ಸರಣಿ ಟಿ-ಟ್ವೆಂಟಿ ಗೆದ್ದು ಇತಿಹಾಸ ಸೃಷ್ಟಿಸೋಕೆ ರೆಡಿಯಾದ ಭಾರತ

ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಟಿ-ಟ್ವೆಂಟಿ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಸರಣಿಯಲ್ಲಿ ಆಡಿರೋ ನಾಲ್ಕು ಪಂದ್ಯಗಳಲ್ಲೂ ಕಪ್ಪುಕುದುರೆಗಳನ್ನ ಭರ್ಜರಿಯಾಗಿ ಬೇಟೆಯಾಡಿರೋ ಕೊಹ್ಲಿ ಸೈನ್ಯ, ಅಂತಿಮ ಕದನದಲ್ಲೂ ಕೇನ್ ಪಡೆಯನ್ನ ರಣಬೇಟೆಯಾಡೋದಕ್ಕೆ ಸಜ್ಜಾಗಿದೆ. ಇಷ್ಟೇ ಅಲ್ಲ, ವಿಶ್ವ ಕ್ರಿಕೆಟ್​ನಲ್ಲಿ ಇದುವರೆಗೂ ಯಾವೊಂದು ತಂಡವೂ ಮಾಡದಿರೋ ಸಾಧನೆ ಮಾಡಿ, ಕಿವೀಸ್ ನೆಲದಲ್ಲಿ ಅದ್ವಿತೀಯ ಇತಿಹಾಸ ಸೃಷ್ಟಿಸೋಕೆ ರೆಡಿಯಾಗಿದೆ. ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆಯೋಕೆ ಕೊಹ್ಲಿ ರೆಡಿ! ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-ಟ್ವೆಂಟಿಯಲ್ಲಿ […]

ಸರಣಿ ಟಿ-ಟ್ವೆಂಟಿ ಗೆದ್ದು ಇತಿಹಾಸ ಸೃಷ್ಟಿಸೋಕೆ ರೆಡಿಯಾದ ಭಾರತ
Follow us
ಸಾಧು ಶ್ರೀನಾಥ್​
|

Updated on:Feb 02, 2020 | 11:34 AM

ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಟಿ-ಟ್ವೆಂಟಿ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಸರಣಿಯಲ್ಲಿ ಆಡಿರೋ ನಾಲ್ಕು ಪಂದ್ಯಗಳಲ್ಲೂ ಕಪ್ಪುಕುದುರೆಗಳನ್ನ ಭರ್ಜರಿಯಾಗಿ ಬೇಟೆಯಾಡಿರೋ ಕೊಹ್ಲಿ ಸೈನ್ಯ, ಅಂತಿಮ ಕದನದಲ್ಲೂ ಕೇನ್ ಪಡೆಯನ್ನ ರಣಬೇಟೆಯಾಡೋದಕ್ಕೆ ಸಜ್ಜಾಗಿದೆ. ಇಷ್ಟೇ ಅಲ್ಲ, ವಿಶ್ವ ಕ್ರಿಕೆಟ್​ನಲ್ಲಿ ಇದುವರೆಗೂ ಯಾವೊಂದು ತಂಡವೂ ಮಾಡದಿರೋ ಸಾಧನೆ ಮಾಡಿ, ಕಿವೀಸ್ ನೆಲದಲ್ಲಿ ಅದ್ವಿತೀಯ ಇತಿಹಾಸ ಸೃಷ್ಟಿಸೋಕೆ ರೆಡಿಯಾಗಿದೆ.

ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆಯೋಕೆ ಕೊಹ್ಲಿ ರೆಡಿ! ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-ಟ್ವೆಂಟಿಯಲ್ಲಿ 6ವಿಕೆಟ್​ಗಳ ಗೆಲುವು ದಾಖಲಿಸಿದ್ದ ಭಾರತ, ಎರಡನೇ ಟಿ-ಟ್ವೆಂಟಿಯಲ್ಲಿ 7ವಿಕೆಟ್​ಗಳಿಂದ ಕಿವೀಸ್ ತಂಡವನ್ನ ಮಣಿಸಿತ್ತು. ಇನ್ನೂ ರಣರೋಚಕಯಿಂದ ಮೂರನೇ ಟಿ-ಟ್ವೆಂಟಿ ಪಂದ್ಯ ಮತ್ತು ನಾಲ್ಕನೇ ಟಿ-ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತ ಸೂಪರ್ ಓವರ್​ನಲ್ಲಿ ಗೆದ್ದು ಬೀಗಿತ್ತು. ಇದ್ರೊಂದಿಗೆ ಸರಣಿಯಲ್ಲಿ 4-0ಅಂತರದಿಂದ ಭಾರತ ಮುನ್ನಡೆ ಸಾಧಿಸಿತ್ತು. ಇದೀಗ ಬೇ ಓವಲ್​ನಲ್ಲಿ ನಡೆಯೋ ಅಂತಿಮ ಟಿಟ್ವೆಂಟಿ ಪಂದ್ಯವನ್ನೂ ಗೆದ್ದು ಕೊಹ್ಲಿ ಸೈನ್ಯ ಸರಣಿ ಕ್ಲೀನ್ ಸ್ವೀಪ್ ಮಾಡೋ ತವಕದಲ್ಲಿದೆ.

