕೇಡ್‌ಗಳನ್ನು ತೆಗೆಯಿರಿ ಮಾತುಕತೆ ಮೂಲಕ ಬಗೆಹರಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • 23 Jul 2026 04:37 PM (IST)

    IND vs ZIM 1st T20 Live: ಮೊದಲ ಎಸೆತದಲ್ಲೇ ವಿಕೆಟ್

    ಜಿಂಬಾಬ್ವೆ ತಂಡವು ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಸ್ಟಾರ್ ಓಪನರ್ ಬ್ರಿಯಾನ್ ಬೆನೆಟ್ ಔಟಾದರು. ವೇಗದ ಬೌಲರ್ ಮಯಾಂಕ್ ಯಾದವ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು.

  • 23 Jul 2026 04:21 PM (IST)

    IND vs ZIM 1st T20 Live: ಜಿಂಬಾಬ್ವೆ ತಂಡ

    ಬ್ರಿಯಾನ್ ಬೆನೆಟ್, ಬೆನ್ ಕರ್ರನ್ (ಚೊಚ್ಚಲ ಪಂದ್ಯ), ಡಿಯೋನ್ ಮೈಯರ್ಸ್, ಸಿಕಂದರ್ ರಝಾ (ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ (ಚೊಚ್ಚಲ ಪಂದ್ಯ), ರಿಚರ್ಡ್ ನಾಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ.

  • 23 Jul 2026 04:21 PM (IST)

    IND vs ZIM 1st T20 Live: ಭಾರತ ತಂಡ

    ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ ( ಚೊಚ್ಚಲ ಪಂದ್ಯ) ಮತ್ತು ಮಯಾಂಕ್ ಯಾದವ್.

  • 23 Jul 2026 04:06 PM (IST)

    IND vs ZIM 1st T20 Live: ಟಾಸ್ ಗೆದ್ದ ಟೀಂ ಇಂಡಿಯಾ

    ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - Jul 23,2026 4:05 PM

Follow Us