ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಿಜಾಬ್ ನಿಷೇಧ: ಸರ್ಕಾರದ ಕ್ರಮವನ್ನು ವಿರೋಧಿಸಿದ ಮುಸ್ಲಿಂ ಕ್ರೀಡಾಪಟು ಟೀನಾ ರಹೀಮಿ
ಫ್ರಾನ್ಸ್ ಸರ್ಕಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಿಜಾಬ್ ನಿಷೇಧ ಮಾಡಿದೆ. ಈ ಬಗ್ಗೆ ಇದೀಗ ಟೀಕೆ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಕ್ರೀಡಾಪಟುಗಳು ಹಾಗೂ ಅವರ ತರಬೇತುದಾರರು ಹಿಜಾಬ್ ಹಾಕುವಂತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಈ ಕ್ರಮವನ್ನು ಮುಸ್ಲಿಂ ಕ್ರೀಡಾಪಟು ಟೀನಾ ರಹೀಮಿ ಸೇರಿದಂತೆ ಅನೇಕ ಮುಸ್ಲಿಂ ಕ್ರೀಡಾಪಟು ವಿರೋಧಿಸಿದ್ದಾರೆ.

ಫ್ರಾನ್ಸ್ ಸರ್ಕಾರ ಈ ಭಾರೀ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಹಿಜಾಬ್ ಹಾಕುವುದನ್ನು ನಿಷೇಧಿಸಿದೆ. ಮುಸ್ಲಿಂ ಕ್ರೀಡಾಪಟುಗಳು ಯಾವುದೇ ಕಾರಣಕ್ಕೂ ಹಿಜಾಬ್ ಹಾಕಿಕೊಂಡು ಬರಬಾರದು ಎಂದು ಹೇಳಿದೆ. ಇದರ ಜತೆಗೆ ಕ್ರೀಡಾಪಟುಗಳ ತರಬೇತಿದಾರರೂ ಕೂಡ ಹಿಜಾಬ್ ಧರಿಸಿಕೊಂಡು ಒಲಿಂಪಿಕ್ಸ್ ಬರದಂತೆ ನಿಷೇಧ ಏರಿದೆ. ಫ್ರೆಂಚ್ ಸರ್ಕಾರದ ಈ ನಿರ್ಧಾರಕ್ಕೆ ಕ್ರೀಡಾಪಟುಗಳು ಮತ್ತು ಮಾನವ ಹಕ್ಕು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ.
ಈ ಕ್ರಮ ಒಲಿಂಪಿಕ್ ಕ್ರೀಡಾಕೂಟದ ಸ್ವಾತಂತ್ರ್ಯ ಹಾಗೂ ಸಮಾನತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಹಿಜಾಬ್ ನಿಷೇಧದ ಸರ್ಕಾರ ಕ್ರಮವನ್ನು ಫ್ರಾನ್ಸ್ ಕ್ರೀಡಾ ಸಚಿವ ಅಮೆಲಿ ಔಡೆಯಾ-ಕ್ಯಾಸ್ಟೆರಾ ಅವರು ಸಮರ್ಥಿಸಿಕೊಂಡಿದ್ದಾರೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ಜಾತ್ಯತೀತತೆಯನ್ನು ಕಾಪಾಡಿಕೊಳ್ಳಲು ಮತ್ತು ಕ್ರೀಡಾಕೂಟಗಳಲ್ಲಿ ಸಮಾನತೆಯನ್ನು ಕಾಣಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯನ್ ಬಾಕ್ಸರ್ ಟೀನಾ ರಹೀಮಿ ಅವರು ತಮ್ಮ ಎಲ್ಲ ಪಂದ್ಯದ ಸಮಯದಲ್ಲೂ ಹಿಜಾಬ ಧರಿಸಿದ್ದರು. ಇನ್ನು ಫ್ರಾನ್ಸ್ ಸರ್ಕಾರ ಈ ಕ್ರಮವನ್ನು ಅವರು ಕೂಡ ವಿರೋಧಿಸಿದ್ದಾರೆ. ನಾನು ನನ್ನ ಧರ್ಮದ ಭಾಗವಾಗಿ ಹಿಜಾಬ್ ಧರಿಸಲು ಆಯ್ಕೆ ಮಾಡುತ್ತೇನೆ. ಹಾಗೆ ಮಾಡಲು ನನಗೆ ಹೆಮ್ಮೆ ಇದೆ. ಕ್ರೀಡೆಯಲ್ಲಿ ಇಂತಹ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ನಿರ್ಧಾರವನ್ನು ಟೀನಾ ರಹೀಮಿ ಮಾತ್ರವಲ್ಲದೆ ಅನೇಕ ಮುಸ್ಲಿಂ ಕ್ರೀಡಾಪಟುಗಳು ವಿರೋಧಿಸಿದ್ದಾರೆ. ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಮುಖ್ಯ. ಈ ನಿರ್ಧಾರವನ್ನು ಹ್ಯೂಮನ್ ರೈಟ್ಸ್ ವಾಚ್‌ನಂತಹ ಸಂಸ್ಥೆಗಳು ಟೀಕಿಸಿವೆ, ಈ ನಿರ್ಧಾರದಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತದೆ. ಕ್ರೀಡೆಯಲ್ಲಿ ಸಾಮರ್ಥ್ಯವೇ ಹೊರತು ಧಾರ್ಮಿಕ ವಿಚಾರ ಮುಖ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 7 ತಿಂಗಳ ಗರ್ಭಿಣಿಯ ಸಾಹಸಗಾಥೆ; ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಈಜಿಪ್ಟ್ ಫೆನ್ಸರ್ ನಾಡಾ ಹಫೀಜ್
ಇನ್ನು ಈ ಬಗ್ಗೆ ವಿಶ್ವಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಫ್ರಾನ್ಸ್ ಈ ನಿರ್ಧಾರವನ್ನು ಬೆಂಬಲಿಸಿದೆ. ಈ ನಿಷೇಧವು ತರಬೇತುದಾರರು ಮತ್ತು ತೀರ್ಪುಗಾರರಿಗೂ ಕೂಡ ಅನ್ವಯಿಸುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Thu, 1 August 24