ಈಗಾಗಲೇ ಸರಣಿ ಗೆದ್ದು, ಕಿವೀಸ್ ನಾಡಲ್ಲಿ ಚರಿತ್ರೆ ಸೃಷ್ಟಿಸಿರೋ ಕೊಹ್ಲಿ ಪಡೆ, ಸರಣಿ ಕ್ಲೀನ್ ಸ್ವೀಪ್ ಮಾಡಿ ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆಯಲು ಭರ್ಜರಿ ತಂತ್ರವನ್ನೇ ಹೆಣೆದಿದ್ದಾರೆ. ಒಂದು ವೇಳೆ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ರೆ, ವಿಶ್ವ ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಕ್ಯಾಪ್ಟನ್ ಕೊಹ್ಲಿ ಹೊಸ ದಾಖಲೆಯನ್ನ ಸೃಷ್ಟಿಸಲಿದ್ದಾರೆ. ಹೀಗಾಗಿ ಅಂತಿಮ ಟಿ-ಟ್ವೆಂಟಿ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದ್ದು, ಹೈವೊಲ್ಟೇಜ್ ಪಡೆದುಕೊಂಡಿದೆ.

ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳೋದಕ್ಕೆ ಕೇನ್ ಗ್ಯಾಂಗ್ ಹೋರಾಟ! ದಕ್ಷಿಣ ಆಫ್ರಿಕಾ ನಂತರ ಎರಡನೇ ಚೋಕರ್ಸ್ ತಂಡ ಅಂದ್ರೆ, ನ್ಯೂಜಿಲೆಂಡ್. ಮೊದೆಲೆರೆಡು ಪಂದ್ಯಗಳನ್ನ ಸೋತಿದ್ದ ಕಿವೀಸ್, ಮೂರನೇ ಮತ್ತು ನಾಲ್ಕನೇ ಪಂದ್ಯವನ್ನ ಸೂಪರ್ ಓವರ್​ನಲ್ಲಿ ಸೋತು ಚೋಕರ್ಸ್ ಎಂಬ ಹಣೆಪಟ್ಟಿಯನ್ನ ಕಟ್ಟಿಕೊಂಡಿದೆ. ವೆಲ್ಲಿಂಗ್ಟನ್​ನಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನ ನ್ಯೂಜಿಲೆಂಡ್, ಹೀನಾಯವಾಗಿ ಸೋಲ್ತು.

ಇದ್ರೊಂದಿಗೆ ಕೇನ್ ಪಡೆ ಸರಣಿಯಲ್ಲಿ 4ಪಂದ್ಯಗಳನ್ನ ಸೋತು, ತವರಿನಲ್ಲಿ ಭಾರಿ ಮುಖಭಂಗಕ್ಕೀಡಾಗಿದೆ. ಹೀಗಾಗಿ ಇಂದಿನ ಪಂದ್ಯ ನ್ಯೂಜಿಲೆಂಡ್​ಗೆ ಗೆದ್ದು ಮಾನ ಉಳಿಸಿಕೊಳ್ಳೋದ್ರ ಜೊತೆಗೆ, ಸರಣಿ ಕ್ಲೀನ್ ಸ್ವೀಪ್ ಅವಮಾನದಿಂದ ತಪ್ಪಿಸಿಕೊಳ್ಳೋಕೆ ನಿರ್ಣಾಯಕ ಪಂದ್ಯವಾಗಿದೆ.

ಎಚ್ಚರಿಕೆಯಿಂದ ಕಣಕ್ಕಿಳಿಯಬೇಕಿದೆ ಕೊಹ್ಲಿ ಪಡೆಯ ಬ್ಯಾಟ್ಸ್​ಮನ್! ಕಳೆದ ಪಂದ್ಯದಲ್ಲಿ ಗೆದ್ದಿದ್ದು ಬೌಲರ್​ಗಳ ಪರಾಕ್ರಮದಿಂದ ಅನ್ನೋದನ್ನ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ಮರೆಯುವಂತಿಲ್ಲ. ಹೀಗಾಗಿ ಸರಣಿ ಕ್ಲೀನ್ ಸ್ವೀಪ್ ಮೇಲೆ ಕಣ್ಣೀಟ್ಟಿರೋ ಕೊಹ್ಲಿ ಪಡೆಯ ಬ್ಯಾಟ್ಸ್​ಮನ್​ಗಳು, ಇಂದು ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಮಾಡ್ಬೇಕಿದೆ. ಬೇ ಓವಲ್​ನಲ್ಲೂ ಕ್ಯಾಪ್ಟನ್ ಕೊಹ್ಲಿ, ಪ್ಲೇಯಿಂಗ್ ಇಲೆವೆನ್​ನಲ್ಲಿ ಸರ್ಜರಿ ಮಾಡೊ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ, ಇಂದು ಸಹ ಕಣಕ್ಕಿಳಿಯೋ ಸಾಧ್ಯತೆ ಕಡಿಮೆಯಿದೆ.

ನಾಲ್ಕನೇ ಟಿ-ಟ್ವೆಂಟಿಯಲ್ಲಿ ಒಂದು ಸಿಕ್ಸರ್ ಬಾರಿಸಿ ಔಟ್ ಆಗಿದ್ದ ಸಂಜು ಸ್ಯಾಮ್ಸನ್, ಮತ್ತೆ ಕನ್ನಡಿಗ ಕೆ.ಎಲ್. ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್​ಗೆ ಕೊಕ್ ಕೊಡೋ ಸಾಧ್ಯತೆಯಿದ್ದು, ಚೈನಾಮನ್ ಸ್ಪಿನ್ನರ್ ಕುಲ್​ದೀಪ್ ಯಾದವ್ ಕಣಕ್ಕಿಳಿಯಬಹುದು.

ಕೇನ್ ಕಮ್​ಬ್ಯಾಕ್.. ಕಿವೀಸ್​ಗೆ ಸಿಗುತ್ತಾ ಗೆಲುವು? ಭುಜದ ನೋವಿನಿಂದ ಬಳಲುತ್ತಿದ್ದ ನಾಯಕ ಕೇನ್ ವಿಲಿಯಮ್ಸನ್ ಕೊನೇ ಟಿ-ಟ್ವೆಂಟಿ ಪಂದ್ಯಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ವೆಲ್ಲಿಂಗ್ಟನ್​ನಲ್ಲಿ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಸೋಲು ಕಂಡಿದ್ದ ಕಿವೀಸ್​ಗೆ, ಕೇನ್ ವಿಲಿಯಮ್ಸನ್ ಆಗಮನದಿಂದಾಗಿ ಕೊಂಚ ಮಟ್ಟಿಗೆ ಚೇತರಿಕೆ ಕಂಡುಕೊಳ್ಳುವಂತೆ ಮಾಡಿದೆ. ಅಲ್ಲದೇ, ಸ್ಟಾರ್ ಬ್ಯಾಟ್ಸ್​ಮನ್ ರಾಸ್ ಟೇಲರ್ ಮ್ಯಾಚ್ ಫಿನಿಶಿಂಗ್ ಮಾಡುವಲ್ಲಿ ಫ್ಲಾಪ್ ಆಗ್ತಿದ್ದು, ಟಿಮ್ ಸೌಥಿ ಕಳಪೆ ಪ್ರದರ್ಶನ ನೀಡ್ತಿರೋದು ಕಿವೀಸ್ ತಂಡಕ್ಕೆ ಭಾರಿ ಹಿನ್ನಡೆಯಾಗ್ತಿದೆ.

ಬೇ ಓವಲ್ ಮೈದಾನ, ನ್ಯೂಜಿಲೆಂಡ್ ಪಾಲಿಗೆ ಲಕ್ಕಿ ಪಿಚ್. ಕಿವೀಸ್ ಬೇ ಓವಲ್​ನಲ್ಲಿ ಆಡಿರೋ 6ಟಿ-ಟ್ವೆಂಟಿ ಪಂದ್ಯಗಳ ಪೈಕಿ 4ಪಂದ್ಯಗಳನ್ನ ಗೆದ್ದು ಬೀಗಿದೆ. ಆದ್ರೆ, ಟೀಂ ಇಂಡಿಯಾ ಈ ಮೈದಾನದಲ್ಲಿ ಒಂದೇ ಒಂದು ಟಿ-ಟ್ವೆಂಟಿ ಪಂದ್ಯವನ್ನೂ ಆಡಿಲ್ಲ. ಇನ್ನು ಬೇ ಓವಲ್ ಮೈದಾನ ಬ್ಯಾಟಿಂಗ್ ಫ್ರೆಂಡ್ಲಿಯಾಗಿದ್ದು, ಇಂದು ರನ್ ಮಳೆ ಹರಿಯೋ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಪಂದ್ಯಕ್ಕೂ ಮುನ್ನ ಟಿಕ್ ಟಾಕ್.. ಏನಿದು ಚಹಲ್ ಬಿಟ್ಟ ಹುಳ? ಇನ್ನು ಗೆಲುವಿನ ಜೋಷ್​ನಲ್ಲಿರೋ ಟೀಮ್ ಇಂಡಿಯಾ ಆಟಗಾರರು, ಕೊನೆ ಟಿಟ್ವೆಂಟಿ ಪಂದ್ಯಕ್ಕೂ ಮುನ್ನ ಟಿಕ್ ಟಾಕ್ ಮಾಡಿ ಎಂಜಾಯ್ ಮಾಡಿದ್ದಾರೆ. ಯಜ್ವಿಂದರ್ ಚಹಲ್, ಶ್ರೇಯಸ್ ಐಯ್ಯರ್, ಶಿವಂ ದುಬೆ ಸ್ಟೆಪ್ ಹಾಕಿರೋ ಟಿಕ್ ಟಾಕ್ ವೀಡಿಯೋ ಹರಿ ಬಿಟ್ಟಿದ್ದಾರೆ.

ಈ ಮೂವರ ಜೊತೆ ಇನ್ನೊಬ್ಬ ಕ್ರಿಕೆಟಿಗನೂ ಇದ್ದು, ತನ್ನ ಗುರುತೇ ಸಿಗಬರಾದು ಅಂತಾ ತಲೆತಗ್ಗಿಸಿಕೊಂಡೇ ಸ್ಟೆಪ್ ಹಾಕಿದ್ದಾನೆ. ಚಹಲ್ ಪೋಸ್ಟ್ ಮಾಡಿರೋ ಈ ವೀಡಿಯೋದಲ್ಲಿರೋ ಈತ ಯಾರು ಅನ್ನೋದೇ ಗೊತ್ತಾಗ್ತಿಲ್ಲ. ಆತ ಯಾರು? ರೋಹಿತ್ ಶರ್ಮಾನಾ, ಇಲ್ಲಾ ರಿಷಬ್ ಪಂತಾ ಅಂತಾ ಅಭಿಮಾನಿಗಳು ಮೇಲಿಂದ ಮೇಲೆ ಪ್ರಶ್ನೆ ಮಾಡೋದಕ್ಕೆ ಶುರುಮಾಡಿದ್ದಾರೆ.

ಒಟ್ನಲ್ಲಿ 4ಪಂದ್ಯಗಳನ್ನ ಗೆದ್ದಿರೋ ಟೀಂ ಇಂಡಿಯಾ, ಕ್ಲೀನ್ ಸ್ವೀಪ್ ಮಾಡಿ ನ್ಯೂಜಿಲೆಂಡ್ ನೆಲದಲ್ಲಿ ಇತಿಹಾಸ ಸೃಷ್ಟಿಸೋ ತವಕದಲ್ಲಿದೆ. ಹಾಗೇ ಕಿವೀಸ್ ಕೂಡ ಪುಟಿದೆದ್ದ ಕೊಹ್ಲಿ ಪಡೆಗೆ ಸೋಲಿನ ರುಚಿ ತೋರಿಸಿ, ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗೋ ಆತುರದಲ್ಲಿದೆ. ಹೀಗಾಗಿ ಅಂತಿಮ ಟಿಟ್ವೆಂಟಿ ಪಂದ್ಯ ವಿಶ್ವ ದಾಖಲೆಯ ದೃಷ್ಟಿಯಿಂದ ತೀವ್ರ ಕುತೂಹಲ ಕೆರಳಿಸಿದೆ.

Published On - 11:27 am, Sun, 2 February 20

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು