ಸೀಮಿತ ಓವರ್ ಪಂದ್ಯಗಳಿಗೆ ರಾಹುಲ್ ಮೊದಲ ಆದ್ಯತೆ ವಿಕೆಟ್​ಕೀಪರ್-ಬ್ಯಾಟ್ಸ್​ಮನ್: ರಾತ್ರಾ

ಸೀಮಿತ ಓವರ್ ಪಂದ್ಯಗಳಿಗೆ ರಾಹುಲ್ ಮೊದಲ ಆದ್ಯತೆ ವಿಕೆಟ್​ಕೀಪರ್-ಬ್ಯಾಟ್ಸ್​ಮನ್: ರಾತ್ರಾ

ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪ್ರತಿಷ್ಠಿತ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಇದೇ ಶುಕ್ರವಾರದಂದು ಸೀಮಿತ ಓವರ್ ಪಂದ್ಯಗಳ ಸರಣಿ ಆರಂಭವಾಗಲಿದ್ದು ಟೀಮ್ ಇಂಡಿಯಾದ ಆಟಗಾರರು ಸಿಡ್ನಿಯಲ್ಲಿ ಭರ್ಜರಿ ತಾಲೀಮಿನಲ್ಲಿ ತೊಡಗಿದ್ದಾರೆ. ಇತ್ತ ಭಾರತದಲ್ಲಿ ಒಡಿಐ ಮತ್ತು ಟಿ20ಐ ಪಂದ್ಯಗಳಿಗೆ ಟೀಮಿನ ಕಾಂಪೊಸಿಷನ್ ಹೇಗಿರಬೇಕೆಂಬ ಚರ್ಚೆಗಳು ಶುರುವಿಟ್ಟುಕೊಂಡಿವೆ. ಚರ್ಚೆಯ ಪ್ರಮುಖ ಭಾಗ ಕರ್ನಾಟಕದ ಕೆಎಲ್ ರಾಹುಲ್ ಆಗಿರುವುದು ವಿಶೇಷ. ಹಲವು ಮಾಜಿ ಆಟಗಾರರು ಸೀಮಿತ ಓವರ್​ಗಳ ಪಂದ್ಯಗಳಲ್ಲಿ ರಾಹುಲ್​ರನ್ನು ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ ಆಗಿ ಆಡಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ. ಅದರರ್ಥ ಶಾರ್ಟರ್ ಫಾರ್ಮಾಟ್​ಗೆ […]

Arun Belly

|

Nov 25, 2020 | 3:34 PM

ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪ್ರತಿಷ್ಠಿತ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಇದೇ ಶುಕ್ರವಾರದಂದು ಸೀಮಿತ ಓವರ್ ಪಂದ್ಯಗಳ ಸರಣಿ ಆರಂಭವಾಗಲಿದ್ದು ಟೀಮ್ ಇಂಡಿಯಾದ ಆಟಗಾರರು ಸಿಡ್ನಿಯಲ್ಲಿ ಭರ್ಜರಿ ತಾಲೀಮಿನಲ್ಲಿ ತೊಡಗಿದ್ದಾರೆ. ಇತ್ತ ಭಾರತದಲ್ಲಿ ಒಡಿಐ ಮತ್ತು ಟಿ20ಐ ಪಂದ್ಯಗಳಿಗೆ ಟೀಮಿನ ಕಾಂಪೊಸಿಷನ್ ಹೇಗಿರಬೇಕೆಂಬ ಚರ್ಚೆಗಳು ಶುರುವಿಟ್ಟುಕೊಂಡಿವೆ.

ಚರ್ಚೆಯ ಪ್ರಮುಖ ಭಾಗ ಕರ್ನಾಟಕದ ಕೆಎಲ್ ರಾಹುಲ್ ಆಗಿರುವುದು ವಿಶೇಷ. ಹಲವು ಮಾಜಿ ಆಟಗಾರರು ಸೀಮಿತ ಓವರ್​ಗಳ ಪಂದ್ಯಗಳಲ್ಲಿ ರಾಹುಲ್​ರನ್ನು ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ ಆಗಿ ಆಡಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ. ಅದರರ್ಥ ಶಾರ್ಟರ್ ಫಾರ್ಮಾಟ್​ಗೆ ಆಯ್ಕೆಯಾಗಿರುವ ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಅವರ ಬದಲು ರಾಹುಲ್​ಗೆ ವಿಕೆಟ್​ಕೀಪಿಂಗ್ ಮಾಡುವ ಜವಾಬ್ದಾರಿಯನ್ನೂ ಹೊರಸಿದರೆ ಆಗ ಟೀಮಿನಲ್ಲಿ ಹೆಚ್ಚುವರಿ ಬ್ಯಾಟ್ಸ್​ಮನ್ ಇಲ್ಲವೇ ಬೌಲರ್​ನನ್ನು ಆಡಿಸಲು ಅವಕಾಶವಿರುತ್ತದೆ ಅಂತ ಅವರು ಹೇಳುತ್ತಾರೆ.

