Neeraj Chopra: ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ನೀರಜ್ ಚೋಪ್ರಾ ಕೈ ತಪ್ಪಿದ ಅಗ್ರಸ್ಥಾನ

Diamond League 2024 Fina: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.49 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಡೈಮಂಡ್ ಲೀಗ್ ಜಾವೆಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಆದರೆ ಇಲ್ಲಿ ಮೊದಲ ಸ್ಥಾನ ಕೈ ತಪ್ಪಿರುವುದು ಕೇವಲ 1 ಸೆಂಟಿ ಮೀಟರ್ ಅಂತರದಿಂದ ಎಂಬುದು ವಿಶೇಷ.

Neeraj Chopra: ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ನೀರಜ್ ಚೋಪ್ರಾ ಕೈ ತಪ್ಪಿದ ಅಗ್ರಸ್ಥಾನ
Neeraj Chopra
Follow us
ಝಾಹಿರ್ ಯೂಸುಫ್
|

Updated on:Sep 15, 2024 | 7:45 AM

ಬೆಲ್ಜಿಯಂನ ಬ್ರಸೆಲ್​​ನಲ್ಲಿ ನಡೆದ ಡೈಮಂಡ್ ಲೀಗ್​ ಜಾವೆಲಿನ್ ಥ್ರೋ ಫೈನಲ್​​ನಲ್ಲಿ ನೀರಜ್ ಚೋಪ್ರಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಅ್ಯಂಡರ್ಸನ್ ಪೀಟರ್ಸ್ 87.87 ಮೀಟರ್ ದೂರಕ್ಕೆ ಭರ್ಜಿ ಎಸೆದು ಮೊದಲ ಸ್ಥಾನ ಪಡೆದರೆ, ನೀರಜ್ ಚೋಪ್ರಾ 87.86 ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಅಂದರೆ ಇಲ್ಲಿ ಮೊದಲ ಸ್ಥಾನ ಹಾಗೂ ದ್ವಿತೀಯ ಸ್ಥಾನಗಳ ನಡುವಣ ವ್ಯತ್ಯಾಸ ಕೇವಲ 0.01 ಸೆಂಟಿ ಮೀಟರ್ ಮಾತ್ರ. ಈ ಕೂದಲೆಳೆಯ ಅಂತರದಿಂದ ನೀರಜ್ ಚೋಪ್ರಾ ಅಗ್ರಸ್ಥಾನವನ್ನು ಕಳೆದುಕೊಂಡರು.

ಗ್ರೆನೇಡಾದ ಅ್ಯಂಡರ್ಸನ್ ಪೀಟರ್ಸ್ ತಮ್ಮ ಮೊದಲ ಪ್ರಯತ್ನದಲ್ಲೇ 87.87 ಮೀಟರ್ ದೂರ ಕ್ರಮಿಸಿದರೆ, ನೀರಜ್ ಚೋಪ್ರಾ 3ನೇ ಪ್ರಯತ್ನದ ಮೂಲಕ 87.86 ಮೀಟರ್​ಗಳ ಗುರಿ ತಲುಪಿದ್ದರು. ಇನ್ನು ಜರ್ಮನಿಯ ಜೂಲಿಯನ್ ವೆಬರ್ ಮೊದಲ ಪ್ರಯತ್ನದಲ್ಲಿ ಎಸೆದ 85.97 ಮೀಟರ್​ ದೂರದೊಂದಿಗೆ ಮೂರನೇ ಸ್ಥಾನ ಪಡೆದರು.

ಡೈಮಂಡ್ ಲೀಗ್ 2024 ಜಾವೆಲಿನ್ ಥ್ರೋ ಫಲಿತಾಂಶ:

  1. ಅ್ಯಂಡರ್ಸನ್ ಪೀಟರ್ಸ್ – 87.87 ಮೀ (1ನೇ ಪ್ರಯತ್ನ)
  2. ನೀರಜ್ ಚೋಪ್ರಾ – 87.86 ಮೀ (3ನೇ ಪ್ರಯತ್ನ)
  3. ಜೂಲಿಯನ್ ವೆಬರ್ – 85.97 ಮೀ (1 ನೇ ಪ್ರಯತ್ನ)
  4. ಆಂಡ್ರಿಯನ್ ಮರ್ಡೇರೆ – 82.79 ಮೀ (1ನೇ ಪ್ರಯತ್ನ)
  5. ಜೆಂಕಿ ಡೀನ್ ರಾಡೆರಿಕ್ – 80.37 ಮೀ (4ನೇ ಪ್ರಯತ್ನ)
  6. ಆರ್ತುರ್ ಫೆಲ್ಫ್ನರ್ – 79.86 ಮೀ (5 ನೇ ಪ್ರಯತ್ನ)
  7. ತಿಮೋತಿ ಹರ್ಮನ್ – 76.46 ಮೀ (6ನೇ ಪ್ರಯತ್ನ)

ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ:

ಸ್ವಿಟ್ಜರ್ಲೆಂಡ್‌ನ ಲೂಝನ್​ನಲ್ಲಿ ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಸೀಸನ್ ಬೆಸ್ಟ್ ಥ್ರೋ ಎಸೆದಿದ್ದರು. 89.49 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಭಾರತೀಯ ತಾರೆ ದ್ವಿತೀಯ ಸ್ಥಾನವನ್ನು ಪಡೆದಿದ್ದರು. ಅಂದರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ಎಸೆದಿದ್ದ ನೀರಜ್ ಡೈಮಂಡ್ ಲೀಗ್​ನಲ್ಲಿ 89.49 ಮೀಟರ್ ದೂರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ 26ರ ಹರೆಯದ ಗ್ರೆನಡಾದ ಅ್ಯಂಡರ್ಸನ್ ಪೀಟರ್ಸ್ ಅವರು 90.81 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದರು.

ನೀರಜ್ ಚೋಪ್ರಾ ಜಾವೆಲಿನ್ ಥ್ರೋ ವಿಡಿಯೋ:

ಆದರೆ ಈ ಬಾರಿ ಅರ್ಹತಾ ಸುತ್ತಿನ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ನೀರಜ್ ಚೋಪ್ರಾ ವಿಫಲರಾದರು. ಅತ್ತ ಕ್ವಾಲಿಫೈಯರ್ ರೌಂಡ್​ನಲ್ಲಿ 90 ಮೀಟರ್​ಗಿಂತ ದೂರದ ಸಾಧನೆ ಮಾಡಿದ್ದ ಅ್ಯಂಡರ್ಸನ್ ಪೀಟರ್ಸ್ ಈ ಬಾರಿ 87.87 ಮೀಟರ್​ನೊಂದಿಗೆ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

Published On - 7:40 am, Sun, 15 September 24