U17 FIFA World Cup: ಅಂಡರ್- 17 ಫಿಫಾ ವಿಶ್ವಕಪ್‌ ಆಯೋಜನೆಗೆ 2300 ಕೋಟಿ ರೂ. ನೀಡಿದ ಪ್ರಧಾನಿ ಮೋದಿ..!

U17 FIFA World Cup: 2017ರಲ್ಲಿ ಪುರುಷರ ಫಿಫಾ ಅಂಡರ್-17 ವಿಶ್ವಕಪ್ ನಡೆದ ರೀತಿಯಲ್ಲಿಯೇ ಇದನ್ನು ಆಯೋಜಿಸಲಾಗುವುದು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2300 ಕೋಟಿ ಬಜೆಟ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

U17 FIFA World Cup: ಅಂಡರ್- 17 ಫಿಫಾ ವಿಶ್ವಕಪ್‌ ಆಯೋಜನೆಗೆ 2300 ಕೋಟಿ ರೂ. ನೀಡಿದ ಪ್ರಧಾನಿ ಮೋದಿ..!
U17 FIFA World Cup
Follow us
TV9 Web
| Updated By: ಪೃಥ್ವಿಶಂಕರ

Updated on:Sep 14, 2022 | 4:53 PM

ಭಾರತೀಯ ಫುಟ್ಬಾಲ್‌ ಫೆಡರೇಶನ್‌ (AIFF) ಮೇಲಿನ ನಿಷೇಧವನ್ನು ಜಾಗತಿಕ ಫುಟ್ಬಾಲ್‌ ಆಡಳಿತ ಸಮಿತಿ(FIFA) ಈ ಹಿಂದೆ ಹಿಂತೆಗೆದುಕೊಂಡಿತ್ತು. ಇದರೊಂದಗೆ ಭಾರತದಲ್ಲಿ ನಿಗದಿಯಾಗಿದ್ದ ಅಂಡರ್‌-17 ಫಿಫಾ ಮಹಿಳಾ ವಿಶ್ವಕಪ್‌ ನಿಗದಿಯಂತೆ ಅಕ್ಟೋಬರ್‌ನಲ್ಲಿ ನಡೆಯಲಿದೆ. ಈಗ ನಿಷೇಧವನ್ನು ತೆಗೆದುಹಾಕಿದ ನಂತರ ಭಾರತ, ಅಂಡರ್-17 ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಸಂಪುಟ ಸಭೆಯಲ್ಲಿ ಈ ಟೂರ್ನಿಯನ್ನು ಆಯೋಜಿಸಲು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಅಲ್ಲದೆ ಫಿಫಾ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, ಭಾರತ ಈ ಹಿಂದೆ 2017ರಲ್ಲಿ 17 ವರ್ಷದೊಳಗಿನವರ ಪುರುಷರ ವಿಶ್ವಕಪ್‌ ಪಂದ್ಯಾವಳಿಯನ್ನು ಆಯೋಜಿಸಿತ್ತು.

17 ವರ್ಷದೊಳಗಿನವರ ಫಿಫಾ ವಿಶ್ವಕಪ್‌ನ ಮುಖ್ಯಾಂಶಗಳು

  1. 17 ವರ್ಷದೊಳಗಿನವರ ವಿಶ್ವಕಪ್ ಆಯೋಜನೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಕ್ರೀಡಾ ಸಚಿವ,  2017ರಲ್ಲಿ ಪುರುಷರ ಫಿಫಾ ಅಂಡರ್-17 ವಿಶ್ವಕಪ್ ನಡೆದ ರೀತಿಯಲ್ಲಿಯೇ ಇದನ್ನು ಆಯೋಜಿಸಲಾಗುವುದು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2300 ಕೋಟಿ ಬಜೆಟ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
  2. ಅಕ್ಟೋಬರ್ 11 ರಿಂದ 30 ರವರೆಗೆ ದೇಶದ ಮೂರು ನಗರಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ಈ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಅಲ್ಲದೆ ಈ ಪಂದ್ಯಾವಳಿಯಲ್ಲಿ ಒಟ್ಟು 32 ಪಂದ್ಯಗಳು ನಡೆಯಲಿದ್ದು, ನವಿ ಮುಂಬೈ, ಗೋವಾ ಮತ್ತು ಭುವನೇಶ್ವರ್ ಈ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
  3. ಫುಟ್‌ಬಾಲ್‌ನಲ್ಲಿ ಆಸಕ್ತಿ ಹೊಂದಿರುವ ಮಹಿಳಾ ಆಟಗಾರರಿಗೆ ಇದರಿಂದ ಉತ್ತೇಜನ ಸಿಗುತ್ತದೆ ಎಂದಿರುವ ಅನುರಾಗ್, ಇದರೊಂದಿಗೆ ಫುಟ್ಬಾಲ್ ಆಟವು ದೇಶದಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತದೆ. ಇದಲ್ಲದೇ ದೇಶದ ಮಹಿಳೆಯರು ಇದರಿಂದ ಹೆಚ್ಚು ಪ್ರೇರಿತರಾಗುತ್ತಾರೆ ಎಂದಿದ್ದಾರೆ.
  4. ಆತಿಥೇಯ ಭಾರತ ಫುಟ್‌ಬಾಲ್ ತಂಡ ‘ಪವರ್‌ಹೌಸ್’ ಬ್ರೆಜಿಲ್, ಮೊರಾಕ್ಕೊ ಮತ್ತು ಯುಎಸ್‌ ತಂಡಗಳೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಜರ್ಮನಿ, ನೈಜೀರಿಯಾ, ಚಿಲಿ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಹಾಲಿ ಚಾಂಪಿಯನ್ ಸ್ಪೇನ್ ಸಿ ಗುಂಪಿನಲ್ಲಿ ಕೊಲಂಬಿಯಾ, ಚೀನಾ ಮತ್ತು ಮೆಕ್ಸಿಕೊದೊಂದಿಗೆ ಸ್ಥಾನ ಪಡೆದಿದೆ. ಜಪಾನ್, ತಾಂಜಾನಿಯಾ, ಕೆನಡಾ ಮತ್ತು ಫ್ರಾನ್ಸ್ ತಂಡಗಳು ಡಿ ಗುಂಪಿನಲ್ಲಿ ಸ್ಥಾನ ಪಡೆದಿವೆ.
  5. ಭಾರತ ತಂಡ ಅಕ್ಟೋಬರ್ 11 ರಂದು (ಮಂಗಳವಾರ) ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಎರಡನೇ ಪಂದ್ಯ ಮೊರಾಕೊ ವಿರುದ್ಧ ಅಕ್ಟೋಬರ್ 14 ರಂದು (ಶುಕ್ರವಾರ) ಇದೇ ಮೈದಾನದಲ್ಲಿ ನಡೆಯಲಿದೆ. ಆತಿಥೇಯರ ಅಂತಿಮ ಗುಂಪು ಹಂತದ ಪಂದ್ಯ ಬ್ರೆಜಿಲ್ ವಿರುದ್ಧ ಅಕ್ಟೋಬರ್ 17 (ಸೋಮವಾರ) ನಡೆಯಲಿದೆ.
  6. ಭಾರತ ಎರಡನೇ ಬಾರಿಗೆ ಫಿಫಾ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, 2017 ರಲ್ಲಿ 17 ವರ್ಷದೊಳಗಿನವರ ಪುರುಷರ ವಿಶ್ವಕಪ್ ಅನ್ನು ಆಯೋಜಿಸಿತ್ತು.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:53 pm, Wed, 14 September 22

ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