Sign In

By signing in or creating an account, you agree with Associated Broadcasting Company's Terms & Conditions and Privacy Policy.

Neeraj Chopra: 90 ಮೀಟರ್ ಜಸ್ಟ್ ಮಿಸ್: ಮತ್ತೆ ದ್ವಿತೀಯ ಸ್ಥಾನ ಪಡೆದ ನೀರಜ್ ಚೋಪ್ರಾ

Neeraj Chopra: ಡೈಮಂಡ್ ಲೀಗ್​ನಲ್ಲಿ ನೀರಜ್ ಚೋಪ್ರಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಮೊದಲ ಎಸೆತದಲ್ಲಿ ಕೇವಲ 82.10 ದೂರಕ್ಕೆ ಎಸೆಯಲಷ್ಟೇ ಶಕ್ತರಾಗಿದ್ದರು. ಅಲ್ಲದೆ ಐದನೇ ಎಸೆತದವರೆಗೆ ಅವರು 86 ಮೀಟರ್ ದೂರವನ್ನು ಕ್ರಮಿಸಿರಲಿಲ್ಲ. ಆದರೆ ನಿರ್ಣಾಯಕವಾಗಿದ್ದ ಕೊನೆಯ ಪ್ರಯತ್ನದಲ್ಲಿ ಭರ್ಜಿಯನ್ನು 89.49 ಮೀಟರ್​ ದೂರಕ್ಕೆ ತಲುಪಿಸಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಸಫಲರಾದರು.

Neeraj Chopra: 90 ಮೀಟರ್ ಜಸ್ಟ್ ಮಿಸ್: ಮತ್ತೆ ದ್ವಿತೀಯ ಸ್ಥಾನ ಪಡೆದ ನೀರಜ್ ಚೋಪ್ರಾ
Neeraj Chopra
Follow us
ಝಾಹಿರ್ ಯೂಸುಫ್
|

Updated on: Aug 24, 2024 | 7:41 AM

ಸ್ವಿಟ್ಜರ್ಲೆಂಡ್‌ನ ಲೂಝನ್​ನಲ್ಲಿ ನಡೆದ ಡೈಮಂಡ್ ಲೀಗ್​ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ಭರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಈ ಬಾರಿ 89.49 ಮೀಟರ್ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾದರು. ಇದಾಗ್ಯೂ ತಮ್ಮ ಬಹುಕಾಲ ಕನಸು 90 ಮೀಟರ್ ಮುಟ್ಟುವಲ್ಲಿ ವಿಫಲರಾಗಿದ್ದಾರೆ.

ಇನ್ನು ಡೈಮಂಡ್ ಲೀಗ್​ ಸ್ಪರ್ಧೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ 26ರ ಹರೆಯದ ಗ್ರೆನಡಾದ ಅ್ಯಂಡರ್ಸನ್ ಪೀಟರ್ಸ್ ಅವರು 90.81 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದರು. ಹಾಗೆಯೇ ನೀರಜ್ ಚೋಪ್ರಾ ದ್ವಿತೀಯ ಸ್ಥಾನ ಪಡೆದರೆ, ಜರ್ಮನಿಯ ಜೂಲಿಯನ್ ವೆಬರ್ 87.08 ಮೀಟರ್ ಎಸೆದು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ವಿಶೇಷ ಎಂದರೆ 89.49 ಮೀಟರ್ ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ಈ ಸೀಸನ್​ನ ಬೆಸ್ಟ್ ಥ್ರೋ ಎಸೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 90 ಮೀಟರ್​ನ ಅಸುಪಾಸು ತಲುಪಿರುವ ಭಾರತೀಯ ತಾರೆ ಮುಂಬರುವ ದಿನಗಳಲ್ಲಿ ಹೊಸ ಮೈಲುಗಲ್ಲನ್ನು ದಾಟುವ ವಿಶ್ವಾಸ ಮೂಡಿಸಿದ್ದಾರೆ. 2022 ರಲ್ಲಿ ನಡೆದ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 89.94 ಮೀಟರ್ ದೂರಕ್ಕೆ ಎಸೆದಿದ್ದರು. ಇದು ಅವರು ಕೆರಿಯರ್ ಬೆಸ್ಟ್ ಥ್ರೋ ಆಗಿದೆ. ಇದೀಗ ಮತ್ತೊಮ್ಮೆ 89 ಮೀಟರ್​ಗೂ ಅಧಿಕ ದೂರಕ್ಕೆ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಕೊನೆಯ ಪ್ರಯತ್ನದಲ್ಲಿ ಸಫಲ:

ಡೈಮಂಡ್ ಲೀಗ್​ನಲ್ಲಿ ನೀರಜ್ ಚೋಪ್ರಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಮೊದಲ ಎಸೆತದಲ್ಲಿ ಕೇವಲ 82.10 ದೂರಕ್ಕೆ ಎಸೆಯಲಷ್ಟೇ ಶಕ್ತರಾಗಿದ್ದರು. ಅಲ್ಲದೆ ಐದನೇ ಎಸೆತದವರೆಗೆ ಅವರು 86 ಮೀಟರ್ ದೂರವನ್ನು ಕ್ರಮಿಸಿರಲಿಲ್ಲ. ಆದರೆ ನಿರ್ಣಾಯಕವಾಗಿದ್ದ ಕೊನೆಯ ಪ್ರಯತ್ನದಲ್ಲಿ ಭರ್ಜಿಯನ್ನು 89.49 ಮೀಟರ್​ ದೂರಕ್ಕೆ ತಲುಪಿಸಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಸಫಲರಾದರು.

  • ಮೊದಲ ಪ್ರಯತ್ನ: 82.10 ಮೀ.
  • ಎರಡನೇ ಪ್ರಯತ್ನ: 83.21 ಮೀ
  • ಮೂರನೇ ಪ್ರಯತ್ನ: 83.13 ಮೀ.
  • ನಾಲ್ಕನೇ ಪ್ರಯತ್ನ: 82.34 ಮೀ.
  • ಐದನೇ ಪ್ರಯತ್ನ: 85.58 ಮೀ.
  • ಆರನೇ ಪ್ರಯತ್ನ: 89.49 ಮೀ.

ದಾಖಲೆ ಬರೆದ ಪೀಟರ್ಸ್:

ಡೈಮಂಡ್ ಲೀಗ್​ನಲ್ಲಿ 90.61 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದಿರುವ ಅ್ಯಂಡರ್ಸನ್ ಪೀಟರ್ಸ್ ಹೊಸ ದಾಖಲೆ ಬರೆದಿದ್ದಾರೆ. ಈ ಲೀಗ್​ನಲ್ಲಿ ಈ 2015 ರಲ್ಲಿ ಕೆಶೋರ್ನ್ ವಾಲ್ಕಾಟ್ 90.16 ಮೀ. ದೂರಕ್ಕೆ ಭರ್ಜಿ ಎಸೆದು ದಾಖಲೆ ನಿರ್ಮಿಸಿದ್ದರು. ಇದೀಗ 90.61 ಮೀಟರ್​​ನೊಂದಿಗೆ ಪೀಟರ್ಸ್ ಹೊಸ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
ಗ್ಯಾರಂಟಿ ಯೋಜನೆಗಳ ಬಗ್ಗೆ ತನ್ನದೇನೂ ತಕರಾರಿಲ್ಲವೆಂದ ಶರಣಗೌಡ ಕಂದ್ಕೂರ್
ಗ್ಯಾರಂಟಿ ಯೋಜನೆಗಳ ಬಗ್ಗೆ ತನ್ನದೇನೂ ತಕರಾರಿಲ್ಲವೆಂದ ಶರಣಗೌಡ ಕಂದ್ಕೂರ್
Video: ಕೇಂದ್ರ ಸಚಿವರ ಜತೆ ರೈತ ಮುಖಂಡರ ಮಾತುಕತೆ
Video: ಕೇಂದ್ರ ಸಚಿವರ ಜತೆ ರೈತ ಮುಖಂಡರ ಮಾತುಕತೆ
ಮಜಾ ಟಾಕೀಸ್​ಗೆ ಮಜಾ ಹೆಚ್ಚಿಸೋಕೆ ಬಂದ ಕ್ರಿಕೆಟ್ ಕಾಮೆಂಟೇಟರ್ಸ್
ಮಜಾ ಟಾಕೀಸ್​ಗೆ ಮಜಾ ಹೆಚ್ಚಿಸೋಕೆ ಬಂದ ಕ್ರಿಕೆಟ್ ಕಾಮೆಂಟೇಟರ್ಸ್
ಬಿಜೆಪಿ ಯಾವತ್ತಿಗೂ ಮುಸ್ಲಿಂ ವಿರೋಧಿ ಪಕ್ಷ ಅಲ್ಲ: ವಿಜಯೇಂದ್ರ
ಬಿಜೆಪಿ ಯಾವತ್ತಿಗೂ ಮುಸ್ಲಿಂ ವಿರೋಧಿ ಪಕ್ಷ ಅಲ್ಲ: ವಿಜಯೇಂದ್ರ
ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್
ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್
ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ
ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ
ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ
ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