ಅವರು ಹೇಳುತ್ತಿರುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ರಾಹುಲ್ ಬ್ಯಾಟಿಂಗ್ ಬಗ್ಗೆ ಯಾರೂ ಕಾಮೆಂಟ್ ಮಾಡುವಂತಿಲ್ಲ. ತಮ್ಮ ಕರೀಯರ್​ ಆರಂಭದಲ್ಲಿ ಬ್ಯಾಟ್​ ಮಾಡುವಾಗ ಅವರು ಕೊಂಚ ಧಾವಂತ ಪ್ರದರ್ಶಿಸಿ ವಿಕೆಟ್​ ಒಪ್ಪಿಸಿಕೊಡುತ್ತಿದ್ದರು. ಆದರೆ, ಈಗ ಅವರು ಸಾಕಷ್ಟು ಪ್ರಬುದ್ಧರಾಗಿದ್ದಾರೆ ಮತ್ತು ಹೊಣೆಗಾರಿಕೆಯನ್ನು ಅರಿತಿದ್ದಾರೆ. ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ನಾಯಕತ್ವ ಅವರನ್ನು ಮತ್ತಷ್ಟು ಪಕ್ವವಾಗಿಸಿದೆ.

ಈ ಬಾರಿಯ ಐಪಿಎಲ್​ ಸೀಸನಲ್ಲಿ ರಾಹುಲ್ ಅತಿಹೆಚ್ಚು ರನ್ ಗಳಿಸಿ ಕಿತ್ತಳೆ ವರ್ಣದ ಕ್ಯಾಪನ್ನು ಗಿಟ್ಟಿಸಿಕೊಂಡರು. 10 ಕ್ಯಾಚ್​ಗಳನ್ನು ಹಿಡಿದ ಅವರ ವಿಕೆಟ್ ಹಿಂದಿನ ಪ್ರದರ್ಶನವೂ ಉತ್ತಮವಾಗಿತ್ತು. ಅವರ ನಾಯಕತ್ವದ ಬಗ್ಗೆಯೂ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರಾಹುಲ್ ಇದುವರೆಗೆ 32 ಒಡಿಐ ಪಂದ್ಯಗಳನ್ನಾಡಿದ್ದು. 5 ಶತಕ ಮತ್ತು 7 ಅರ್ಧಶತಗಳೊಂದಿಗೆ 47.6 ಸರಾಸರಿಯಲ್ಲಿ 1,239 ರನ್ ಗಳಿಸಿದ್ದಾರೆ. ಹಾಗೆಯೇ, ಟಿ20ಐ ಕ್ರಿಕೆಟ್​ನಲ್ಲಿ ಆಡಿರುವ 42 ಪಂದ್ಯಗಳಿಂದ 45.6 ಸರಾಸರಿಯಲ್ಲಿ 1,461 ರನ್ ಗಳಿಸಿದ್ದಾರೆ ಮತ್ತು ಇದರಲ್ಲಿ 2 ಶತಕ ಮತ್ತು 11 ಅರ್ಧಶತಕ ಸೇರಿವೆ.

ಅಜಯ ರಾತ್ರಾ ನಿಮಗೆ ನೆನಪಿರಬಹುದು. ಹರಿಯಾಣಾದ ಈ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ 2002 ರಲ್ಲಿ ಭಾರತದ ಪರ 6 ಟೆಸ್ಟ್ ಮತ್ತು 12 ಒಡಿಐಗಳನ್ನಾಡಿದರು. ಟೆಸ್ಟ್​ನಲ್ಲಿ ಒಂದು ಶತಕ ಬಾರಿಸಿದ್ದನ್ನು ಬಿಟ್ಟರೆ ಹೇಳಿಕೊಳ್ಳುವಂಥ ಸಾಧನೆ ಅವರು ಮಾಡಿಲ್ಲವಾದರೂ ಕ್ರೀಡೆಯ ವಿಷ್ಲೇಷಣೆ ಚೆನ್ನಾಗಿ ಮಾಡುತ್ತಾರೆ. ಕ್ರೀಡಾ ವೆಬ್​ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾತ್ರಾ, ‘‘ಪ್ರಸ್ತುತ ಫಾರ್ಮ್ ಗಮನಿಸಿದ್ದೇಯಾದರೆ, ರಾಹುಲ ಒಡಿಐ ಮತ್ತು ಟಿ20ಐ ಪಂದ್ಯಗಳಿಗೆ ಪ್ರಥಮ ಆದ್ಯತೆಯ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ಆಗಿ ಆಡುವ ಇಲೆವೆನ್​ನಲ್ಲಿರಬೇಕು. ಬ್ಯಾಟಿಂಗ್ ಕ್ರಮಾಂಕದಲ್ಲಿ ಅವರು ಫ್ಲೆಕ್ಸಿಬಲ್ ಆಗಿದ್ದಾರೆ, ಯಾವುದೇ ಕ್ರಮಾಂಕದಲ್ಲಿ ಅಡಿಸಿದರೂ ರನ್ ಗಳಿಸುತ್ತಾರೆ. ಅಷ್ಟು ಮಾತ್ರವಲ್ಲ, ರಾಹುಲ್ ಟೀಮು ಯಾವುದೇ ಸ್ಥಿತಿಯಲ್ಲಿದ್ದರೂ ತಮ್ಮ ನೈಜ್ಯ ಆಟವಾಡಬಲ್ಲರು. ಅವರು ಜ್ಯೂನಿಯರ್ ಲೆವೆಲ್​ನಲ್ಲಿ ಅವರು ವಿಕೆಟ್​ಕೀಪಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಅದರಲ್ಲೂ ರಾಹುಲ್ ಪರಿಣಿತರು,’’ ಎಂದು ಹೇಳಿದ್ದಾರೆ.

ಸ್ಯಾಮ್ಸನ್ ಮತ್ತು ಪಂತ್ ಸ್ಥಿರವಾದ ಪ್ರದರ್ಶನಗಳನ್ನು ನೀಡುತ್ತಿಲ್ಲವಾದ್ದರಿಂದ ಪ್ರಯೋಗಗಳನ್ನು ನಡೆಸುವ ಬದಲು ಕನ್ನಡಿಗನ್ನು ಆಡಿಸಬೇಕೆಂದು ರಾತ್ರಾ ಹೇಳಿದ್ದಾರೆ.

ಲೆಜೆಂಡರಿ ಆರಂಭ ಆಟಗಾರ ಸುನಿಲ್ ಗವಾಸ್ಕರ್ ಅವರ ಮಗ ಮತ್ತು ಭಾರತದ ಪರ ಕೇವಲ 11 ಒಂದು ದಿನದ ಪಂದ್ಯಗಳನ್ನು ಮಾತ್ರ ಆಡಿದ ರೋಹನ್ ಗವಾಸ್ಕರ್ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಲಿಲ್ಲ. ಆದರೆ ಅವರು ರಾತ್ರಾರಂತೆಯೇ, ರಾಹುಲ್ ಅವರನ್ನು ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಮೊದಲ ಆಯ್ಕೆಯ ವಿಕೆಟ್​ಕೀಪರ್ ಬ್ಯಾಟ್ಸ್​ಮನ್​ ಆಗಿ ಆಡಬೇಕೆಂದು ವಾದಿಸುತ್ತಾರೆ.

‘‘ಟಿ20 ಕ್ರಿಕೆಟ್​ನಲ್ಲಿ ರಾಹುಲ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳಲ್ಲೊಬ್ಬರು. ಅವರ ವಿಕೆಟ್​ಕೀಪಿಂಗ್ ಸಹ ಕಳಪೆಯಾಗಿಲ್ಲ. ಆದರೆ ಅವರು ಎರಡೂ ಜವಾಬ್ದಾರಿಗಳನ್ನು ನಿಭಾಯಿಸಲು ತಯಾರಾಗಿದ್ದಾರೆಯೇ? ಈ ಪ್ರಶ್ನೆಗೆ ಅವರು ಮಾತ್ರ ಉತ್ತರಿಸಬೇಕು. ವಿಕೆಟ್​ಕೀಪರ್​ ಆಗಿರುವವನು ಉತ್ತಮ ಬ್ಯಾಟ್ಸ್​ಮನ್ ಕೂಡ ಆಗಿರಬೇಕಿರುವುದು ಇವತ್ತಿನ ಅವಶ್ಯಕತೆಯಾಗಿದೆ. ರಾಹುಲ್ ಫುಟ್ಸ್ ದ ಬಿಲ್. ಆದರೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಾಗಿರೋದು ರಾಹುಲ್ ಮಾತ್ರ. ನನ್ನ ವೈಯಕ್ತಿಕ ಅಭಿಪ್ರಾಯ ಕೇಳುವುದಾದರೆ, ಅವರು ಬೆಸ್ಟ್ ಬೆಟ್. ನಾನು ಗಮನಿಸಿರುವಂತೆ, ವಿಕೆಟ್​ಕೀಪಿಂಗ್ ಅವರ ಬ್ಯಾಟಿಂಗ್ ಮೇಲೆ ಪ್ರಭಾವ ಬೀರಿಲ್ಲ. ಹಿ ಈಸ್ ರೆಡಿ ಫಾರ್ ದಿ ಜಾಬ್,’’ ಎಂದು ರೋಹನ್ ಹೇಳಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada